Davangere :: 25 ವಷ೯ಗಳಲ್ಲಿ ಸಿದ್ದೇಶ್ವರವರ ಸಾಧನೆ..!!! 18 ವಷ೯ದ ಸಾಧನೆ ಏನು..???
ದಾವಣಗೆರೆ ಲೋಕಸಭಾ (Loksabha election) ಮತಕ್ಷೇತ್ರದಲ್ಲಿ ಚುನಾವಣಾ ಕಾವು ತೀವ್ರ ಸ್ವರೂಪ ಪಡೆದುಕೊಂಡಿದ್ದು, ಶಾಮನೂರು ಶಿವಶಂಕ್ರಪ್ಪ ಮಹಿಳೆಯರು ರಾಜಕಾರಣ ಮಾಡುವ ಬಗ್ಗೆ ಕೊಟ್ಟ ಹೇಳಿಕೆಯಿಂದಾಗಿ ಮಹಿಳೆಯರು ಅಡುಗೆ ಮನೆಯಲ್ಲಿಯೇ ಇರಬೇಕಾ ರಾಜಕಾರಣ ಮಾಡಬಾರದಾ ಎಂಬ ಪ್ರಶ್ನೆಗಳು ಬುಗಿಲೆದ್ದಿವೆ.
ಹೌದು ಶಿವಶಂಕರಪ್ಪನವರ ಇತ್ತೀಚಿಗೆ ಮಹಿಳೆಯರ ಬಗ್ಗೆ ಹಗುರವಾಗಿ ಮಾತನಾಡಿದ್ದು, ಶಿವಶಂಕ್ರಪ್ಪನವರ ಈ ಮಾತುಗಳಿಗೆ ಬಿಜೆಪಿಯ ಲೋಕಸಭಾ (Loksabha election) ಅಭ್ಯರ್ಥಿಯಾದ ಗಾಯತ್ರಿ ಸಿದ್ದೇಶ್ವರ ಅವರು ತಿರುಗೇಟು ನೀಡಿದ್ದಾರೆ.
ಅಲ್ಲದೆ ಮಹಿಳೆಯರು ಕೇವಲ ಅಡುಗೆ ಮನೆಗೆ ಸೀಮಿತವೇ ಅಡುಗೆ ಮಾಡುವ ಮಹಿಳೆಯರು ರಾಜಕಾರಣಕ್ಕೆ ಬರಬಾರದೇ, ಚುನಾವಣೆ ಎದುರಿಸಬಾರದೇ? ಆ ಮನೆಯ ಸೊಸೆಯಾಗಿ ನಿಮ್ಮನ್ನು ಹೀಗೆಯೇ ಅಡುಗೆ ಮನೆಗೆ ಸೀಮಿತಗೊಳಿಸಲಾಗಿದೆಯೇ? ಎಂದು ಹೀಗೆ ಹತ್ತು ಹಲವು ಪ್ರಶ್ನೆಗಳನ್ನು ಗಾಯತ್ರಿ ಸಿದ್ದೇಶ್ವರ ಅವರು ಶಿವಶಂಕರಪ್ಪನವರ ಸೊಸೆಯಾದ ಪ್ರಭಾ ಮಲ್ಲಿಕಾರ್ಜುನ್ ಅವರಿಗೆ ಪ್ರಶ್ನಿಸಿದ್ದು, ಸ್ಪಷ್ಟನೆಗೆ ಆಗ್ರಹಿಸಿದ್ದಾರೆ.
ಶಿವಶಂಕ್ರಪ್ಪನವರ ವಿರುದ್ದ ಚಳುವಳಿ!
ಅಲ್ಲದೆ ಮಹಿಳೆಯರ ಬಗ್ಗೆ ಹಗುರವಾಗಿ ಮಾತನಾಡಿರುವ ಶಿವಶಂಕರಪ್ಪನವರ ವಿರುದ್ಧ ಬಿಜೆಪಿ ಮಹಿಳಾ ಘಟಕವು ಅಡುಗೆ ಮಾಡುವ ಮೂಲಕ ಚಳುವಳಿ ನಡೆಸಲಾಗುವುದು ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷರಾದ ಎನ್.ರಾಜಶೇಖರ್ ತಿಳಿಸಿದ್ದಾರೆ.
ಈ ಚಳುವಳಿಯನ್ನು ಇದೇ ಏಪ್ರಿಲ್ 3 ರಂದು ದಾವಣಗೆರೆಯ ಮುಖ್ಯ ಸರ್ಕಲ್ ನಲ್ಲಿ ಹಮ್ಮಿಕೊಂಡಿದ್ದು, ಚಳುವಳಿಗೆ ಬಿಜೆಪಿ ಲೋಕಸಭಾ ಅಭ್ಯರ್ಥಿಯಾದ ಗಾಯತ್ರಿ ಸಿದ್ದೇಶ್ವರ ರವರು ಚಾಲನೆ ನೀಡಲಿದ್ದಾರೆ.
ಅದು ಕೂಡ ಅಡಿಗೆ ಮಾಡುವ ಮೂಲಕ ಚಾಲನೆ ನೀಡಿ ಶಿವಶಂಕ್ರಪ್ಪನವರ ಹೇಳಿಕೆಯನ್ನು ಖಂಡಿಸುವ ಮೂಲಕ ಮಹಿಳೆಯರು ಅಡುಗೆ ಮಾಡಲು ಸಿದ್ಧ ಹಾಗೂ ರಾಜಕೀಯ ಮಾಡಲು ಸಿದ್ಧ ಎಂಬುದನ್ನು ತೋರಿಸಲು ಹೊರಟಿದ್ದಾರೆ.
ಮಹಿಳೆ ಅಡುಗೆ ಮನೆಗೆ ಸೀಮಿತವಲ್ಲ!
ಈ ಚಳುವಳಿಯಲ್ಲಿ ಅಡುಗೆ ಮಾಡಿ ಮಂಡಕ್ಕಿ ಹಾಗೂ ಚಹಾ ಮಾಡಿ ಸಾರ್ವಜನಿಕರಿಗೆ ಹಂಚಲಾಗುವುದು. ಈ ಮೂಲಕ ಅಡುಗೆ ಮಾಡುವ ಕೈಗಳು, ತೊಟ್ಟಿಲು ತೂಗುವ ಕೈಗಳು ದೇಶವನ್ನೇ ಆಳಬಲ್ಲವು ಎಂಬ ಗಾದೆ ಮಾತಿನಂತೆ ರಾಜಕೀಯಕ್ಕೆ ಮಹಿಳೆಯರು ತಮ್ಮ ಕೊಡುಗೆ ನೀಡಬಲ್ಲರು ಎಂಬುದನ್ನು ತಿಳಿಸಲಿದ್ದಾರೆ.
ಇಷ್ಟೇ ಅಲ್ಲದೆ ಜಿಲ್ಲೆಯಲ್ಲಿ ಮಾತ್ರ ಈ ಚಳುವಳಿ ಹಮ್ಮಿಕೊಳ್ಳದೆ ರಾಜ್ಯಮಟ್ಟದಲ್ಲೂ ಮಹಿಳೆ ಮೋಚಾ೯ ಸದಸ್ಯೆಯರು, ಸೆಲೆಬ್ರಿಟಿಗಳು ಹಾಗೂ ಬಿಜೆಪಿ ಮಹಿಳಾ ಘಟಕದ ಮೂಲಕ ಚಳುವಳಿ ಏರ್ಪಡಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.
25 ವಷ೯ಗಳಲ್ಲಿ Loksabha MP ಸಿದ್ದೇಶ್ವರ ಸಾಧನೆ!
ಜಿ ಎಂ ಸಿದ್ದೇಶ್ವರ ರವರು ದಾವಣಗೆರೆಯಲ್ಲಿ 25 ವರ್ಷಗಳಿಂದ ಲೋಕಸಭಾ ಸದಸ್ಯರಾಗಿದ್ದು, ಇತ್ತೀಚಿಗೆ ಪ್ರಭಾ ಮಲ್ಲಿಕಾರ್ಜುನ್ ರವರು 25 ವರ್ಷಗಳಿಂದ ಆಯ್ಕೆ ಮಾಡಿದ ಜನಪ್ರತಿನಿಧಿ ದಾವಣಗೆರೆಯಲ್ಲಿ ಯಾವುದೇ ಕೆಲಸಗಳನ್ನು ಮಾಡಿಲ್ಲ.
ಜಿಲ್ಲೆಗೆ ಯಾವುದೇ ಅನುದಾನವನ್ನು ತಂದಿಲ್ಲ ಎಂಬಂತೆ ಹೇಳಿಕೆ ನೀಡಿದರು ಈ ಬಗ್ಗೆ ಮಾತನಾಡಿದ ಗಾಯತ್ರಿ ಸಿದ್ದೇಶ್ವರ ರವರು ಜಿಎಂ ಸಿದ್ದೇಶ್ವರ್ ರವರು 25 ವರ್ಷಗಳಲ್ಲಿ ದಾವಣಗೆರೆ ಜಿಲ್ಲೆಗಾಗಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದು,
ಅದರ ಬಗ್ಗೆ ಮಾಹಿತಿಯನ್ನು ಸಹ ಕೊಟ್ಟಿದ್ದಾರೆ ಜಿಎಂ ಸಿದ್ದೇಶ್ವರರವರ ಹತ್ತು ವರ್ಷಗಳ ಸಾಧನೆಯ ರಿಪೋಟ್೯ ಕಾಡ್೯ ಬಿಡುಗಡೆ ಮಾಡುವ ಮೂಲಕ ಪ್ರಭಾ ಮಲ್ಲಿಕಾರ್ಜುನ್ ರವರ ಮಾತಿಗೆ ಆಧಾರಗಳ ಸಮೇತ ಚಾಟಿ ಬೀಸಿದ್ದಾರೆ.
ಯಾವುದೇ ಅಭಿವೃದ್ಧಿ ಕೆಲಸಕ್ಕೆ ಹಣ ಇಲ್ಲ!
ಅಷ್ಟೇ ಅಲ್ಲದೆ ಮುಂದುವರೆದು ಗಾಯತ್ರಿ ಸಿದ್ದೇಶ್ವರ ರವರು ರಾಜ್ಯ ಸರ್ಕಾರದ ಬಗ್ಗೆ ಮಾತನಾಡಿದ್ದು, ಅಧಿಕಾರಕ್ಕೆ ಬಂದಾಗಿನಿಂದ ಯಾವುದೇ ಅಭಿವೃದ್ಧಿ ಕಾರ್ಯಗಳಿಗೆ ಹಣ ಹಾಕದೇ, ಎಸ್ ಸಿಪಿ-ಟಿಎಸ್‌ಪಿ ಯೋಜನೆಯ ಅನುದಾನವನ್ನು ಕೂಡ ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಳ್ಳಲಾಗುತ್ತಿದೆ.
ಹೀಗೆ ಆದರೆ ರಾಜ್ಯದಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯದೆ ಕೇವಲ ಜನರು ಸರ್ಕಾರ ಕೊಡುವ 2000 ಯಿಂದ ಎಷ್ಟು ದಿನ ಬದುಕಬಹುದು. ಇನ್ನು ಗ್ಯಾರಂಟಿ ಯೋಜನೆಗಳಲ್ಲಿ ಶೇಕಡ 15 ರಿಂದ 20 ಪರ್ಸೆಂಟ್ ಅನುದಾನ ಮಾತ್ರ ಫಲಾನುಭವಿಗಳಿಗೆ ಸದ್ಬಳಕೆ ಆಗುತ್ತಿದ್ದು, ಉಳಿದದ್ದು ಪೋಲಾಗುತ್ತಿದೆ.
ಈಗ ಗ್ಯಾರಂಟಿಗಳಿಂದಾಗಿ ತಮ್ಮ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಸ್ವತಃ ಕಾಂಗ್ರೆಸ್ ಶಾಸಕರೇ ಬೇಸರ ವ್ಯಕ್ತಪಡಿಸಿದ್ದಾರೆ ಎಂದು ಗಾಯಿತ್ರಿ ಸಿದ್ದೇಶ್ವರ ಮಾಹಿತಿ ನೀಡಿದ್ದಾರೆ.
18 ವಷ೯ದ ಸಾಧನೆ ಏನು?
ಲೋಕಸಭಾ ಸದಸ್ಯರ ಬಗ್ಗೆ ಮಾತನಾಡುವ ಪ್ರಭ ಮಲ್ಲಿಕಾರ್ಜುನ್ ರವರು, ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಎಸ್ ಎಸ್ ಮಲ್ಲಿಕಾರ್ಜುನ್ ರವರು ಕಳೆದ 18 ವರ್ಷಗಳಿಂದ ಚುನಾಯಿತರಾಗುತ್ತಿದ್ದು ಸಚಿವರಾಗಿದ್ದುಕೊಂಡು ಅವರು ಯಾವ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ ಎಂದು ಪ್ರಶ್ನಿಸಿದ್ದಾರೆ.
ದಾವಣಗೆರೆ ಜಿಲ್ಲೆಯ ರೈತರ ಪರಮುಖ ಬೇಡಿಕೆಯಾಗಿರುವ ಪ್ರತ್ಯೇಕ ಹಾಲು ಒಕ್ಕೂಟ ಸ್ಥಾಪನೆಯಾಗಿಲ್ಲ. ಜಿಲ್ಲೆಯಲ್ಲಿ ಕೃಷಿ ಹಾಗೂ ತೋಟಗಾರಿಕೆ ಕಾಲೇಜುಗಳು ಆಗಿಲ್ಲ. ಒಂದೇ ಒಂದು ಸರ್ಕಾರಿ ಮೆಡಿಕಲ್ ವೈದ್ಯಕೀಯ ಕಾಲೇಜು ಸಹ ಇಲ್ಲ.
ಇದೆಲ್ಲ ಬಿಡಿ ಈಗಿನ ಪರಿಸ್ಥಿತಿಯಲ್ಲಿ ಕುಡಿಯುವ ನೀರಿಗಾಗಿ ಜಿಲ್ಲೆಯಲ್ಲಿ ಜನರು ಪರದಾಡುತ್ತಿದ್ದು, ನೀರಿಗಾಗಿ ಹಾಹಾಕಾರ ಉಂಟಾಗಿದೆ. ಕುಡಿಯುವ ನೀರನ್ನು ಒದಗಿಸಲು ಸಚಿವರಿಗೆ ಸಾಧ್ಯವಾಗಿಲ್ಲ. ಇಂತಹ ಜಿಲ್ಲಾ ಸಚಿವರ ನಿರ್ಲಕ್ಷ್ಯ ಧೋರಣೆಯಿಂದಾಗಿ ಜಿಲ್ಲೆಯಲ್ಲಿ ಯಾವುದೇ ಪ್ರಗತಿಯು ಇಲ್ಲ ಅಭಿವೃದ್ಧಿಯು ಆಗುತ್ತಿಲ್ಲ ಎಂದು ಬಿಜೆಪಿ ಜಿಲ್ಲಾ ವಕ್ತಾರ ಕೊಳೇನಹಳ್ಳಿ ಎಂ.ಸತೀಶ್ ಹೇಳಿಕೆ ನೀಡಿದ್ದಾರೆ.
ಪ್ರಸ್ತುತ ಲೋಕಸಭಾ (Loksabha MP) ಸದಸ್ಯರಾಗಿರುವ ಜಿಎಂ ಸಿದ್ದೇಶ್ವರ ರವರನ್ನು ಬಿಟ್ಟು ಅವರ ಹೆಂಡತಿಗೆ ಬಿಜೆಪಿ ಲೋಕಸಭಾ ಚುನಾವಣಾ ಸೀಟ್ ಹಂಚಿಕೆಯಾದಾಗಿನಿಂದ ದಾವಣಗೆರೆ ಬಿಜೆಪಿಯಲ್ಲಿ ಗೊಂದಲಗಳು ಮನೆ ಮಾಡಿದ್ದವು. ಹಲವರು ಇದಕ್ಕಾಗಿ ಮುನಿಸಿಕೊಂಡಿದ್ದರು.
ಆದರೆ ಇದೀಗ ಮುನಿಸಿಕೊಂಡಿದ್ದ ಮಾಜಿ ಸಚಿವ ಎಸ್ ಎ ರವೀಂದ್ರನಾಥ್ ಹಾಗೂ ಶಿವಯೋಗಿಸ್ವಾಮಿ ಮಾಡಾಳ್ ಮಲ್ಲಿಕಾರ್ಜುನ್ ರವರು ಬಾತಿ ಕ್ಷೇತ್ರದಲ್ಲಿ ಬಿಜೆಪಿ ಪರ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡಿದ್ದಾರೆ.
ಈ ಮೂಲಕ ತಮ್ಮ ಮುನಿಸನ್ನು ಅದು ಮಿಟ್ಟುಕೊಂಡು ಪಕ್ಷಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ಇನ್ನು ಬಿಜೆಪಿಯ ಇನ್ನೊಬ್ಬ ಟಿಕೆಟ್ ಆಕಾಂಕ್ಷಿಯಾಗಿದ್ದ ಎಂಪಿ ರೇಣುಕಾಚಾರ್ಯರವರು ಪ್ರಚಾರದಲ್ಲಿ ಪಾಲ್ಗೊಳ್ಳದಿರುವುದಕ್ಕೆ ಕಾರಣ ಅವರ ಮನೆಯಲ್ಲಿ ಸಮಸ್ಯೆಯಾಗಿದ್ದು, ಸದ್ಯದಲ್ಲೇ ಅವರು ಕೂಡ ಪ್ರಚಾರದಲ್ಲಿ ಪಾಲ್ಗೊಗಳಲ್ಲಿದ್ದಾರೆ ಎಂದು ಎನ್ ರಾಜಶೇಖರ್ ತಿಳಿಸಿದ್ದಾರೆ.