BE/BTech Engineering :: ಪಿಯುಸಿ/ಡಿಪ್ಲೋಮಾ ಮುಗಿತು! ಇಂಜಿನಿಯರಿಂಗ್ ಮಾಡೋದು ಎಲ್ಲಿ? ಯಾವ ಕಾಲೇಜ್ ಬೆಸ್ಟ್ ಆಯ್ಕೆ? ಇಲ್ಲಿದೆ ಮಾಹಿತಿ!
ಇದೀಗ ತಾನೇ 2023-24ನೇ ಸಾಲಿನ ಶೈಕ್ಷಣಿಕ ವರ್ಷ ಕಂಪ್ಲೀಟ್ ಆಗಿದ್ದು ಈ ಸಾಲಿನಲ್ಲಿ ಪಿಯುಸಿ ವಿಜ್ಞಾನ ವಿಷಯದಲ್ಲಿ
ಓದಿ ಹಾಗೂ ಡಿಪ್ಲೋಮಾ ಕೋಸ್೯ ಮಾಡಿರುವ ಹಲವು ವಿದ್ಯಾರ್ಥಿಗಳು ಮುಂದೆ ಇಂಜಿನಿಯರಿಂಗ್ ಮಾಡಬೇಕು ಎಂದುಕೊಂಡಿರುತ್ತೀರಿ.
ಆದರೆ ಯಾವ ಇಂಜಿನಿಯರಿಂಗ್ ಕಾಲೇಜ್ ಆಯ್ಕೆ ಮಾಡಬೇಕು ಹಾಗೂ ಯಾವ ಬಿಇ ಕೋರ್ಸ್ ತೆಗೆದುಕೊಳ್ಳಬೇಕು ಎಂದು ಈಗಾಗಲೇ ನೀವು ಯೋಚಿಸುತ್ತಿರುತ್ತೀರಿ.
ಹಾಗಾಗಿ ನಾವು ನಿಮ್ಮ ಗೊಂದಲಗಳಿಗೆ ಇಲ್ಲಿ ಕೆಲವೊಂದು ಪರಿಹಾರ ನೀಡಿದ್ದು, ಬೆಂಗಳೂರಿನಲ್ಲಿರುವ ಉತ್ತಮ 10 ಇಂಜಿನಿಯರಿಂಗ್ ಕಾಲೇಜುಗಳ ಬಗ್ಗೆ ಇಲ್ಲಿ ಮಾಹಿತಿ ನೀಡಿದ್ದೇವೆ
ಇದರಿಂದಾಗಿ ನೀವು ನಿಮ್ಮ ಮುಂದಿನ ಉನ್ನತ ಶಿಕ್ಷಣವನ್ನು ಉತ್ತಮ ಕಾಲೇಜಿನಲ್ಲಿ ಮಾಡಲು ಇದು ಸಹಕಾರಿಯಾಗಬಹುದು.
ಜೆಇಇ, ಕೆಸಿಇಟಿ ಯಾ೯ಂಕ್ ಬೇಕು!
ಇತ್ತೀಚೆಗೆ ಪಿಯುಸಿ ರಿಸಲ್ಟ್ ಬಂದಿದ್ದು, ಬೇರೆ ಬೇರೆ ಕೋಸ್೯ ಮಾಡುವವರಿಗೆ ಈಗಾಗಲೇ ಅಡ್ಮಿಷನ್ ಪ್ರಾರಂಭವಾಗಿರಬಹುದು.
ಆದರೆ ಇಂಜಿನಿಯರಿಂಗ್ ಮಾಡುವವರಿಗೆ ಹಲವು ರೀತಿಯ ಎಂಟ್ರನ್ಸ್ ಎಕ್ಸಾಂಗಳಿರುತ್ತವೆ. ಜೆಇಇ, ಜೆಇಇ ಅಡ್ವಾನ್ಸ್ಡ್ ಕೆಸಿಇಟಿ ಹೀಗೆ ಹಲವು ಎಕ್ಸಾಂ ಪಡೆದು ಉತ್ತಮ ರ್ಯಾಂಕ್ ಮೂಲಕ ಪಾಸಾಗಬೇಕು
ಆಗ ಮಾತ್ರ ಉತ್ತಮ ಕಾಲೇಜ್ ನಲ್ಲಿ ಸೀಟು ಸಿಗುತ್ತದೆ. ಈಗಾಗಲೇ ಜೆಇಇ ರಿಸಲ್ಟ್ ಬಂದಿದ್ದು, ಕೆಸಿಇಟಿ ರಿಸಲ್ಟ್ ಬರುವುದು ಬಾಕಿ ಇದೆ. ಈ ರಿಸಲ್ಟ್ ಬಂದನಂತರ ಅಡ್ಮಿಷನ್ ಪ್ರಾರಂಭವಾಗುತ್ತವೆ.
BE/BTech Engineering ಆಯ್ಕೆ!
ಬಿಇ ಹಾಗೂ ಬಿಟೆಕ್ ಎಂಬುದು ಹಲವು ವಿದ್ಯಾರ್ಥಿಗಳ ಹಾಗೂ ಪೋಷಕರ ಕನಸು.
ಇದು ನನಸಾದಲ್ಲಿ ಮಕ್ಕಳ ಜೀವನ ಸೆಟ್ಟಲ್ ಆಗುತ್ತದೆ ಎಂದು ಪೋಷಕರು ಉತ್ತಮ ಕಾಲೇಜುಗಳಲ್ಲಿ ಮಕ್ಕಳ ವಿದ್ಯಾಭ್ಯಾಸ ಮಾಡಿಸಲು ಮುಂದಾಗುತ್ತಾರೆ.
ಅದಕ್ಕಾಗಿ ನಾವು ಬೆಂಗಳೂರಿನ ಟಾಪ್ 10 ಕಾಲೇಜಿನ ವಿವರಗಳನ್ನು ಇಲ್ಲಿ ಕೊಟ್ಟಿದ್ದೇವೆ. ನೀವು ಈ ಕಾಲೇಜುಗಳಿಗೆ ಸಂಪಕಿ೯ಸಿ ಹೆಚ್ಚಿನ ಮಾಹಿತಿ ಪಡೆಯಬಹುದು.
ಈ ಎಲ್ಲಾ ಕಾಲೇಜುಗಳು ವಸತಿ ಸಹಿತ ಕಾಲೇಜುಗಳಾಗಿದ್ದು, ಶುಲ್ಕ ಸಾಮಾನ್ಯವಾಗಿ 2.50 ರಿಂದ 10 ಲಕ್ಷಗಳ ವರೆಗೆ ಇರುತ್ತದೆ.
ಬೆಂಗಳೂರಿನಲ್ಲಿನ ಟಾಪ್ BE/BTech ಇಂಜಿನಿಯರಿಂಗ್ ಕಾಲೇಜುಗಳು!
1.ಕ್ರಿಸ್ಟ್ ಯುನಿವರ್ಸಿಟಿ- 5.0 – 8.5 Lakh
2.ಜೈನ್ ಯುನಿವರ್ಸಿಟಿ, ಬೆಂಗಳೂರು – 2.1 – 6.0 Lakh
3.ಪಿಇಎಸ್ ಯುನಿವರ್ಸಿಟಿ- 3.5-6.5 Lakh
4.ಇಂಟರ್ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಇನ್ನಾರ್ಮೇಷನ್ ಟೆಕ್ನಾಲಜಿ, ಬೆಂಗಳೂರು – 1.25 – 4.0 Lakh
5.ಎಂ.ಎಸ್ ರಾಮಯ್ಯ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ- 2.5 – 4 Lakh
6.ಆರ್.ವಿ ಕಾಲೇಜ್ ಆಫ್ ಇಂಜಿನಿಯರಿಂಗ್ 3.0-7 Lakh
7.ಬಿ.ಎಂ.ಎಸ್ ಕಾಲೇಜ್ ಆಫ್ ಇಂಜಿನಿಯರಿಂಗ್ 3.0-10 Lakh
8.ಸಿಎಂಆರ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ – 3.2- 6.5 Lakh
9. ನ್ಯೂ ಹಾರಿಜನ್ ಕಾಲೇಜ್ ಆಫ್ ಇಂಜಿನಿಯರಿಂಗ್- 2.5-4.0 Lakh
10.ನಿಟ್ಟೆ ಮೀನಾಕ್ಷಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ – 2.5-5.0 Lakh
ಇದು ಕೇವಲ ಸಾಮಾನ್ಯ ಶುಲ್ಕದ ಮಾಹಿತಿಯಾಗಿದ್ದು, ನೀವು ಪಿಯುಸಿ/ ಡಿಪ್ಲೊಮಾದಲ್ಲಿ ತೆಗೆದುಕೊಂಡ ಅಂಕ ಹಾಗೂ
ಕೆಸಿಇಟಿ ರ್ಯಾಂಕ್ ಆಧಾರದ ಮೇಲೆ ನಿಮ್ಮ ಶುಲ್ಕ ನಿಗದಿಮಾಡಲಾಗುತ್ತದೆ. ಆದ್ದರಿಂದ ನೀವು ಕಾಲೇಜುಗಳನ್ನು ಸಂಪಕಿ೯ಸಿ ಹೆಚ್ಚಿನ ಮಾಹಿತಿ ಪಡೆಯಬಹುದು.
ಐಟಿ ಹಬ್ ಸಿಲಿಕಾನ್ ಸಿಟಿ!
ಸಿಲಿಕಾನ್ ಸಿಟಿ ಬೆಂಗಳೂರು ಎಂಬುದು ಐಟಿ ಹಬಾ ಆಗಿದ್ದು, ಟೆಕ್ನಾಲಜಿ ತುಂಬಿದ ನಗರವಾಗಿದೆ.
ಇಂತಹ ವಾತಾವರಣದಲ್ಲಿ ಹಾಗೂ ಟೆಕ್ನಾಲಜಿಯಲ್ಲಿ ಉತ್ತಮ ಹೆಸರು ಮಾಡಿರುವ ಕಾಲೇಜುಗಳಲ್ಲಿ ನೀವು ಪ್ರವೇಶ ಪಡೆದಲ್ಲಿ ಭವಿಷ್ಯದಲ್ಲಿ ನಿಮಗೆ ಉದ್ಯೋಗಾವಕಾಶಗಳು ಹೆಚ್ಚಾಗುತ್ತವೆ.
ಹಾಗಾಗಿ ನೀವು ಬಿಇ ಅಥವಾ ಬಿಟೆಕ್ ಮಾಡುವ ಯೋಚನೆಯಲ್ಲಿದ್ದರೆ ಖಂಡಿತವಾಗಿ ಈ ಬೆಂಗಳೂರಿನ ಕಾಲೇಜುಗಳನ್ನು ಆಯ್ಕೆ ಮಾಡಿದರೆ ಹೆಚ್ಚಿನ ಒಳಿತು.