Driving licence New Rules :: ನೀವು ಡ್ರೈವಿಂಗ್ ಲೈಸನ್ಸ್ ಮಾಡಿಸಲು ಆರ್.ಟಿ.ಓ ಗೇ!! ಹೋಗಬೇಕಾಗಿಲ್ಲಡ್ರೈವಿಂಗ್ ಲೈಸನ್ಸ್ ಮಾಡಿಸುವ ವಿಧಾನದಲ್ಲಿ ಬದಲಾವಣೆ!!!
ಭಾರತದಲ್ಲಿ ಜನಸಂಖ್ಯೆ ಹೆಚ್ಚುತ್ತಿದೆ. ಜನಸಂಖ್ಯೆ ಹೆಚ್ಚಿದಂತೆ,ವ್ಯಾಪಾರ ವ್ಯವಹಾರ ವಿಸ್ತಾರವಾಗುತ್ತಿದೆ. ವಿಸ್ತಾರವಾಗುತ್ತಿರುವ ವ್ಯಾಪಾರ ವ್ಯವಹಾರದ ಕೋರಿಕೆಯನ್ನು ಪೂರೈಸಲು ಭಾರತದಲ್ಲಿ ವಾಹನ ಬಳಕೆಯು ಹೆಚ್ಚಾಗುತ್ತಿದೆ.
ದಿನೇ ದಿನೇ ನಾಲ್ಕು ಚಕ್ರದ ವಾಹನಗಳನ್ನು ,ಎರಡು ಚಕ್ರದ ವಾಹನಗಳನ್ನು ಖರೀದಿಸುವ ಜನರ ಸಂಖ್ಯೆ ಹೇರುತ್ತಿದೆ. ಪ್ರತಿದಿನ 50 ಸಾವಿರಕ್ಕೂ ಹೆಚ್ಚು ವಾಹನಗಳು ಭಾರತದ ರಸ್ತೆಗೆ ಹಿಳಿಯುತ್ತಿದ್ದು, ದಶಕಗಳ ಹಿಂದಿನ ಚಾಲನೆ ನಿಯಮಗಳಲ್ಲಿ
ಬದಲಾವಣೆ ಬೇಕಾಗಿದೆ. ಇದನ್ನು ಅರಿತ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಡ್ರೈವಿಂಗ್ ಲೈಸೆನ್ಸ್ ಬಗ್ಗೆ ಹೊಸ ನಿಯಮಗಳನ್ನು ಪ್ರಕಟಣೆ ಮಾಡಿದೆ.
ಡ್ರೈವಿಂಗ್ಗ್ ಲೈಸೆನ್ಸ್ ಪಡೆಯಲು ಮೊದಲು ಇದ್ದ ನಿಯಮಗಳು ಏನು?
ಡ್ರೈವಿಂಗ್ಗ್ ಲೈಸೆನ್ಸ್ ಪಡೆಯುವುದು ಭಾರತದಲ್ಲಿ ಒಂದು ದೊಡ್ಡ ಹೋರಾಟದಂತೆಯೇ ಇತ್ತು.
*ಮೊದಲು ಆರ್ ಟಿ ಓ ಆಫೀಸ್ ಗೆ ಹೋಗಿ ಡ್ರೈವಿಂಗ್ ಲೈಸೆನ್ಸ್ ಪಡೆಯಲು ಅರ್ಜಿ ಸಲ್ಲಿಸಬೇಕು.
* ನಂತರ ನಮ್ಮ ಸರದಿ ಬಂದಾಗ ಆರ್.ಟಿ.ಓ ಆಫೀಸ್ ಗೆ ಹೋಗಿ ಟ್ರಾಫಿಕ್ ನಿಯಮ ಹಾಗೂ ಸೂಚನೆಯ ಬಗ್ಗೆ ಆನ್ಲೈನ್ ಪರೀಕ್ಷೆ ನೀಡಬೇಕಾದದ್ದು.
* ಆ ಪರೀಕ್ಷೆಯಲ್ಲಿ ತೀರ್ಗಡೆ ಯಾದರೆ ಎಲ್.ಎಲ್.ಆರ್ ಅಂದರೆ ಲರ್ನಸ್ ಲೈಸೆನ್ಸ್ ದೊರೆಯುತ್ತದೆ.
* ಆಗ ಆ ಎಲ್ ಬೋರ್ಡ್ ಅನ್ನು ಗಾಡಿಯ ಮೇಲೆ ಅಂಟಿಸಿಕೊಂಡು ವಾಹನ ಚಾಲನೆಯನ್ನು ಕಲಿಯುವಂತದ್ದು.
* ಲರ್ನರ್ ಲೈಸೆನ್ಸ್ ದೊರೆತ ಆರು ತಿಂಗಳುಗಳಲ್ಲಿ ಡ್ರೈವಿಂಗ್ ಟೆಸ್ಟ್ ಅನ್ನು ನೀಡಿ ಡ್ರೈವಿಂಗ್ ಲೈಸೆನ್ಸ್ ಪಡೆಯಬೇಕು.
ಡ್ರೈವಿಂಗ್ ಲೈಸೆನ್ಸ್ ಪಡೆಯಲು ನಿಯಮಗಳನ್ನು ಬದಲಾಯಿಸಲು ಕಾರಣವೇನು?
ಲೈಸೆನ್ಸ್ ಪಡೆಯವುದು ಯುದ್ಧ ಮಾಡಿದಷ್ಟೇ ಕಷ್ಟ.ಸಾಮಾನ್ಯ ಜನರು ಆ ಭ್ರಷ್ಟರು ತುಂಬಿರುವ ಆರ್.ಟಿ.ಓ ಆಫೀಸ್ ಗೆ ಹೋಗಿ,ಅಲ್ಲಿ ಕಾಯ್ದು,
ಭ್ರಷ್ಟರಿಗೆ ಅಗತ್ಯಕ್ಕಿಂತ ಜಾಸ್ತಿ ಹಣವನ್ನು ಸುರಿದು, ತಮ್ಮ ಹಣ ಮತ್ತು ಸಮಯ ಎರಡನ್ನು ವ್ಯರ್ಥ ಮಾಡಿಕೊಂಡಿದ್ದು ಸಾಕು ಎಂದು, ಕೇಂದ್ರ ಸರ್ಕಾರವು ಡ್ರೈವಿಂಗ್ ಲೈಸೆನ್ಸ್ ಪಡೆಯಲು ಹೊಸ ನಿಯಮಗಳನ್ನು ತಂದಿದೆ.
ಡ್ರೈವಿಂಗ್ ಲೈಸೆನ್ಸ್ ಪಡೆಯಲು ಹೊಸ ನಿಯಮಗಳು ಏನು?
ಡ್ರೈವಿಂಗ್ ಲೈಸನ್ಸ್ ಪಡೆಯಲು ಇನ್ನು ಮುಂದೆ ಆರ್.ಟಿ.ಓ ಆಫೀಸ್ ಗೆ ಹೋಗಬೇಕೆಂದು ಇಲ್ಲ.ಖಾಸಗಿ ಸಂಸ್ಥೆಗಳಲ್ಲಿ ಇನ್ನು ಮುಂದೆ ಲೈಸೆನ್ಸ್ ಲಭ್ಯವಾಗುತ್ತದೆ. ಹಾಗಂತ ಎಲ್ಲಾ ಡ್ರೈವಿಂಗ್ ಶಾಲೆಗಳು ಲೈಸೆನ್ಸ್ ಕೊಡಲು ಸಾಧ್ಯವಿಲ್ಲ. ಲೈಸನ್ಸ್ ಕೊಡಲು ಕೆಲವೊಂದಿಷ್ಟು ಅರ್ಹತೆಗಳನ್ನು ಹೊಂದಿರಬೇಕಾಗುತ್ತದೆ.
• ಲೈಸೆನ್ಸ್ ಕೊಡಲು ಖಾಸಗಿ ಸಂಸ್ಥೆಗಳು ಹೊಂದಿರಬೇಕಾದ ಅರ್ಹತೆಗಳು:
* ಆ ಡ್ರೈವಿಂಗ್ ಶಾಲೆಯು ಕಣ್ಣಿಷ್ಟ ಒಂದು ಎಕ್ಕರೆ ಜಾಗವನ್ನು ಹೊಂದಿರಬೇಕು.
* ನಾಲ್ಕು ಚಕ್ರದ ಗಾಡಿಗೆ ಲೈಸೆನ್ಸ್ ಕೊಡಬೇಕೆಂದರೆ ಎರಡು ಎಕ್ಕರೆ ಜಾಗವನ್ನು ಹೊಂದಿರಬೇಕು.
* ಪರೀಕ್ಷ ಸೌಲಭ್ಯಗಳು: ಖಾಸಗಿ ಸಂಸ್ಥೆಯು ಪರೀಕ್ಷೆಯನ್ನು ಮಾಡಲು ಸರಿಯಾದ ಟ್ರ್ಯಾಕ್ಗಳನ್ನೆಲ್ಲ ಹೊಂದಿರಬೇಕು.
* ತರಬೇತಿದಾರ ಕನಿಷ್ಠ ಹೈ ಸ್ಕೂಲ್ ಡಿಪ್ಲೋಮವನ್ನು ಮುಗಿಸಿರಬೇಕು ಮತ್ತು ಐದು ವರ್ಷದ ಡ್ರೈವಿಂಗ್ ಅನುಭವವನ್ನು ಹೊಂದಿರಬೇಕು.
ಅದಷ್ಟೇ ಅಲ್ಲದೆ ಬಯೋಮೆಟ್ರಿಕ್ಸ್ ಮತ್ತು ಐ.ಟಿ ವ್ಯವಸ್ಥೆಗಳ ಬಗ್ಗೆ ಮಾಹಿತಿ ಹೊಂದಿರಬೇಕು ಮತ್ತು ಅದನ್ನು ಬಳಸುವ ವಿಧಾನವು ಅರಿತಿರಬೇಕು.
ಲೈಸನ್ಸ್ ಪಡೆಯಲು ಖಾಸಗಿ ಸಂಸ್ಥೆಗಳಿಗೆ ನಾವು ಕಟ್ಟಬೇಕಾದ ಹಣ:
ಲೈಸನ್ಸ್ ಪಡೆಯುವ ನೆಪದಲ್ಲಿ ಖಾಸಗಿ ಸಂಸ್ಥೆಗಳು ಸುಲಿಗೆ ಮಾಡುವುದನ್ನು ತಪ್ಪಿಸಲು,ಕೇಂದ್ರ ಸರ್ಕಾರವು, ಹಣವನ್ನು ನಿಗದಿಪಡಿಸಿದೆ.
* ಎಲ್.ಎಲ್.ಆರ್ ಅಥವಾ ಫಾರಂ-3 ಪಡೆಯಲು ₹150 ಕಟ್ಟಬೇಕು.
* ಎಲ್.ಎಲ್.ಆರ್ ಪರೀಕ್ಷೆಗೆ-₹50 ಕಟ್ಟಬೇಕು.
*ನಿಮ್ಮ ಡ್ರೈವಿಂಗ್ ಟೆಸ್ಟ್ ನೀಡಲು-₹300 ಕಟ್ಟಬೇಕು.
* ಡ್ರೈವಿಂಗ್ ಲೈಸೆನ್ಸ್ ಪಡೆಯಲು-₹200 ಕಟ್ಟಬೇಕ.
*ಅಂತರಾಷ್ಟ್ರೀಯ ಡ್ರೈವಿಂಗ್ ಅನುಮತಿ ಪಡೆಯಬೇಕೆಂದರೆ-₹1000 ಕಟ್ಟಬೇಕು.
* ನಿಮ್ಮ ಡ್ರೈವಿಂಗ್ ಲೈಸೆನ್ಸ್ ಗೆ ಮತ್ತೊಂದು ರೀತಿಯ ವಾಹನವನ್ನು ಸೇರಿಸಬೇಕೆಂದರೆ-₹500 ಕಟ್ಟಬೇಕು.
* ನಿಮ್ಮ ಲೈಸೆನ್ಸ್ ಅನ್ನು ನವೀಕರಣ ಮಾಡಿಸಬೇಕೆಂದರೆ-₹200 ಕಟ್ಟಬೇಕು.
*ನಿಮ್ಮ ಲೈಸೆನ್ಸ್ ನ ಅವಧಿ ಮುಗಿದು ಅದನ್ನು ನವೀಕರಣ ಮಾಡುವ ಸಮಯ ಹೆಚ್ಚಾದಲ್ಲಿ-₹300+ ಪ್ರತಿವರ್ಷಕ್ಕೂ ₹1000 ಹೆಚ್ಚಾಗಿ ಕಟ್ಟುತ್ತಾ ಹೋಗಬೇಕು.
* ನಿಮಗೆ ಲೈಸನ್ಸ್ ಕೊಡುವವರ ಮೇಲೆ ತಕರಾರು ಇದ್ದಲ್ಲಿ, ನಿಯಮ 29ರ ಪ್ರಕಾರ-₹500 ಕೊಟ್ಟು ಮನವಿ ಸಲ್ಲಿಸುವಂತದ್ದು.
*ಡ್ರೈವಿಂಗ್ ಲೈಸೆನ್ಸ್ ಅಲ್ಲಿ ನಿಮ್ಮ ವಿಳಾಸ ಅಥವಾ ಯಾವುದಾದರೂ ವಿಷಯವನ್ನು ಬದಲಿಸಬೇಕೆಂದರೆ-₹200 ಕಟ್ಟಬೇಕು.
ಡ್ರೈವಿಂಗ್ ಲೈಸೆನ್ಸ್ ಅನ್ನು ನವೀಕರಣ ಮಾಡಿಸುವ ವಿಧಾನ:
* ಯಾವುದೇ ಲೈಸೆನ್ಸ್ ಪಡೆದ 20 ವರ್ಷಗಳಲ್ಲಿ ಅದನ್ನು ನವೀಕರಣ ಮಾಡಬೇಕಾದದ್ದು.
*ನಿಮ್ಮ ವಯಸ್ಸು 40ಕ್ಕೂ ಹೆಚ್ಚು ಆದಲ್ಲಿ ಲೈಸೆನ್ಸ್ ಪಡೆದ ಹತ್ತು ವರ್ಷಗಳಲ್ಲಿ ಅದನ್ನು ನವೀಕರಣ ಮಾಡಬೇಕು.
* ವಾಣಿಜ್ಯ ಲೈಸೆನ್ಸಗಳನ್ನು ಪ್ರತಿ 3 ವರ್ಷಕ್ಕು ಒಮ್ಮೆ ನವೀಕರಣ ಮಾಡಿಸುವಂತದ್ದು.
ಡ್ರೈವಿಂಗ್ ಲೈಸನ್ಸ್ ಪಡೆಯುವ ಮೊದಲು,ತರಬೇತಿ ಅವಧಿ ಎಷ್ಟಿರಬೇಕು?
* ಎಲ್.ವಿ.ಎಮ್( ಲೈಟ್ ಮೋಟಾರ್ ವೆಹಿಕಲ್)- ಅಂದರೆ ಅಗುರವಾದ ವಾಹನಗಳಾದ ಕಾರ್, ಬೈಕ್, ಆಟೋ ಈ ರೀತಿ ವಾಹನಗಳಿಗೆ 4ಕ್ಕೂ ವಾರಗಳಲ್ಲಿ 29 ಗಂಟೆಗಳ ಕಾಲ ತರಬೇತಿ ನಡೆದಿರಬೇಕು.
ಅದರಲ್ಲಿ 8 ಗಂಟೆಗಳ ಕಾಲ- ಸಿದ್ಧಾಂತ ತರಬೇತಿ 21ಗಂಟೆಗಳ ಕಾಲ- ಪ್ರಯೋಗಿಕ ತರಬೇತಿ ಹೊಂದಿರಬೇಕು.
ಪ್ರಾಯೋಗಿಕ ತರಬೇತಿಗಳಲ್ಲಿ ಎಲ್ಲಾ ರೀತಿಯ ರಸ್ತೆಯಲ್ಲಿ ವಾಹನ ಓಡಿಸುವುದು, ವಾಹನ ನಿಲ್ಲಿಸುವುದು, ಹಾಗೂ ಎಲ್ಲಾ ರೀತಿಯ ವಾಹನ ಕೌಶಲ್ಯವನ್ನು ತಿಳಿದುಕೊಳ್ಳಬೇಕು.
ಇನ್ನು ಸಿದ್ಧಾಂತ ತರಬೇತಿಯಲ್ಲಿ ಟ್ರಾಫಿಕ್ ನಿಯಮಗಳು, ಆಗಬಹುದಾದ ಆಘಾತಗಳ ಬಗ್ಗೆ, ಇಂಧನ ಉಪಯೋಗದ ಬಗ್ಗೆ ಬೋಧನೆ ನೀಡಲಾಗುತ್ತದೆ.
• ಹೆಚ್.ವಿ.ಎಂ( ಹೆವಿ ಮೋಟಾರ್ ವೆಹಿಕಲ್)- ಅಂದರೆ ಭಾರವಾದ ವಾಹನಗಳಾದ ಬಸ್,ಲಾರಿ ಮುಂತಾದ ವಾಹನಗಳಿಗೆ 6 ವಾರಗಳಲ್ಲಿ,38 ಗಂಟೆಗಳ ತರಬೇತಿ ಹೊಂದಿರಬೇಕಾಗುತ್ತದೆ.
ಅದರಲ್ಲಿ 8 ಗಂಟೆಗಳ ಸಿದ್ದಾಂತ ತರಬೇತಿ,31 ಗಂಟೆಗಳ ಪ್ರಾಯೋಗಿಕ ತರಬೇತಿ ನೀಡಲಾಗುತ್ತದೆ.
ನಿಯಮ ತಪ್ಪಿಸಿದ್ದಲ್ಲಿ ಕಟ್ಟಬೇಕಾದ ದಂಡ:
ಹೊಸ ನಿಯಮಗಳ ಪ್ರಕಾರ ರೂಲ್ಸ್ ತಪ್ಪಿದ್ದಲ್ಲಿ ಕಟ್ಟಬೇಕಾದ ದಂಡವನ್ನು ಏರಿಸಲಾಗಿದೆ.
*ವೇಗವಾಗಿ ಗಾಡಿ ಚಲಾಯಿಸುವವರಿಗೆ ದಂಡವನ್ನು ₹1000 ಇಂದ ₹2000ಕ್ಕೆ ಏರಿಸಲಾಗಿದೆ.
*18 ವರ್ಷಕ್ಕೂ ಕೆಳಗಿನವರು ಗಾಡಿ ಚಲಾಯಿಸುವುದು ಕಂಡುಬಂದಲ್ಲಿ ₹25,000ರದವರೆಗೆ ದಂಡ ಹಾಕಲಾಗುವುದು.
ಅಷ್ಟೇ ಅಲ್ಲದೆ ಗಾಡಿ ಮಾಲೀಕನ ರಿಜಿಸ್ಟ್ರೇಷನ್ ಕಾರ್ಡ್ ರದ್ದುಗೊಳ್ಳುತ್ತದೆ.ಜೊತೆಗೆ
ಆ ಅಪ್ರಾಪ್ತನಿಗೆ 25ವರ್ಷದ ವರೆಗೆ ಡ್ರೈವಿಂಗ್ ಲೈಸೆನ್ಸ್ ಸಿಗುವುದಿಲ್ಲ.
ಈ ಎಲ್ಲಾ ಹೊಸ ನಿಯಮಗಳು ಜೂನ್ 1,2024ರಿಂದ ಜಾರಿ.ಈಹೊಸ ನಿಯಮಗಳು ಜನವರಿಗೆ ಹೇಗೆ ಉಪಯೋಗವಾಗುತ್ತದೆ ಎಂದು ಕಾಯ್ದು ನೋಡಬೇಕಾಗಿದೆ.