Loksabha Election: ಬಿಜೆಪಿಗೆ 220 ಕ್ಕೂ ಹೆಚ್ಚಿನ ಸೀಟು ಬರಲು ಸಾಧ್ಯವಿಲ್ಲ! ದಕ್ಷಿಣದಲ್ಲಿ ಬಿಜೆಪಿಗೆ ಕೇವಲ 20 ಸೀಟು! ಭವಿಷ್ಯ ನುಡಿದ ತೆಲಂಗಾಣ ಸಿಎಂ!
ದೇಶದಲ್ಲಿ ಲೋಕಸಭಾ ಚುನಾವಣಾ ಕಾವು ಜೋರಾಗಿದ್ದು ವಿರೋಧಪಕ್ಷಗಳ ವಿರುದ್ಧ ಕೆಂಡಕಾರುವುದು ಹಾಗೂ ತಮ್ಮ ಪಕ್ಷಗಳ ಅಭ್ಯರ್ಥಿಗಳ ಪರ ಪ್ರಚಾರ ಕಾರ್ಯ ನಡೆಸುವುದು ಎಲ್ಲೆಡೆ ಸಾಮಾನ್ಯವಾಗಿದೆ.
ಇದೇ ರೀತಿಯಲ್ಲಿ ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಅವರು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದು,
ಪ್ರಚಾರದ ವೇಳೆ ಅವರು ಲೋಕಸಭಾ ಚುನಾವಣೆ ಫಲಿತಾಂಶದ ಬಗ್ಗೆ ಭವಿಷ್ಯ ನುಡಿದಿದ್ದಾರೆ.
220 ಕ್ಕೆ ಸೀಮಿತವಾಗುತ್ತಾ ಬಿಜೆಪಿ!
ಹೌದು, ಈ ಬಾರಿಯ ಚುನಾವಣೆಯಲ್ಲಿ
ಎನ್ ಡಿಎಯ ಮೈತ್ರಿಕೂಟವು ಸಿಂಪಲ್ ಮೆಜಾರಿಟಿ ಸೀಟುಗಳಲ್ಲಿ ಗೆಲ್ಲುವುದು ಅಸಾಧ್ಯವೆಂದು ಹೇಳಿದ್ದಾರೆ. ಬಿಜೆಪಿ ಕಳೆದ ಬಾರಿ 300ಕ್ಕೂ ಹೆಚ್ಚು ಸೀಟುಗಳನ್ನು ಗೆದ್ದು
ಭರ್ಜರಿ ಜಯಗಳಿಸಿತ್ತು ಆದರೆ ಈ ಬಾರಿ ಬಿಜೆಪಿಗೆ 2 ಹಕ್ಕು ಹೆಚ್ಚು ಸೀಟು ಗೆಲ್ಲಲು ಸಾಧ್ಯವಿಲ್ಲ ಹಾಗೂ ಅದರ ಮಿತ್ರ ಪಕ್ಷಗಳನ್ನು ಸೇರಿ 220ಕ್ಕೂ ಹೆಚ್ಚು ಸೀಟುಗಳಲ್ಲಿ ಗೆಲ್ಲುವುದು ಅಸಾಧ್ಯ.
ಈ ಬಾರಿ ಬಿಜೆಪಿ ಹಾಗೂ ಮಿತ್ರ ಪಕ್ಷಗಳ ಗೆಲುವು ಕನಸಿನ ಮಾತು ಎಂದು ತೆಲಂಗಾಣ ಸಿಎಂ ಹೇಳಿದ್ದಾರೆ.
ಕನಾ೯ಟಕದಲ್ಲಿ ಹಿಡಿತ ಕಳೆದುಕೊಂಡಿತಾ ಬಿಜೆಪಿ!
ಅದರಲ್ಲೂ ಮುಖ್ಯವಾಗಿ ದಕ್ಷಿಣ ರಾಜ್ಯಗಳಲ್ಲಿ ಬಿಜೆಪಿ ಗೆಲುವು ತುಂಬಾ ಕಠಿಣವಾಗಿದ್ದು ಕಳೆದ ಬಾರಿ ಕರ್ನಾಟಕದಲ್ಲಿ ಬಿಜೆಪಿ ಕ್ಲೀನ್ ಸ್ವೀಪ್ ಮಾಡಿತ್ತು.
ಆದರೆ ಕಳೆದ ವರ್ಷ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ತೀವ್ರ ಮುಖಭಂಗವಾಗಿದೆ. ಕಾಂಗ್ರೆಸ್ ಪಕ್ಷದ ಉತ್ತಮ ಕೆಲಸ ಈ ಬಾರಿ ಕನಾ೯ಟಕದಲ್ಲಿ ಬಿಜೆಪಿಯನ್ನು ಸಂಕಷ್ಟಕ್ಕೆ ಗುರಿಯಾಗಿಸಿದ್ದು,
ಅಬ್ಬಬ್ಬಾ ಎಂದರೆ 13-14 ಸೀಟುಗಳಲ್ಲಿ ಗೆಲ್ಲಬಹುದು. ಉಳಿದಂತೆ ತೆಲಂಗಾಣದಲ್ಲಿ 2-3 ಹಾಗೂ ಆಂದ್ರಪ್ರದೇಶದಲ್ಲಿ 1 ಸೀಟು ಮಾತ್ರ ಗೆಲ್ಲಲು ಅವಕಾಶವಿದ್ದು, ಕೇರಳ ಹಾಗೂ ತಮಿಳುನಾಡಿನಲ್ಲಿ ಖಾತೆ ತೆರೆಯಲು ಕೂಡ ಸಾಧ್ಯವಿಲ್ಲ ಎಂದಿದ್ದಾರೆ.
ದಕ್ಷಿಣ ರಾಜ್ಯಗಳ 131 ರಲ್ಲಿ ಬಿಜೆಪಿಗೆ ಸಿಗಲಿದೆ ಕೇವಲ 20 ಸೀಟು!
ಅಲ್ಲದೇ ಮೋದಿ ಸಕಾ೯ರ ದಕ್ಷಿಣ ರಾಜ್ಯಗಳಿಗೆ ಪ್ರಾಶಸ್ತ್ಯ ನೀಡದಿರುವುದು ಮತದಾರರು ಗಮನಿಸಿದ್ದು, ಸಚಿವ ಸಂಪುಟದಲ್ಲಿ ಜೋಶಿ ಹಾಗೂ ಕಿಶನ್ ರೆಡ್ಡಿ ಬಿಟ್ಟರೆ ಬೇರೆ ಯಾರಿಗೂ ಸರಿಯಾದ ಸ್ಥಾನಮಾನ ಕೊಟ್ಟಿಲ್ಲ.
ಇದರಿಂದ 131 ಸೀಟುಗಳನ್ನು ಹೊಂದಿರುವ ದಕ್ಷಿಣ ರಾಜ್ಯಗಳಲ್ಲಿ ಕೇವಲ 20 ಸೀಟುಗಳಲ್ಲಿ ಗೆಲುವು ಸಾಧಿಸಲು ಮಾತ್ರ ಬಿಜೆಪಿಗೆ ಸಾಧ್ಯವಾಗಲಿದೆ ಎಂದಿದ್ದಾರೆ.
ಉತ್ತರದ ರಾಜ್ಯಗಳಲ್ಲೂ ಕೂಡ ಬಿಜೆಪಿ ವಿರೋಧಿ ಅಲೆ ಹೆಚ್ಚಾಗಿದ್ದು, ಬಿಜೆಪಿ ಕೊಟ್ಟ ಮಾತಿನಂತೆ ನಡೆದುಕೊಂಡಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ.
ಹಾಗಾಗಿ ಬಿಜೆಪಿ ದೇಶದಲ್ಲಿ 220 ಸೀಟುಗಳಲ್ಲಿ ಗೆಲ್ಲುವುದು ಕೂಡ ಅಸಾಧ್ಯವಾಗಿದ್ದು, ಈ ಬಾರಿ ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬರಲಿದೆ ಎಂದಿದ್ದಾರೆ.