ಯಡಿಯೂರಪ್ಪ ಸಿ. ಟಿ ರವಿ ಮುನಿಸು ಶಮನ!! ಸಿ. ಟಿ ರವಿಗೆ ತಕ್ಕ ಸ್ಥಾನಮಾನಕ್ಕಾಗಿ ಪ್ರಯತ್ನ, ಯಡಿಯೂರಪ್ಪ ಹೇಳಿಕೆ!
ದೇಶದಲ್ಲೆಡೆ ಲೋಕಸಭಾ ಚುನಾವಣಾ ಸಮರ ಜೋರಾಗಿ ನಡೆಯುತ್ತಿದ್ದು, ರಾಜ್ಯದಲ್ಲಿ ಈ ಬಾರಿಯ ಚುನಾವಣೆ ತೀವ್ರ ಕುತೂಹಲ ಹುಟ್ಟಿಸಿದೆ.
ಏಕೆಂದರೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದು, ಗ್ಯಾರಂಟಿ ಯೋಜನೆಗಳ ಮೂಲಕ ಕೊಟ್ಟ ಮಾತನ್ನು ಉಳಿಸಿಕೊಂಡು ಜನರ ನಂಬಿಕೆ ಗಳಿಸಿದೆ.
ಆದರೆ ಮತ್ತೊಂದೆಡೆ ವಿಧಾನಸಭೆಯಲ್ಲಿ ಹೀನಾಯವಾಗಿ ಸೋತಿರುವ ಬಿಜೆಪಿ ಪಕ್ಷ ಮನೆಯೊಂದು ಮೂರು ಬಾಗಿಲು ಎನ್ನುವಂತಾಗಿದೆ.
ಬಿಜೆಪಿ ಗೆಲುವಿಗೆ ಮೋದಿ ಹೆಸರು ಮಾತ್ರ ಸಾಕಾ?
ರಾಜ್ಯದಲ್ಲಿ ಕಳೆದ ಬಾರಿ ಬಿಜೆಪಿ 25 ಸೀಟುಗಳನ್ನು ಗೆದ್ದಿತ್ತು. ಆದರೆ ಈ ಬಾರಿ ರಾಜ್ಯದಲ್ಲಿ ಅಧಿಕಾರದಲ್ಲೂ ಇಲ್ಲ & ರಾಜ್ಯ ಬಿಜೆಪಿಯಲ್ಲಿ ಸ್ವಲ್ಪವೂ ಒಗ್ಗಟ್ಟಿಲ್ಲ.
ಹಾಗೆಯೇ ಸರಿಯಾದ ನಾಯಕತ್ವದ ಕೊರತೆಯು ಎದ್ದು ಕಾಣುತ್ತಿದೆ. ಮೋದಿ ಎನ್ನುವ ಹೆಸರು ಬಿಟ್ಟರೆ ರಾಜ್ಯದಲ್ಲಿ ಬಿಜೆಪಿ ಗೆಲುವಿಗೆ ಕಾರಣಗಳೇ ಇಲ್ಲವಾಗಿವೆ.
ಮೋದಿ ಇಲ್ಲದಿದ್ದರೆ ರಾಜ್ಯದಲ್ಲಿ ಬಿಜೆಪಿ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುವ ಸ್ಥಿತಿಗೆ ಬಂದುನಿಂತಿದೆ.
ಸಿ. ಟಿ ರವಿಗೆ ಪಕ್ಷದಲ್ಲಿಲ್ಲ ಸರಿಯಾದ ಸ್ಥಾನಮಾನ!
ಹೀಗೆ ಹೇಳಲು ಹಲವು ಕಾರಣಗಳಿವೆ. ಅದರಲ್ಲಿ ಮುಖ್ಯವಾಗಿ ಯಡಿಯೂರಪ್ಪ ಹಾಗೂ ಸಿ. ಟಿ ರವಿ ಅವರ ಮಧ್ಯೆ ಇರುವ ಮುನಿಸು. ಕೆಲವೇ ತಿಂಗಳುಗಳ ಹಿಂದೆ ಬಿಜೆಪಿಗೆ ಸಿ. ಟಿ ರವಿ ಒಬ್ಬ ನಾಯಕ.
ಹಲವು ಜವಾಬ್ದಾರಿಗಳನ್ನು ಹೊತ್ತು ಪಕ್ಷದಲ್ಲಿ ಹಗಲಿರುಳು ತನ್ನನ್ನು ತಾನು ತೊಡಗಿಸಿಕೊಂಡಿದ್ದ ನಾಯಕ. ಕೇಂದ್ರದ ಪ್ರಧಾನ ಕಾಯ೯ದಶಿ೯ ಜವಾಬ್ದಾರಿ, ತಮಿಳುನಾಡು ಹಾಗೂ ಗೋವಾ ಉಸ್ತುವಾರಿಯಾಗಿದ್ದರು.
ಆದರೆ ಕೆಲವೇ ದಿನಗಳಲ್ಲಿ ಅವರ ಭವಿಷ್ಯವೇ ಬದಲಾಯಿತು. ವಿಧಾನಸಭಾ ಚುನಾವಣೆಯಲ್ಲಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಸೋತರು.
ಇದಕ್ಕೆ ಮುಖ್ಯ ಕಾರಣ ಅವರ ಬಲಗೈ ಬಂಟನಂತಿದ್ದ ಹೆಚ್. ಡಿ ತಮ್ಮಯ್ಯ ಕಾಂಗ್ರೆಸ್ ಸೇರಿ ಅವರ ವಿರುದ್ದವೇ ಸ್ಪಧಿ೯ಸಿದರು.
ಅಲ್ಲದೇ ಜೆಡಿಎಸ್ ಉತ್ತಮ ವೋಟ್ ಬ್ಯಾಂಕ್ ಹೊಂದಿದ್ದರೂ ಕೂಡ ಅಲ್ಲಿ ಸ್ಪಧಿ೯ಸಲಿಲ್ಲ. ಹೀಗಾಗಿ ಅವರ ವೋಟು ಕಾಂಗ್ರೆಸ್ ಗೆ ಹೋದವು. ಇದರಿಂದ ಸಿ. ಟಿ ರವು ಸೋತರು. ಆದರೆ ಇದಕ್ಕೆ ಕಾರಣ ಯಡಿಯೂರಪ್ಪ ಎಂಬ ಸುದ್ದಿಗಳು ಓಡಾಡಿದವು.
ಇದರಿಂದ ಸಿ. ಟಿ ರವಿ ಯಡಿಯೂರಪ್ಪ ವಿರುದ್ದ ಸಿಟ್ಟಾದರು. ಗೋವಾದಲ್ಲಿ ಯಡಿಯೂರಪ್ಪ ವಿರುದ್ದ ಹೇಳಿಕೆ ನೀಡಿದರು. ಆದರೆ ಪಕ್ಷದ ವಿರುದ್ದ ಯಾವುದೇ ರೀತಿಯ ಕೆಲಸ ಮಾಡಿಲ್ಲ.
ಈಗ ಲೋಕಸಭಾ ಚುನಾವಣೆಯಲ್ಲೂ ಕೂಡ ಸಿ. ಟಿ ರವಿಗೆ ಸೀಟು ಸಿಕ್ಕಿಲ್ಲ. ಕೋಟಾ ಶ್ರೀನಿವಾಸ ಪೂಜಾರಿಗೆ ಸೀಟು ಕೊಡಲಾಗಿದ್ದು, ಅವರ ಪರವಾಗಿ ಸಿ. ಟಿ ರವಿ ಪ್ರಚಾರದಲ್ಲಿ ತೊಡಗಿದ್ದಾರೆ.
ಬೇರೆಯವರ ರೀತಿ ಸೀಟು ಸಿಗಲಿಲ್ಲ ಎಂಬ ಕಾರಣಕ್ಕೆ ಪಕ್ಷ ತೊರೆಯದೇ ಪಕ್ಷದ ವಿರುದ್ದ ಕೆಲಸ ಮಾಡದೇ ರಾಜ್ಯಾಧ್ಯಕ್ಷರಾದ ವಿಜಯೇಂದ್ರ ಹೇಳಿದ ಕಡೆಗಳಲ್ಲಿ ಪಕ್ಷದ ಪರ ಪ್ರಚಾರ ಮಾಡುತ್ತಿದ್ದಾರೆ.
ಸಿ. ಟಿ ರವರಿಗೆ ಪರಿಷತ್ ವಿಪಕ್ಷ ನಾಯಕನ ಸ್ಥಾನ!
ಹೀಗಾಗಿ ಮೊನ್ನೆ ಕಡೂರಿನಲ್ಲಿ ನಡೆದ ಪ್ರಚಾರ ಕಾಯ೯ಕ್ರಮದಲ್ಲಿ ಯಡಿಯೂರಪ್ಪ ರವರು ಸಿ. ಟಿ ರವರಿಗೆ ತುಂಬಾ ಅನ್ಯಾಯವಾಗಿದ್ದು,
ಅವರಿಗೆ ಪಕ್ಷದಲ್ಲಿ ತಕ್ಕ ಸ್ಥಾನಮಾನ ಸಿಗುವಂತೆ ಶತಾಯಗತಾಯ ಪ್ರಯತ್ನಿಸುವುದಾಗಿ ಹೇಳಿದ್ದಾರೆ. ವಿಧಾನ ಪರಿಷತ್ ವಿಪಕ್ಷ ಸ್ಥಾನಮಾನ ಕೊಡಬಹುದು ಎನ್ನಲಾಗುತ್ತಿದ್ದು,
ಇದರಿಂದಾಗಿ ಇಬ್ಬರ ಮದ್ಯೆಯಿದ್ದ ಬಿರುಕು ದೂರವಾಗಿ ಮತ್ತೇ ಒಂದಾಗುತ್ತಿದ್ದಾರೆ ಎನ್ನಲಾಗಿದೆ.
ಇದು ಯಡಿಯೂರಪ್ಪನವರಿಗೆ ಅನಿವಾರ್ಯವಾಗಿದ್ದು ರಾಜ್ಯದಲ್ಲಿ ತಮ್ಮ ಮಗ ವಿಜಯೇಂದ್ರನೆ ರಾಜ್ಯಾಧ್ಯಕ್ಷನಾಗಿರುವುದರಿಂದ ಬಿಜೆಪಿ ಅವರ ಅಧ್ಯಕ್ಷತೆಯಲ್ಲಿ ಎದುರಿಸುತ್ತಿರುವ ಮೊದಲ ಚುನಾವಣೆ
ಇದಾಗಿದ್ದು ಇದರಲ್ಲಿ ಹೆಚ್ಚು ಸೀಟು ಗೆಲ್ಲುವುದು ಅನಿವಾರ್ಯವಾಗಿದೆ ಅಲ್ಲದೆ ಸದ್ಯಕ್ಕೆ ಬಿಜೆಪಿಯಲ್ಲಿ ಯಾವುದೇ ದೊಡ್ಡ ಮಟ್ಟದ ನಾಯಕ ವಿಧಾನಸಭೆಯಲ್ಲಿ ಗುಡುಗುವ ನಾಯಕ ಇಲ್ಲದಿರುವುದರಿಂದ,
ಹಾಗೂ ಕೋಟ ಶ್ರೀನಿವಾಸ್ ಪೂಜಾರಿ ಅವರ ಲೋಕಸಭೆಯ ಉಡುಪಿ ಮತ್ತು ಚಿಕ್ಕಮಂಗಳೂರು ಕ್ಷೇತ್ರದಲ್ಲಿ ಸ್ಪರ್ಧಿಸಿದ್ದು, ಅವರ ಗೆಲುವು ಬಹುತೇಕ ಖಚಿತವಾಗಿದೆ ಹಾಗಾಗಿ ವಿಧಾನ ಪರಿಷತ್ ನಲ್ಲಿ ಅವರು ವಿರೋಧ ಪಕ್ಷದ ನಾಯಕರಾಗಿದ್ದು
ಆ ಸ್ಥಾನ ಖಾಲಿಯಾಗಲಿದೆ. ಅದನ್ನು ಸಿಟಿ ರವಿ ಅವರಿಗೆ ಕೊಟ್ಟರೆ ವಿಧಾನ ಪರಿಷತ್ ನಲ್ಲಿ ಕಾಂಗ್ರೆಸ್ ಗೆ ಪ್ರಶ್ನೆ ಮಾಡುವ ಖಡಕ್ ನಾಯಕ ಇದ್ದಂತಾಗುತ್ತದೆ. ಇದರಿಂದ ಪಕ್ಷದ ವಚ೯ಸ್ಸು ಹೆಚ್ಚಾಗುತ್ತದೆ.
ಭಾಯಿ-ಭಾಯಿ ಯಾದ ಉಭಯ ನಾಯಕರು!
ಹಾಗಾಗಿ ಯಡಿಯೂರಪ್ಪ ಪಕ್ಷದಲ್ಲಿ ಸಿಟಿ ರವಿ ಅವರಿಗೆ ತಕ ಸ್ಥಾನಮಾನ ನೀಡುವುದಾಗಿ ಹೇಳಿಕೆ ನೀಡಿದ್ದು,
ಈ ಮೂಲಕ ಮತ್ತೆ ರಾಜ್ಯದಲ್ಲಿ ಪಕ್ಷವನ್ನು ಬಲಿಷ್ಠಗೊಳಿಸಲು ಹಾಗೂ ತಮ್ಮ ಮಗನ ರಾಜ್ಯಾಧ್ಯಕ್ಷ ಪಟ್ಟವನ್ನು ಭದ್ರಗೊಳಿಸಿ ಪಕ್ಷದ ಮೇಲಿನ ಹಿಡಿತ ಮುಂದುವರೆಸಲು ಸಿ. ಟಿ ರವಿಯೊಂದಿಗಿನ ಮುನಿಸನ್ನು ಶಮನಗೊಳಿಸಿದ್ದಾರೆ.
ಅಲ್ಲದೇ ರಾಜ್ಯ ಬಿಜೆಪಿಯಲ್ಲಿ ಇದೀಗ ಹಿಂದೂ ನಾಯಕರನ್ನು ಪಕ್ಷದಿಂದ ದೂರವಿಡಲಾಗುತ್ತಿದೆ ಎಂಬ ಮಾತು ಹರಿದಾಡುತ್ತಿದ್ದು ಸಿಟಿ ರವಿ ಅವರಿಗೆ ಸ್ಥಾನಮಾನ ಕೊಟ್ಟರೆ ಈ ಕಳಂಕ ದೂರವಾಗುತ್ತದೆ ಎಂದು ಲೆಕ್ಕಾಚಾರ ಹಾಕಲಾಗುತ್ತಿದೆ.
ಒಟ್ಟಿನಲ್ಲಿ ಪ್ರಾಮಾಣಿಕವಾಗಿ ಪಕ್ಷಕ್ಕಾಗಿ ಕೆಲಸ ಮಾಡುತ್ತಿರುವ ಸಿ. ಟಿ ರವಿಯವರಿಗೆ ತಕ್ಕ ಸ್ಥಾನಮಾನ ಸಿಕ್ಕರೆ ರಾಜ್ಯ ಬಿಜೆಪಿ ಇನ್ನಷ್ಟು ಬಲಿಷ್ಟವಾಗುವುದರಲ್ಲಿ ಸಂದೇಹವಿಲ್ಲ.