Bhadra dam::ಭದ್ರಾ ಜಲಾಶಯ(Bhadra dam)ದಿಂದ ನದಿಗೆ ನೀರು ಹರಿಸದಂತೆ ಸಿಎಂಗೆ ರೈತರ ಮನವಿ! ಶಿವಮೊಗ್ಗ ರೈತರ ಆಗ್ರಹವೇನು?
ರಾಜ್ಯದಲ್ಲಿ ಬಿರು ಬೇಸಿಗೆ ಒಂದು ಕಡೆಯಾದರೆ ಕಳೆದ ಮಳೆಗಾಲದಲ್ಲಿ ಉಂಟಾದ ಮಳೆ ಕೊರತೆ ಈ ಬಾರಿ ಬರಗಾಲ ಉಂಟು ಮಾಡಿದ್ದು ಎಲ್ಲೆಲ್ಲಿಯೂ ನೀರಿಗಾಗಿ ಕೂಗು ಕೇಳಿ ಬರುತ್ತಿದೆ ಇಂತಹ ಸಮಯದಲ್ಲಿ ಕುಡಿಯುವುದಕ್ಕಾಗಿ
ಕೃಷಿಗಾಗಿ ನೀರು ಒದಗಿಸುವುದು ಕಷ್ಟ ಸಾಧ್ಯವಾಗಿದ್ದು ಇದೀಗ ರೈತರು ತಮ್ಮ ಬೆಳೆ ಉಳಿಸಿಕೊಳ್ಳಲು ಮುಖ್ಯಮಂತ್ರಿಗಳ ಮೊರೆ ಹೋಗಿದ್ದಾರೆ. ಭದ್ರಾ ಜಲಾಶಯದಲ್ಲಿ ಶೇಖರಣೆಗೊಂಡಿರುವ
ಅಲ್ಪ ಪ್ರಮಾಣದ ನೀರನ್ನು ಕೆಳಭಾಗದ ನದಿಗೆ ಹರಿಸಿದರೆ ಶಿವಮೊಗ್ಗ ರೈತರು ಕೃಷಿಗೆ ನೀರು ಒದಗಿಸುವುದು ಹೇಗೆ ಎಂಬುದು ರೈತರ ಪ್ರಶ್ನೆಯಾಗಿದ್ದು, ಅದಕ್ಕಾಗಿ ನದಿಗೆ ನೀರು ಹರಿಸದಂತೆ ಮನವಿ ಸಲ್ಲಿಸಲು ಮುಂದಾಗಿದ್ದಾರೆ.
ಹೌದು ಶಿವಮೊಗ್ಗದ ರೈತರು ಬೆಳೆದಿರುವ ತೆಂಗು ಹಾಗೂ ಅಡಿಕೆ ಮರಗಳನ್ನು ಉಳಿಸಿಕೊಳ್ಳಲು ನೀರು ಅವಶ್ಯಕತೆವಾಗಿದ್ದು ಭದ್ರಾ ಜಲಾಶಯದಿಂದ ನದಿಗೆ ನೀರು
ಹರಿಸಬಾರದೆಂದು ರೈತ ಸಂಘದ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಬಸವರಾಜಪ್ಪ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಗದಗ-ಬೆಟಗೇರಿ ನಗರಕ್ಕೆ ಕುಡಿಯುವ ನೀರು ಪೂರೈಕೆ!
ಇದಕ್ಕೆ ಮುಖ್ಯ ಕಾರಣವಾಗಿದ್ದು, ಗದಗ ಹಾಗೂ ಬೆಟಗೇರಿ ನಗರದ ಜನರಿಗೆ ಕುಡಿಯುವ ನೀರನ್ನು ಒದಗಿಸಲು ಭದ್ರಾ ಜಲಾಶಯ(Bhadra dam) ದಿಂದ ನದಿಗೆ ನೀರು ಹರಿಸಲಾಗುತ್ತದೆ.
ಈ ರೀತಿ ನದಿಗೆ ಹರಿಸಲಾದ ನೀರನ್ನು ಗದಗ ಹಾಗೂ ಬೆಟಗೇರಿ ನಗರದ ಜನರಿಗೆ ಕುಡಿಯುವ ನೀರಿಗಾಗಿ ಒದಗಿಸಲಾಗುತ್ತದೆ.
ಆದರೆ ಶಿವಮೊಗ್ಗದ ರೈತರು ಹೇಳುವುದೇನೆಂದರೆ ಈಗಾಗಲೇ ಮಾರ್ಚ್ 30 ರಿಂದ ಏಪ್ರಿಲ್ 6 ರವರೆಗೆ ನದಿಗೆ ನೀರು ಹರಿಸಲಾಗಿದ್ದು,
ಈ ಮೊದಲೆಲ್ಲ ಒಂದು ಬಾರಿ ನೀರು ಹರಿಸಿದರೆ ಮೂರು ತಿಂಗಳವರೆಗೆ ಕುಡಿಯಲು ನೀರು ಸಿಗುತ್ತಿತ್ತು. ಆದ್ದರಿಂದ ಇತ್ತೀಚಿಗೆ ನೀರು ಹರಿಸಿದ್ದು ಮೂರು ತಿಂಗಳವರೆಗೆ ಮತ್ತೆ ನದಿಗೆ ನೀರನ್ನು ಹರಿಸದಂತೆ ಮನವಿ ಮಾಡಿದ್ದಾರೆ.
Bhadra ಜಲಾಶಯದಲ್ಲಿ ನೀರಿನ ಸಂಗ್ರಹ!
ಮತ್ತೊಂದು ಮುಖ್ಯ ಕಾರಣ ಎಲ್ಲ ಜಲಾಶಯಗಳಲ್ಲೂ ನೀರಿನ ಅತೀವ ಕೊರತೆ ಉಂಟಾಗಿದ್ದು, ಭದ್ರಾ ಜಲಾಶಯವೇನು ಹೊರತಾಗಿಲ್ಲ.
ಜಲಾಶಯವು 128.8 ಟಿಎಂಸಿ ಸಾಮರ್ಥ್ಯ ಹೊಂದಿದ್ದರೂ ಕೂಡ ಪ್ರಸ್ತುತ ಜಲಾಶಯದಲ್ಲಿ ಕೇವಲ 17.5 ಟಿಎಂಸಿ ನೀರು ಸಂಗ್ರಹವಾಗಿದೆ.
ಅದರಲ್ಲಿ 13 ಟಿಎಂಸಿ ನೀರು ಡೆಡ್ ಸ್ಟೋರೇಜ್ ಆಗಿದ್ದು, ರೈತರಿಗೆ ಜನರ ಉಪಯೋಗಕ್ಕೆ ಬರುವುದಿಲ್ಲ. ಇನ್ನುಳಿದ 4.5 ಟಿಎಂಸಿ ನೀರಿನಲ್ಲಿ 1.5 ಟಿಎಂಸಿ ನೀರಿ ಕುಡಿಯುವ ನೀರಿಗಾಗಿ ಮೀಸಲಿಟ್ಟಿದ್ದು,
ಉಳಿದ 3 ಟಿಎಂಸಿ ನೀರನ್ನು ಕೃಷಿಗಾಗಿ ಒದಗಿಸಬೇಕಿದೆ. ಆದ್ದರಿಂದ ರೈತರು ಸಕಾ೯ರಕ್ಕೆ ನದಿಗೆ ನೀರು ಹರಿಸದೇ ಶಿವಮೊಗ್ಗದ ಅಡಿಕೆ ಹಾಗೂ ತೆಂಗಿನ ತೋಟಗಳಿಗೆ ನೀರು ಕೊರತೆ ಹೆಚ್ಚಾಗಿದ್ದು,
ಜಲಾಶಯದಲ್ಲಿರುವ 3 ಟಿಎಂಸಿ ನೀರನ್ನು ನಾಲೆಗಳ ಮೂಲಕ ಹರಿಸಿ ಕೃಷಿಗೆ ನೀರನ್ನು ಬಳಸಿಕೊಳ್ಳಲು ಅನುಕೂಲ ಮಾಡಿಕೊಡಬೇಕೆಂದು ಮನವಿ ಸಲ್ಲಿಸಿದ್ದಾರೆ.