ಆನ್ಲೈನ್ ಜಾಲತಾಣದ ಮೂಲಕ ಜನರ ಹಣವನ್ನು ದೋಚುವುದು!! ಏನಿದು ಮನಿ ಟ್ರ್ಯಾಕ್? ಹೇಗೆ ಇದನ್ನು ಸಂರಕ್ಷಿಸುವುದು?
ಸಾಗುತ್ತಿರುವ ಸುಗಮವಾದ ಬದುಕಿಗೆ ಸಾಲದ ಸುಲಿಗೆ ವೊಡ್ಡುವುದೇ ಮನುಷ್ಯನ ಎಲ್ಲಿಲ್ಲದ ದುರಾಸೆ.
ಈ ಆಸೆ ದುರಾಸೆಗಳ ಬಲೆಯಲ್ಲಿ ಸಿಕ್ಕಿದ ಮನುಷ್ಯನಿಗೆ ಈ ಆಮೆಶಗಳನ್ನು ಒಡ್ಡಿ ಬಕಾಸುರನಂತೆ ಕಾಡುವ ಅಂಶಗಳೆಂದರೆ ನೋ ಕಾಸ್ಟ್ಈ
.ಎಂ.ಐ, ಬೈ ಒನ್ ಗೆಟ್ ಒನ್ ಫ್ರೀ, ಬೈ ನೌ ಪೆ ಲೆಟರ್, ಆಫರ್ ಕ್ಲೋಸ್ ಸೂನ್, ಫ್ರೀಯಾಗಿ ಸಿಗುವ ಕ್ರೆಡಿಟ್ ಕಾರ್ಡ್, ಅದರಿಂದಲೇ ಎಲ್ಲಾ ಪೇಮೆಂಟ್‌ಗಳು,
ಬಿಗ್ ಬಿಲಿಯನ್ ಸೇಲ್, ದೀಪಾವಳಿ ಧಮಾಕ, ಇವೆಲ್ಲವೂ ಕಾರ್ಪೋರೇಟ್ ಕಂಪನಿಯವರು ತಮ್ಮ ಸೇಲ್ಸ್ ಹೆಚ್ಚಿಸಲು ಮಿಡಲ್ ಕ್ಲಾಸ್ ಕುಟುಂಬದ ಮೇಲೆ ಬಳಸುತ್ತಿರುವ ಹಸ್ತ್ರ ಬ್ಯಾನರ್.
ಪೆ ಚೆಕ್ ಇಂದ ಪೇ ಚೆಕ್ ಎಂಬ ಜೀವನ ಶೈಲಿಯನ್ನು ನೆನೆಸುತ್ತಿರುವ ಮನುಷ್ಯನ ಜೀವನ ನಿಂತಲ್ಲೇ ನಿಂತು ಹೋಗಿದೆ.
ಯುವಕರನ್ನು ನಿಂತಲ್ಲೇ ನಿಲ್ಲಿಸಿರುವ ಟ್ರ್ಯಾಪ್ಗಳು ಯಾವುದು?
ನಮ್ಮ ದೇಶದಲ್ಲಿರುವ ಕಂಪನಿಗಳು ತಮ್ಮ ಸೇಲ್ಸ್ ಗಳನ್ನು ಹೆಚ್ಚಿಸಲು ಕಾನ್ಸುಮರಿಸಂ ಎಂಬ ತಂತ್ರವನ್ನು ಬಳಸುತ್ತವೆ.
ಅಂದರೆ ತಮ್ಮ ಪ್ರಾಡಕ್ಟ್ ಗಳನ್ನು ಪ್ರಮೋಷನ್ ಮಾಡಿಕೊಳ್ಳುತ್ತೇವೆ.
ಈ ಪ್ರಮೋಷನ್‌ಗಳಿಂದಾಗಿ ಬಡವರು ಮತ್ತು ಮಿಡಲ್ ಕ್ಲಾಸ್ ಜನರು,ತಾವು ಹಿಂದೆ ಉಳಿಯುವ ಆತಂಕದಿಂದ ಎಲ್ಲರೂ ಈ ರೀತಿ ನಡೆಯಲು ಪ್ರಾರಂಭಿಸುತ್ತಾರೆ.
ಐಫೋನ್ ಬ್ರಾಡ್ ಬಟ್ಟೆ ಎಲ್ಲದರ ಅವಶ್ಯಕತೆ ಇಲ್ಲದಿದ್ದರೂ ತಮ್ಮ ಬಳಿ ಹಣವಿಲ್ಲದಿದ್ದರೂ
ಓಡುವಂತೆ ಇಂದು ಮುಂದೆ ಯೋಚಿಸದೆ ಇಎಂಐ ಕಟ್ಟಿ ಕಂಪನಿಗಳ ಪ್ರಪಂಚದ ಸೆ ಗಳ ಬಲೆಗೆ ಬಿದ್ದ ತಮ್ಮ ಜೀವನ ಕಳೆಯುತ್ತಾರೆ.
ನೋ ಕಾಸ್ಟ್ ಇಎಂಐ, ಭಾಯಿ ನೌ ಲೇಟರ್ ಇವೆಲ್ಲವೂ ಯುವಕರ ಸಾಲದ ಬಲೆಗೆ ದೂಕಿ ಬಡವ ವ್ಯವಸ್ಥೆ ಮಾಡುತ್ತಿದೆ.
ಐ.ಎಂ.ಐ ಕಲ್ಚರ್ ಶುರುವಾದದ್ದು ಹೇಗೆ?
ಹಣದ ಕೊರತೆಯಿಂದ ಕೋವಿಡ್ ಸಂದರ್ಭದಲ್ಲಿ ಐ.ಎಂ.ಐ ಕಲ್ಚರ್ ಗೆ ದೊಡ್ಡ ಬೂಸ್ಟ್ ದೊರಕಿತ್ತು. ಕೊರೋನಕ್ಕಿಂತ ದೊಡ್ಡ ಸಾಂಕ್ರಾಮಿಕ ರೋಗ
ಇ. ಎಂ.ಐ ಕಲ್ಚರ್ ಕಾಡುತ್ತಿದೆ.ಕೊರೋನಾ ಸಂದರ್ಭದಲ್ಲಿ ಈಗ 220 ಪರ್ಸೆಂಟೇಜ್ ಹೆಚ್ಚಳವಾಯಿತು ಇಎಂಐ ವಹಿವಾಟುಗಳು.
ಆದರೆ ಈಗ ಕರೋನ ದೂರವಾದರೂ ಐ.ಎಂ. ಐ ಕಲ್ಚರ್ ಇನ್ನು ಬೆನ್ನು ಬಿಡದೆ ಕಾಡುತ್ತಿದೆ.
ಬಜೆಟ್ ಇಲ್ಲದ ಟ್ರ್ಯಾಪ್.
ಸಂಬಳ ಮೂರು ಕಾಸು ಖರ್ಚು ಹಾರು ಕಾಸು ಎಂಬವರ ತೊಂದರೆ ಇದು.
ಹಾಸಿಗೆ ಇದ್ದಕ್ಕಿಂತ ಹೆಚ್ಚು ಕಾಲು ಚಾಚಿ ತಮ್ಮ ಆರ್ಥಿಕ ವ್ಯವಸ್ಥೆ ಇವರು ಹದಗೆಡಿಸಿಕೊಳ್ಳುತ್ತಾರೆ.
ಆದರೆ ವ್ಯವಸ್ಥಿತ ಬಜೆಟ್ ಯೋಜನೆ ಇದ್ದವರು ಯಾವುದೇ ಟ್ರ್ಯಾಪ್ ಗಳಿಗೆ ಬೀಳಲು ಸಾಧ್ಯವಿಲ್ಲ.
ಅಪ್ಪ ಹಾಕಿದ ಆಲದ ಮರ
ಇದು ಶ್ರೀಮಂತ ಮಕ್ಕಳ ತೊಂದರೆ. ಕೂತಿ ತಿಂದವರಿಗೆ ಕುಡಿಕೆ ಅನ್ನವು ಸಾಲಲ್ಲ. ಅಪ್ಪ ಕೂಡಿಟ್ಟಿದ್ದ ಹಣದಿಂದ ಇನ್ನಷ್ಟು ಹಣ ಹೆಚ್ಚಿಸುವ ಬದಲು,
ಇದ್ದ ಹಣವನ್ನು ಇಲ್ಲವಾಗಿಸುವ ಜನರೇ ಹೆಚ್ಚಾಗಿದ್ದಾರೆ. ಅಪ್ಪ ದುಡಿದಿದ್ದಾರೆ ನಾವೇಕೆ ಬಾರಿಸಬೇಕು ಎಂಬುದು ಸಹ ಒಂದು ರೀತಿಯ ಟ್ರ್ಯಾಪ್ ಆಗಿದೆ.
ಇತರೆ ಮನಿ ಟ್ರ್ಯಾಪ್ಗಳು.
ತುರ್ತು ಶ್ರೀಮಂತರಾಗಬೇಕೆಂಬ ತುಡಿತ
ನಿರ್ವಹಣೆ ಇಲ್ಲದ ಬಡ್ಡಿ
ಜೂಜು ಮುಂತಾದ ಚಟಗಳು
ಆಸೆ ಪಡಬಾರದೆಂದು ಈ ಪ್ರಪಂಚ ಯಾವಾಗಲೂ ಹೇಳಿಲ್ಲ. ಆದರೆ ಜೀವನದಲ್ಲಿ ಒಂದು ವಸ್ತುವನ್ನು ಆಗಿರಲಿ,
ಈ ಸಂಬಂಧವೇ ಆಗಿರಲಿ ಯೋಗ್ಯತೆ ಮೀರಿ ಆಸೆ ಪಡಬಾರದು.
ನಮ್ಮ ಯೋಗ್ಯತೆ ಏನೆಂದು ತಿಳಿದು ಆಸೆ ಪಡಬೇಕು ವಿನಹ ಯೋಗ್ಯತೆ ಮೀರಿ ಆಸೆ ಪಟ್ಟರೆ ಕೊನೆಗೆ ನಮಗೆ ಸಿಗುವುದು ನೋವು
ಸಾಲದ ಸುಳಿ ಮಾತ್ರ.ಮನಿ ಟ್ರ್ಯಾಪ್ ಗಳ ಬಳೆಗೆ ಬೀಳದೆ ಜಾಗರುಕತೆ ಇಂದ ಜೀವನ ನಡಿಸೋಣ.