Whatsapp Ban:: ಕಾಯ್ದೆ ಹೇರಿದರೆ ದೇಶ ಬಿಟ್ಟು ಹೋಗ್ತಿವಿ ಎಂದ ವಾಟ್ಸಪ್! ದೇಶದ ರಕ್ಷಣೆಗಿಂತ ವಾಟ್ಸಪ್ ದೊಡ್ಡದಲ್ಲ! ನಿಮ್ಮ ಅಭಿಪ್ರಾಯವೇನು?
ಇತ್ತೀಚಿನ ಕೆಲವು ವರ್ಷಗಳಲ್ಲಿ ವಾಟ್ಸಪ್ (whatsapp ) ಎಂಬುದು ಜನರ ಜೀವನದ ಒಂದು ಮುಖ್ಯ ಭಾಗವಾಗಿದ್ದು ಭಾರತದಲ್ಲಿ 140 ಕೋಟಿ ಜನಸಂಖ್ಯೆಯಲ್ಲಿ 40 ಕೋಟಿ ಜನರು ವಾಟ್ಸಪ್ ಅನ್ನು ಬಳಕೆ ಮಾಡುತ್ತಿದ್ದಾರೆ.
ಆದರೆ ವಾಟ್ಸಪ್ ಬಳಕೆದಾರರಿಗೆ ಇದೀಗ ಶಾಕಿಂಗ್ ನ್ಯೂಸ್ ಒಂದು ಇದ್ದು, ಇನ್ಮುಂದೆ ಭಾರತದಲ್ಲಿ ವಾಟ್ಸಪ್ ಕಾರ್ಯನಿರ್ವಹಿಸಲ್ಲ ಎನ್ನಲಾಗುತ್ತಿದೆ.
ದೆಹಲಿ ಹೈಕೋರ್ಟ್ ಗೆ ಹೇಳಿಕೆ ನೀಡಿದ ವಾಟ್ಸಾಪ್(whatsapp ) !
ಭಾರತದಿಂದ ವಾಟ್ಸಾಪ್ ಬ್ಯಾನ್ ಆಗುತ್ತಾ ವಾಟ್ಸಾಪ್ (whatsapp ) ಭಾರತದಲ್ಲಿ ತನ್ನ ಸೇವೆಯನ್ನು ನಿಲ್ಲಿಸಲಿದೆ ಎಂಬ ಪ್ರಶ್ನೆಗಳು ಜನಸಾಮಾನ್ಯರಲ್ಲಿ ಉಂಟಾಗುತ್ತಿದ್ದ
ಇದಕ್ಕೆ ಬಹು ಮುಖ್ಯ ಕಾರಣ ಇತ್ತೀಚಿಗೆ ವಾಟ್ಸಪ್ ದೆಹಲಿ ಹೈಕೋರ್ಟ್ ನಲ್ಲಿ ನೀಡಿರುವ ಒಂದು ಹೇಳಿಕೆಯಾಗಿದೆ ಅದೇನೆಂದರೆ ಕೇಂದ್ರ ಸರ್ಕಾರದ ಐಟಿ ಕಾಯ್ದೆ 2021ರ ನಿಯಮಗಳನ್ನು ಪಾಲಿಸಲು
ಸಾಧ್ಯವಿಲ್ಲ ಎಂದು ವಾಟ್ಸಾಪ್ ಕೋಟ್೯ ಗೆ ಹೇಳಿಕೆ ನೀಡಿದೆ. ಆದರೂ ಕೂಡ ಈ ನಿಯಮಗಳನ್ನು ಪಾಲಿಸಲೇಬೇಕು ಎಂದರೆ ವಾಟ್ಸಾಪ್ ಭಾರತದಲ್ಲಿ ಇನ್ಮುಂದೆ ಕಾರ್ಯನಿರ್ವಹಿಸುವುದಿಲ್ಲ ಎಂದು ವಾಟ್ಸಪ್ ನ ಅಧಿಕಾರಿಗಳು ಹೇಳಿದ್ದಾರೆ.
ಕೇಂದ್ರ ಸರ್ಕಾರ vs ವಾಟ್ಸಪ್(whatsapp ) ?
ಈ ಸೋಶಿಯಲ್ ಮೀಡಿಯಾಗಳ ಮೂಲಕ ನಡೆಯುವ ಕೆಲವು ಕಾನೂನು ಬಾಹಿರ ಚಟುವಟಿಕೆಗಳನ್ನು ತಡೆಯಲು ಕೇಂದ್ರ ಸರ್ಕಾರವು ಐಟಿ ಕಾಯ್ದೆ 2021 ಜಾರಿಗೆ ತಂದಿದೆ.
ಈ ಕಾಯ್ದೆ ಅಡಿಯಲ್ಲಿ ನಿಮ್ಮ ಮೊಬೈಲ್ ನಿಂದ ನೀವು ಮಾಡುವ ಕಾಲ್ಗಳು & ಮೆಸೇಜ್ ಗಳನ್ನು ಟ್ರ್ಯಾಕ್ ಮಾಡಲಾಗುತ್ತಿರುತ್ತದೆ ಇದರಿಂದ ಯಾವುದಾದರೂ ಕಾನೂನುಬಾಹಿರ
ಚಟುವಟಿಕೆಗಳು ನಡೆದದಲ್ಲಿ ಸರ್ಕಾರಕ್ಕೆ ಮುಂಚಿತವಾಗಿ ಮಾಹಿತಿ ಸಿಗುತ್ತದೆ ಹಾಗೂ ದೇಶ ರಕ್ಷಣೆಗೆ ಪ್ರಜೆಗಳ ಹಿತ ರಕ್ಷಣೆಗೆ ಇಂತಹ ಕಾನೂನುಗಳನ್ನು ಜಾರಿಗೆ ತಂದು ಸರ್ಕಾರವು ಆಡಳಿತ ನಡೆಸುತ್ತದೆ.
ಆದರೆ ಈಗಿರುವ ಮುಖ್ಯ ಸಮಸ್ಯೆ ಎಂದರೆ ನೀವು ವಾಟ್ಸಪ್ ಮೂಲಕ ಮಾಡುವ ಕರೆ ಹಾಗೂ ಮೆಸೇಜ್ ಗಳ ವಿವರಗಳು ಸರ್ಕಾರಕ್ಕೆ ಟ್ರ್ಯಾಕ್ ಮಾಡಲು ಸಾಧ್ಯವಿಲ್ಲ
ಇದು ವಾಟ್ಸಾಪ್ ಕಂಪನಿಯ ಅಧೀನದಲ್ಲಿದ್ದು, ವಾಟ್ಸಪ್ ಕಂಪನಿಯು ಇದನ್ನು ಎನ್ಕ್ರಿಪ್ಷನ್ ಹಾಗೂ ಡಿಸ್ಕ್ರಿಪ್ಶನ್ (encryption & decryption) ಮೂಲಕ ನಿರ್ವಹಿಸುತ್ತಿದೆ.
ಆದ್ದರಿಂದ ಕೇಂದ್ರ ಸರ್ಕಾರವು ಇತ್ತೀಚಿಗೆ ವಾಟ್ಸಾಪ್ ಕಂಪನಿ ಕಡೆಯಿಂದಲೂ ಈ ಮಾಹಿತಿಯನ್ನು ಪಡೆಯಲು ಐಟಿ ಕಾಯ್ದೆ 2021 ರಲ್ಲಿ ಕೆಲವು ನಿಯಮಗಳನ್ನು ಸೇರಿಸಲಾಗಿದೆ.
ಆದರೆ ಈ ರೀತಿಯ ಮಾಹಿತಿ ನೀಡಲು ವಾಟ್ಸಾಪ್ ನಿರಾಕರಿಸಿದ್ದು, ತನ್ನ ಬಳಕೆದಾರರು ಖಾಸಗಿತನಕ್ಕೆ ಅಡ್ಡಿ ಮಾಡಿ ಯಾವುದೇ ಮಾಹಿತಿಯನ್ನು ಕೊಡಲು ಸಾಧ್ಯವಿಲ್ಲವೆಂದು ಹೈಕೋರ್ಟ್ ನಲ್ಲಿ ತಿಳಿಸಿದೆ.
ಉಗ್ರರ ಉತ್ತಮ ಆಯ್ಕೆಯಾಗಿದೆ ಈ ಸೋಷಿಯಲ್ ಮೀಡಿಯಾ!
ಒಂದು ರೀತಿಯಲ್ಲಿ ನೋಡಿದರೆ ವಾಟ್ಸಪ್ ಕಂಪನಿಯ ಮಾತು ಸರಿಯಾಗಿ ಕೂಡ ಇದರಲ್ಲಿ ಬೇರೆ ವಿಷಯವಿದೆ. ಅದೇನೆಂದರೆ ಇಂಟರ್ನ್ಯಾಷನಲ್ (international)
ಮಟ್ಟದಲ್ಲಿ ನಡೆಯುವ ಉಗ್ರಗಾಮಿ ಸಂಘಟನೆಗಳು ಭಯೋತ್ಪಾದನೆ ಗಳಂತಹ ಕಾನೂನುಬಾಹಿರ ಚಟುವಟಿಕೆಗಳು ಈ ರೀತಿಯ ಸೋಶಿಯಲ್ ಮೀಡಿಯಾ ಪ್ಲಾಟ್ಫಾರ್ಮ್ ಗಳನ್ನು ಉಪಯೋಗಿಸಿಕೊಂಡು
ತಮ್ಮ ಮಾಹಿತಿ ದೇಶದ ರಕ್ಷಣಾ ಏಜೆನ್ಸಿಗಳಿಗೆ ಸಿಗದಂತೆ ನೋಡಿಕೊಳ್ಳುವಲ್ಲಿ ಯಶಸ್ವಿಯಾಗುತ್ತಿದ್ದು, ವಾಟ್ಸಪ್ ಕಂಪನಿ ಗಳಂತಹ ಈ ಕ್ರಮವು ಈ ಭಯೋತ್ಪಾದಕ ಸಂಘಟನೆಗಳಿಗೆ ಇನ್ನಷ್ಟು ಸಹಕಾರಿಯಾಗುತ್ತಿದೆ.
ಇದಕ್ಕೆ ಉದಾಹರಣೆ ಎಂದರೆ ಇತ್ತೀಚಿಗೆ ದಕ್ಷಿಣ ಭಾರತದಲ್ಲಿ ಮೂರು ಕಡೆಗಳಲ್ಲಿ ನಡೆದ ಬಾಂಬ್ ಸ್ಫೋಟವನ್ನು ಒಂದು ಭಯೋತ್ಪಾದಕ ಗುಂಪು ನಡೆಸಿದ್ದು
ಈ ಗುಂಪು ವಾಟ್ಸಪ್ (Watsapp) ಮೂಲಕ ಒಂದು ಗ್ರೂಪ್ ಮಾಡಿಕೊಂಡು ಅದರಲ್ಲಿ ಒಬ್ಬರಿಗೊಬ್ಬರು ಕಾಂಟಾಕ್ಟ್ ಮಾಡಿ ಪ್ಲಾನ್ ಮಾಡುತ್ತಿದ್ದರು ಎಂಬುದು ತಿಳಿದು ಬಂದಿದೆ.
ದೇಶದ ರಕ್ಷಣೆಗೆ ಅಡ್ಡಿಯಾಗುತ್ತಿರುವ ವಾಟ್ಸಾಪ್ (Watsapp) ನಿಯಮ!
ಹೀಗೆ ಸರ್ಕಾರದ ರಕ್ಷಣಾ ವ್ಯವಸ್ಥೆಯಿಂದ ತಪ್ಪಿಸಿಕೊಂಡು ಭಯೋತ್ಪಾದಕ ಸಂಘಟನೆಗಳಿಗೆ ಸಹಕಾರಿಯಾಗಿರುವ ವಾಟ್ಸಪ್ ನಿಂದ ದೇಶದ ರಕ್ಷಣೆಗೆ ತೊಂದರೆಯಾಗದಂತೆ ನೋಡಿಕೊಳ್ಳಲು
ಸರ್ಕಾರವು ಇದೀಗ ಬಳಕೆದಾರರ ಚಲನವಲನಗಳ ಬಗ್ಗೆ ಮಾಹಿತಿ ನೀಡಲು ಕೇಳಿದೆ ಆದರೆ ವಾಟ್ಸಪ್
ನಿರಾಕರಿಸುತ್ತಿದ್ದು ಇದಕ್ಕೆ ಮುಖ್ಯ ಕಾರಣ ಇದರಿಂದ ಬಳಕೆದಾರರ ಕಸ ಗೀತನಕ್ಕೆ ತೊಂದರೆಯಾಗಲಿದ್ದು ಬಳಕೆದಾರರ ಡೇಟಾ ಮಿಸ್ ಯೂಸ್ ಆಗಲಿದೆ ಎಂದು ವಾಟ್ಸಪ್ ಕೋರ್ಟಿಗೆ ಹೇಳಿದೆ.
ದೇಶದ ನಾಗರಿಕರ ಅಭಿಪ್ರಾಯವೇನು?
ಆದರೆ ಒಬ್ಬ ಜವಾಬ್ದಾರಿಯುತ ನಾಗರಿಕರಾಗಿ ನಾವು ಯೋಚಿಸುವುದಾದರೆ ನಾವು ವಾಟ್ಸಪ್ ಅನ್ನು ಸಾಮಾನ್ಯವಾಗಿ ಏಕೆ ಬಳಸುತ್ತೇವೆ?
ಹೆಚ್ಚೆಂದರೆ ಕುಟುಂಬದವರಿಗೆ ಸ್ನೇಹಿತರಿಗೆ ಹೇಗಿದ್ದೀರಾ ಊಟ ಆಯ್ತಾ ತಿಂಡಿ ಆಯ್ತಾ ಇಲ್ಲವೆ ಯಾವುದಾದರೂ ಫಾರ್ವರ್ಡ್ ಮೆಸೇಜ್ ಗಳನ್ನು ಕಳಿಸುತ್ತಾ ಹೀಗೆ ಸಾಮಾನ್ಯವಾಗಿ ಬಳಕೆ ಮಾಡುತ್ತೇವೆ
ವಾಟ್ಸಪ್ ನಲ್ಲಿ ನಮ್ಮ ತೀರಾ ಖಾಸಗಿತನವನ್ನು ಪ್ರದರ್ಶಿಸುವುದಿಲ್ಲ. ಇನ್ನು ಕೆಲವೊಂದು ಡೇಟಾಗಳು ದುರುಪಯೋಗ ಆಗಬಹುದು ಎಂದು ಕೊಂಡರೆ
ಈಗಾಗಲೇ ನಾವು ಬೇರೆ ಬೇರೆ ಪ್ಲಾಟ್ಫಾರ್ಮ್ ಗಳಲ್ಲಿ ನಮ್ಮ ಮೊಬೈಲ್ ನಂಬರ್ ಇಮೇಲ್ ಮುಂತಾದವುಗಳನ್ನು ಹಾಕಿದಾಗಲೇ ನಮ್ಮ ಡೇಟಾ ದುರುಪಯೋಗವಾಗಲು ಪ್ರಾರಂಭಿಸಿರುತ್ತದೆ ಆಗಲೇ ಅದನ್ನು ಬೇರೆಯವರಿಗೆ
ಮಾರಾಟ ಮಾಡಲಾಗಿರುತ್ತದೆ ಹಾಗಾಗಿ ಕೇವಲ ವಾಟ್ಸಪ್ ನಿಂದಲೇ ನಮ್ಮ ಖಾಸಗಿತನಕ್ಕೆ ತೊಂದರೆಯಾಗುತ್ತದೆ ಎಂಬುದು ಸುಳ್ಳು. ಹೀಗೆ ಜನರ ಪರ್ಸನಲ್ ಡೇಟಾ ದುರುಪಯೋಗದಂತೆ ತಡೆಯಲು
ಭಾರತದಲ್ಲಿ ಇನ್ನು ಯಾವುದೇ ರೀತಿಯ ಕಾನೂನುಗಳು ಜಾರಿಗೊಂಡಿಲ್ಲ ಹೀಗಾಗಿ ನೀವು ಬಳಕೆ ಮಾಡುವ ಹಲವು ಪ್ಲಾಟ್ಫಾರ್ಮ್ ಗಳಲ್ಲಿ ನಿಮ್ಮ ಪರ್ಸನಲ್ ಡೇಟಾ ಈಗಾಗಲೇ ದುರ್ಬಳಕೆ ಆಗುತ್ತಿರುತ್ತದೆ.
ಆದ್ದರಿಂದ ಸರ್ಕಾರ ದೇಶದ ರಕ್ಷಣೆಯ ದೃಷ್ಟಿಯಿಂದ ಹಾಗೂ ನಾಗರೀಕರ ಸುರಕ್ಷತೆಗಾಗಿ ತಂದಿರುವ ಐಟಿ ಕಾಯ್ದೆ
2021ರ ನಿಯಮಗಳನ್ನು ವಾಟ್ಸಾಪ್ ಫಾಲೋ ಮಾಡದಿದ್ದಲ್ಲಿ ಸರ್ಕಾರಕ್ಕೆ ಬೇಕಿರುವ ಮಾಹಿತಿ ನೀಡದಿದ್ದಲ್ಲಿ ಭಾರತದಿಂದ ವಾಟ್ಸಾಪ್ ಬ್ಯಾನ್ ಆಗುವುದು ಒಳ್ಳೆಯದು ಎಂoಬುದು ನಮ್ಮ ಅಭಿಪ್ರಾಯ.
ಸರ್ಕಾರವು ಕೂಡ ಮುಂದಿನ ದಿನಗಳಲ್ಲಿ ವಾಟ್ಸಾಪ್ ಕಾಯ್ದೆಗಳನ್ನುಯ ನಡೆದುಕೊಳ್ಳದೆ ಇದ್ದರೆ ವಾಟ್ಸಪ್ ಅನ್ನು ದೇಶದಿಂದ ಬ್ಯಾನ್ ಮಾಡೋ ಮಾಡುತ್ತದೆ ಎನ್ನಲಾಗುತ್ತಿದೆ.
ಇದರ ಬದಲಾಗಿ ದೇಶದಲ್ಲಿ ಸ್ವದೇಶಿ ನಿರ್ಮಿತ ವಾಟ್ಸಪ್ ನಂತಹ ಆಪ್ ಗಳನ್ನು ಅಭಿವೃದ್ಧಿಪಡಿಸಿದಲ್ಲಿ ಬೇರೆ ದೇಶದ ವಾಟ್ಸಪ್ ಗಳ ಮೇಲೆ ನಮ್ಮ ದೇಶದ ಜನರ ಅವಲಂಬನೆ ಕಡಿಮೆಯಾಗಿ ದೇಶದ ಸುರಕ್ಷತೆಗೆ ಇನ್ನಷ್ಟು ಅನುಕೂಲವಾಗುತ್ತದೆ.
ಧನ್ಯವಾದಗಳು