ದಾವಣಗೆರೆ ಲೋಕಸಭಾ ಚುನಾವಣಾ ಕಣದಲ್ಲಿ 30 ಮಂದಿ! ಯಾವ ಪಕ್ಷದಿಂದ ಯಾರು ಸ್ಪಧೆ೯!
ದಾವಣಗೆರೆ ಲೋಕಸಭಾ ಕ್ಷೇತ್ರವು ಈ ಬಾರಿ ಸಾಕಷ್ಟು ಕುತೂಹಲ ಮೂಡಿಸಿದ್ದು ಈ ಮತ ಕ್ಷೇತ್ರದಲ್ಲಿ ಒಟ್ಟು 30 ಅಭ್ಯರ್ಥಿಗಳು ಚುನಾವಣೆಯಲ್ಲಿ ಸ್ಪಧಿ೯ಸುತ್ತಿದ್ದಾರೆ ಎಂಬುದು ಚುನಾವಣಾ ಆಯೋಗದ ಮೂಲಗಳಿಂದ ತಿಳಿದು ಬಂದಿದೆ.
ಅಖಾಡಕ್ಕೆ ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕ ಏಪ್ರಿಲ್ 19 ಆಗಿತ್ತು. ಅಂದಿಗೆ ಒಟ್ಟು 40 ಅಭ್ಯರ್ಥಿಗಳಿಂದ ಒಟ್ಟು 54 ನಾಮಪತ್ರಗಳ ಸಲ್ಲಿಕೆಯಾಗಿತ್ತು.
ಆದರೆ ಸಲ್ಲಿಕೆಯಾದ ನಾಮಪತ್ರಗಳನ್ನು ಪರಿಶೀಲಿಸಿದ ನಂತರ ಅದರಲ್ಲಿ 7 ನಾಮಪತ್ರಗಳು ಚುನಾವಣೆಯಲ್ಲಿ ಸ್ಪಧಿ೯ಸಲು ಸಾಧ್ಯವಾಗದೆ ಚುನಾವಣಾ ಆಯೋಗದಿಂದ ನಾಮಪತ್ರಗಳು ತಿರಸ್ಕರಿಸಲ್ಪಟ್ಟಿವೆ.
33 ನಾಮಪತ್ರಗಳು ಮಾತ್ರ ಅಹ೯!
ಉಳಿದ 33 ನಾಮಪತ್ರಗಳು ಸ್ವೀಕೃತವಾಗಿದ್ದವು. ಆದರೆ ಕಣದಿಂದ ಹಿಂದೆ ಸರಿಸಲು ಅಭ್ಯರ್ಥಿಗಳಿಗೆ ಇದೇ ಸೋಮವಾರ ಏಪ್ರಿಲ್ 22 ರವರೆಗೆ ಕೊನೆಯ ದಿನವಾಗಿತ್ತು.
ಸೋಮವಾರದಂದು ಒಟ್ಟು 3 ಜನ ಅಭ್ಯರ್ಥಿಗಳು ತಮ್ಮ ನಾಮಪತ್ರವನ್ನು ವಾಪಸ್ ಪಡೆದಿದ್ದು, ಚುನಾವಣಾ ಕಣದಿಂದ ಹಿಂದೆ ಸರಿದಿದ್ದಾರೆ.
ಹಾಗಾಗಿ ಇದೀಗ ದಾವಣಗೆರೆ ಲೋಕಸಭಾ ಕ್ಷೇತ್ರದಿಂದ 30 ಜನ ಚುನಾವಣಾ ಕಣದಲ್ಲಿದ್ದು, ದಾವಣಗೆರೆ ಮತಕ್ಷೇತ್ರದಲ್ಲಿ ತೀವ್ರ ಪೈಪೋಟಿಗೆ ಕಾರಣವಾಗಿದೆ.
ಅದರಲ್ಲೂ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ತಮ್ಮ ಪಕ್ಷದಿಂದ ಮಹಿಳಾ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿದ್ದು, ಒಬ್ಬರು ಸಚಿವರ ಪತ್ನಿಯಾಗಿದ್ದರೆ ಮತ್ತೊಬ್ಬರು ಪ್ರಸ್ತುತ ಲೋಕಸಭಾ ಸದಸ್ಯರ ಪತ್ನಿ.
ಹಾಗಾಗಿ ಈ ಬಾರಿ ದಾವಣಗೆರೆ ಕ್ಷೇತ್ರದ ಜನತೆ ಯಾರಿಗೆ ಮತ ನೀಡುತ್ತಾರೆ ಎಂಬುದು ತೀವ್ರ ಕುತೂಹಲ ಹುಟ್ಟಿಸಿದೆ.
ದಾವಣಗೆರೆ ಕ್ಷೇತ್ರದಲ್ಲಿ 30 ಅಭ್ಯರ್ಥಿಗಳು ಚುನಾವಣೆಗೆ ನಿಂತಿದ್ದು, ಯಾರು ಯಾವ ಪಕ್ಷದಿಂದ ಚುನಾವಣೆ ಎದುರಿಸುತ್ತಿದ್ದಾರೆ ಎಂಬುದನ್ನು ನೋಡೋಣ ಬನ್ನಿ.
*ತಿಪ್ಪೇಸ್ವಾಮಿ ಎ.ಕೆ- ಸೋಷಿಯಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ ಪಕ್ಷ
*ಡಾ.ಪ್ರಭಾ ಮಲ್ಲಿಕಾರ್ಜುನ್- ಭಾರತೀಯ ಕಾಂಗ್ರೆಸ್ ಪಕ್ಷ.
*ಈಶ್ವರ ಉತ್ತಮ ಪ್ರಜಾಕೀಯ ಪಕ್ಷ ,
*ಜಿ.ಎಸ್.ಗಾಯಿತ್ರಿ-ಭಾರತೀಯ ಜನತಾ ಪಾರ್ಟಿ ,
*ಹನುಮಂತಪ್ಪ-ಬಿ.ಎಸ್.ಪಿ ,
*ರುದ್ರೇಶ್ ಕೆ.ಹೆಚ್-ಸಮಾಜ ವಿಕಾಸ ಕ್ರಾಂತಿ,
*ವೀರೇಶ್.ಎಸ್- ರಾಣಿ ಚೆನ್ನಮ್ಮ ಪಾರ್ಟಿ , *ಎಂ.ಜಿ.ಶ್ರೀಕಾಂತ್ -ನವಭಾರತ ಸೇನಾ ,
*ದೊಡ್ಡಶ್ ಹೆಚ್.ಎಸ್- ಜನಹಿತ ಪಕ್ಷ
*ಎ.ಟಿ.ದಾದಾಖಲಂದರ್- ಕಂಟ್ರಿ ಸಿಟಿಜನ್ ಪಾರ್ಟಿ , *ಶ್ರೀನಿವಾಸ ಎಂ.ಸಿ ಭಾರತೀಯ ಪ್ರಜೆಗಳ ಕಲ್ಯಾಣ ಪಕ್ಷ
*ಕೆ.ಎಸ್.ವೀರಭದ್ರಪ್ಪ ಕೆ.ಆರ್.ಎಸ್.ನಿಂದ
ಇದಲ್ಲದೇ ಪಕ್ಷೇತರ ಅಭ್ಯರ್ಥಿಗಳು ಕೂಡ ಕಣದಲ್ಲಿದ್ದು, ಅವರ ಮಾಹಿತಿಯನ್ನು ಕೂಡ ಕೆಳಗೆ ಕೊಡಲಾಗಿದೆ!
* ವಿನಯ್ ಕುಮಾರ್ ಜಿ.ಬಿ,
*ಟಿ.ಜಬೀನ್ ತಾಜ್,
*ಎ.ಕೆ.ಗಣೇಶ್,
*ಬರ್ಕತ್ ಅಲಿ,
*ಮೊಹಮದ್ ಹಯಾತ್ ಎಂ,
*ಎಂ.ಟಿ.ಚಂದ್ರಣ್ಣ,
*ಸೈಯದ್ ಜಬೀವುಲ್ಲಾ ಕೆ,
*ರವಿನಾಯ್ಕ ಬಿ,
*ತಸ್ಲಿಮ್ ಬಾನು,
*ಪರ್ವೇಜ್ ಹೆಚ್,
*ರಶೀದ್ ಖಾನ್,
*ಸಲೀಮ್ ಎಸ್,
*ಮಂಜುನಾಥ ಎ.ಕೆ,
*ಅಬ್ದುಲ್ ನಜೀರ್ ಅಹ್ಮದ್,
*ಪೆದ್ದಪ್ಪ ಎಸ್,
*ಮೆಹಬೂಬ್ ಬಾಲು,
*ಜಿ.ಎಂ.ಬರ್ಕತ್ ಅಲಿ ಬಾ
*ಜಿ.ಎಂ.ಗಾಯಿತ್ರಿ,
ಈ 30 ಅಭ್ಯರ್ಥಿಗಳು ಅಂತಿಮ ಕಣದಲ್ಲಿದ್ದು, ಇಷ್ಟೊಂದು ಅಭ್ಯರ್ಥಿಗಳು ಕಣದಲ್ಲಿವುದರಿಂದ ಮತಗಳು ಒಡೆಯುವ ಸಾಧ್ಯತೆ ಹೆಚ್ಚಾಗಿದ್ದು, ಇದರಿಂದ ಪೈಪೋಟಿ ತೀವ್ರವಾಗಿರಲಿದೆ ಎನ್ನಲಾಗಿದೆ.