Loksabha Election::ಏಪ್ರಿಲ್ 28 ಕ್ಕೆ ಬೆಣ್ಣೆನಗರಿಯಲ್ಲಿ ಮೋದಿ ಪ್ರಚಾರ! ಎಲ್ಲೆಲ್ಲಿ ಪ್ರಚಾರ ನಡೆಸಲಿದ್ದಾರೆ! ಮಾಹಿತಿ ನೀಡಿದ ಜಿ. ಎಂ ಸಿದ್ದೇಶ್ವರ ಸಂಸದ!
ಲೋಕಸಭಾ ಚುನಾವಣಾ(Loksabha Election) ಕಣ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಅದರಲ್ಲೂ ದಾವಣಗೆರೆ(Davanagere) ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ಕಾವು ಜೋರಾಗಿದೆ.
30 ಅಭ್ಯರ್ಥಿಗಳು ಕಣದಲ್ಲಿರುವ ಈ ಕ್ಷೇತ್ರದಲ್ಲಿ ದೇಶದ ಪ್ರಮುಖ ಪಕ್ಷಗಳಾದ ಕಾಂಗ್ರೆಸ್ ನಿಂದ ಪ್ರಭಾ ಮಲ್ಲಿಕಾರ್ಜುನ್ ಸ್ಪಧಿ೯ಸಿದ್ದರೆ,
ಬಿಜೆಪಿಯಿಂದ ಪ್ರಸ್ತುತ ಈ ಕ್ಷೇತ್ರದ ಲೋಕಸಭಾ ಸದಸ್ಯರಾಗಿರುವ ಜಿ.ಎಂ ಸಿದ್ದೇಶ್ವರ ಅವರ ಪತ್ನಿ ಗಾಯಿತ್ರಿ ಸಿದ್ದೇಶ್ವರ ಸ್ಪಧಿ೯ಸಿದ್ದಾರೆ.
ಚುನಾವಣಾ (Loksabha Election) ದಿನಾಂಕಗಳು ಹತ್ತಿರವಾಗುತ್ತಿದ್ದು, ಈ ಕ್ಷೇತ್ರದಲ್ಲಿ 2 ನೇ ಹಂತದಲ್ಲಿ ಅಂದರೆ ಮೇ7 ರಂದು ಚುನಾವಣೆ ನಡೆಯುತ್ತಿರುವುದರಿಂದ ಇನ್ನು ಪ್ರಚಾರದ ಕಾಯ೯ ಜೋರಾಗಿ ನಡೆಯುತ್ತಿದೆ.
ವಿಶೇಷವೆಂದರೆ ಈ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಮಾಡಲು ದೇಶದ ಪ್ರಧಾನಮಂತ್ರಿಗಳಾದ (Prime minister) ನರೇಂದ್ರ ಮೋದಿ ಅವರು ಆಗಮಿಸುತ್ತಿದ್ದಾರೆ.
ಏಪ್ರಿಲ್ 28 ಕ್ಕೆ ದಾವಣಗೆರೆಯಲ್ಲಿ ಮೋದಿ ಭಾಷಣ!
ಹೌದು, ಈಗಾಗಲೇ ಪ್ರಧಾನಿ ಮೋದಿಯವರು ರಾಜ್ಯದ ಹಲವು ಕಡೆಗಳಲ್ಲಿ ಪ್ರಚಾರ ಕಾಯ೯ ಕೈಗೊಂಡಿದ್ದು, ಇದೇ ಏಪ್ರಿಲ್ 28 ರಂದು ಬೆಣ್ಣೆನಗರಿ ದಾವಣಗೆರೆಯಲ್ಲಿ ಪ್ರಚಾರ ಮಾಡಲಿದ್ದಾರೆ ಎಂದು ಹಾಲಿ ಸಂಸದ ಜಿ. ಎಂ ಸಿದ್ದೇಶ್ವರ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ದಾವಣಗೆರೆಯಲ್ಲಿ ಪ್ರಚಾರ ಕೈಗೊಂಡು, ನಂತರ ಹಾವೇರಿಯಲ್ಲಿ ಬೊಮ್ಮಾಯಿ ಪರ ಪ್ರಚಾರ ಮಾಡಿ ನಂತರ ಕಾರವಾರಕ್ಕೆ ತೆರಳಲಿದ್ದಾರೆ ಎಂದು ಸಂಸದರು ತಿಳಿಸಿದ್ದು,
ಇದೇ ವೇಳೆ ಜಿಲ್ಲೆಯ ಜನರ ಪುಣ್ಯದಿಂದಾಗಿ ದೇಶದ ಪ್ರಧಾನಿ ನರೇಂದ್ರ ಮೋದಿಯವರು 5 ನೇ ಬಾರಿಗೆ ದಾವಣಗೆರೆಗೆ ಆಗಮಿಸುತ್ತಿದ್ದಾರೆ ಎಂದಿದ್ದಾರೆ.
ರಾಜ್ಯದ ಬಿಜೆಪಿ ನಾಯಕರ ಆಗಮನ!
ದಾವಣಗೆರೆಯಲ್ಲಿ ಮಧ್ಯಾಹ್ನ 1 ಗಂಟೆಗೆ ಸಾವ೯ಜನಿಕರನ್ನು ಉದ್ದೇಶಿಸಿ ಪ್ರಧಾನಿಗಳು ಮಾತನಾಡಲಿದ್ದು, ಈ ಕಾಯ೯ಕ್ರಮದಲ್ಲಿ
ಮಾಜಿ ಮುಖ್ಯಮಂತ್ರಿಗಳಾದ ಬಿ. ಎಸ್ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ ವೈ ವಿಜಯೇಂದ್ರ ರವರು ಸೇರಿ ಬಿಜೆಪಿಯ ಹಲವಾರು ನಾಯಕರು
ಚುನಾವಣಾ(Election) ಪ್ರಚಾರಕ್ಕಾಗಿ ಆಗಮಿಸಲಿದ್ದಾರೆ ಇದರೊಂದಿಗೆ ಬಿಜೆಪಿಯ ಲಕ್ಷಾಂತರ ಕಾಯ೯ಕತ೯ರು ಹಾಗೂ ಸಾವ೯ಜನಿಕರು ಸೇರಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಮೋದಿಯವರು ಜಗತ್ತಿನ ನಂ. 1 ನಾಯಕ!
ಪ್ರಧಾನಿ ನರೇಂದ್ರ ಮೋದಿಯವರು ಇಡೀ ಜಗತ್ತಿಗೆ ಭಾರತದ ಸಾಮರ್ಥ್ಯ ತೋರಿಸಿ ಇದೀಗ ಭಾರತದತ್ತ ಎಲ್ಲರೂ ತಿರುಗುವಂತೆ ಮಾಡಿದ್ದು, ಜಗತ್ತಿನಲ್ಲಿ ನಂಬರ್ 1 ನಾಯಕರಾಗಿದ್ದಾರೆ.
ಅವರು ಮಾಡಿರುವ ಅಭಿವೃದ್ಧಿ ಕಾಯ೯ಗಳು ವಿರೋಧ ಪಕ್ಷಗಳಿಗೆ ಕಾಣುವುದಿಲ್ಲ. ಸಂಸದರಾಗಿ ನಾನು ಏನು ಕೆಲಸ ಮಾಡಿಲ್ಲವೆಂದು ಕಾಂಗ್ರೆಸ್ ಬೊಬ್ಬೆ ಹೊಡೆಯುತ್ತಿದ್ದು,
ನಾನು ನನ್ನ ಕ್ಷೇತ್ರಕ್ಕಾಗಿ ಮಾಡಿರುವ ಅಭಿವೃದ್ಧಿ ಕೆಲಸಗಳು ಮತದಾರರಿಗೆ ಗೊತ್ತಿವೆ. ಆದ್ದರಿಂದ ಮತದಾರರು ಈ ಬಾರಿ ಬಿಜೆಪಿ ಅಭ್ಯರ್ಥಿಯಾಗಿರುವ ಅವರ ಪತ್ನಿಗೆ Loksabha Election ನಲ್ಲಿ ಮತಹಾಕಿ ಗೆಲ್ಲಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.