ನೀವು PUC SCIENCE ಓದುತ್ತಿದ್ದೀರಾ? ನಿಮಗೂ ಮೆಡಿಕಲ್ ಮಾಡು ಆಸೆ ಇದೆಯೇ!?ಹಾಗಾದರೆ ಮೆಡಿಕಲ್ ಅಂದರೆ ಬರೀ MBBS ಅಲ್ಲ ಇತರೆ ಮೆಡಿಕಲ್ ಕೋರ್ಸ್ಗಳು ಇವೆ…!!!

ನೀವು PUC SCIENCE ಓದುತ್ತಿದ್ದೀರಾ? ನಿಮಗೂ ಮೆಡಿಕಲ್ ಮಾಡು ಆಸೆ ಇದೆಯೇ!?ಹಾಗಾದರೆ ಮೆಡಿಕಲ್ ಅಂದರೆ ಬರೀ MBBS ಅಲ್ಲ ಇತರೆ ಮೆಡಿಕಲ್ ಕೋರ್ಸ್ಗಳು ಇವೆ…!!!

ನೀವು PUC SCIENCE ಓದುತ್ತಿದ್ದೀರಾ? ನಿಮಗೂ ಮೆಡಿಕಲ್ ಮಾಡು ಆಸೆ ಇದೆಯೇ!?ಹಾಗಾದರೆ ಮೆಡಿಕಲ್ ಅಂದರೆ ಬರೀ MBBS ಅಲ್ಲ ಇತರೆ ಮೆಡಿಕಲ್ ಕೋರ್ಸ್ಗಳು ಇವೆ…!!!

ಸಹಜವಾಗಿ ಅನೇಕ ಮಕ್ಕಳಿಗೆ ಹತ್ತನೆಯ ತರಗತಿ ನಂತರದ ಕೋರ್ಸ್ಗಳ ಆಯ್ಕೆಯ ಗೊಂದಲ ಉಂಟಾಗುವುದು. ಒಂದು ವೇಳೆ ಯಾರದೋ ಸಲಹೆಯಿಂದ ಅಥವಾ ತಮ್ಮದೇ ಆಸಕ್ತಿಯಿಂದ ಯಾವುದಾದರು ಕೋರ್ಸ್ ಆಯ್ಕೆ ಮಾಡಿಕೊಂಡ ಮೇಲೆ ಸಾಕಷ್ಟು ಮಕ್ಕಳು ಅತೃಪ್ತರೇ ಆಗಿರುವರು,

ಕಾರಣ ಮಾನವ ಸಹಜ ಧರ್ಮ, ತಮ್ಮದಲ್ಲದ ಜೀವನ ಸುಂದರವಾಗಿ ಕಾಣುತ್ತದೆ. ಹೇಗೋ ತೆಗೆದುಕೊಂಡಿರೋ ಕೋರ್ಸ್ ಮುಗೀತು ಅಂತ ತಿಳ್ಕೊಳಿ ಹಾಗಾದ್ರೆ ಮುಂದೇನು?ಎಂಬ ಪ್ರಶ್ನೆ ಕಟ್ಟಿಟ್ಟ ಬುತ್ತಿ.

ಈ ಪ್ರಶ್ನೆ ಇನ್ನೂ ಹೆಚ್ಚು ಕಾಡುವುದು PUC SCIENCE ಆಯ್ದುಕೊಂಡವರಿಗೆ ಕಾರಣ PUC SCIENCE ನಂತರ ವೃತ್ತಿಪರ ಕೋರ್ಸ್ಗಳ ಆಪ್ಷನ್ ನೂರಾರಿವೆ.

ಈಗ ನೀವು PUC SCIENCE Stream ಆಯ್ಕೆ ಮಾಡಿಕೊಂಡಿರುವಿರಾ? ಯಾವುದಾದರೂ ಸರಿ Medical Course ಮಾಡಬೇಕೆಂದು ಅಂದುಕೊಂಡಿರುವಿರಾ? ಹಾಗಾದ್ರೆ ತಿಳಿದುಕೊಳ್ಳೋಣ ಬನ್ನಿ Second puc ನಂತರ MBBS ಹೊರತು ಯಾವೆಲ್ಲ Medical courses ಲಭ್ಯವಿದೆ ಎಂದು…!!!

ಪ್ರತಿ ವಿಜ್ಞಾನ ವಿಭಾಗದ ವಿದ್ಯಾರ್ಥಿ ಅಥವಾ ವಿದ್ಯಾರ್ಥಿನಿಯ ಮೊದಲ ಆದ್ಯತೆ MBBS ಯೇ ಆಗಿರುತ್ತದೆ ಕಾರಣ ಏನೇ ಆಗಿರಬಹುದು, ತಂದೆ ತಾಯಂದಿರ ಒತ್ತಡ ಅಥವಾ ತಮ್ಮದೇ ಆದ ಸ್ವಯಿಚ್ಛೆ ಇರಬಹುದು.

ಹಾಗಾದ್ರೆ MBBS ಮಾಡಲು ಬೇಕಾಗುವ ಅರ್ಹತೆ ಹಾಗೂ FEE Structure ಏನಿರಬಹುದು!?

ಮೊದಲನೆಯದಾಗಿ ಎಂಬಿಬಿಎಸ್ ಮಾಡಲು ಬಹುತೇಕವಾಗಿ ಕಠಿಣ ಶ್ರಮದಿಂದ ಓದುವ, ಓದಲು ಹೆಚ್ಚು ಆಸಕ್ತಿ ಇರುವ ಮಕ್ಕಳೇ ಆಯ್ಕೆ ಮಾಡಿಕೊಳ್ಳುವರು.

ಹಾಗಿದ್ರೆ ಆಯ್ಕೆ ಮಾಡಿಕೊಂಡ ತಕ್ಷಣದಲ್ಲಿ ಅವರೆಲ್ಲರಿಗೂ ಎಂಬಿಬಿಎಸ್ ಸೀಟ್ ಲಭ್ಯವಾಗದು. ಅದಕ್ಕೆಂದೆ NTA ವತಿಯಿಂದ ನೀಟ್ ಎಂಬ ಪ್ರತಿಷ್ಠಿತವಾದ ಪರೀಕ್ಷೆ ಯೊಂದನ್ನು ದೇಶಾದ್ಯಂತ ರಚಿಸಲಾಗಿದೆ.

PUC SCIENCE ಓದುತ್ತಿರುವ ಪ್ರತಿಯೊಬ್ಬ ವಿದ್ಯಾರ್ಥಿ ಅಥವಾ ವಿದ್ಯಾರ್ಥಿನಿಯು ಈ ಪರೀಕ್ಷೆ ಎದುರಿಸಬಹುದು. ಆದರೆ Qualify ಆಗಲು ಬೇಕಿರುವ ಅಂಶ ಪಿಯುಸಿ Board Exam ಗಳಲ್ಲಿ ಕನಿಷ್ಠ 75% ಅಂಕ ಗಳಿಸಿರಬೇಕು.

ಒಂದು ವೇಳೆ ಈ ಎಲ್ಲಾ ಅರ್ಹತೆಗಳಿಸಿಕೊಂಡು ಎಂಬಿಬಿಎಸ್ ಓದಲು ಮುಂದಾದ ವಿದ್ಯಾರ್ಥಿಯು ಈ ವೃತ್ತಿಪರ ಕೋರ್ಸ್ ಅನ್ನು 4.5 ವರ್ಷಗಳ ಅಧ್ಯಯನದ ಜೊತೆಗೆ ಒಂದು ವರ್ಷ Internship ಮುಗಿಸಬೇಕು.

ಈ ಒಂದು ವರ್ಷದ ಅವಧಿಯಲ್ಲಿ ಕಲಿಕೆಯ ಜೊತೆ ಅವರಿಗೆ Salary ರೂಪದಲ್ಲಿ ಒಂದಿಷ್ಟು ಹಣ ನೀಡುತ್ತಾರೆ.

ಹೀಗೆಲ್ಲ ವ್ಯವಸ್ಥೆ ಇದ್ದರೂ MBBS ಮಾಡಬೇಕೆಂದು ಬಯಸುವ ಎಲ್ಲಾ ಮಕ್ಕಳಿಗೆ ಅವಕಾಶ ಸಿಗದು ಹಾಗಾಗಿ ಕೆಲವೊಂದು ಮಕ್ಕಳು ಇದಲ್ಲದಿದ್ದರೆ ಮತ್ತೊಂದು ಎಂದು ಬೇರೆ ಬೇರೆ ಕೋರ್ಸ್ ಆಯ್ಕೆಮಾಡಿಕೊಂಡು ಮುಂದೋಗುತ್ತಾರೆ.

ಆದರೆ ಕೆಲ ಮಕ್ಕಳು ಏನೇ ಆದರೂ ಸರಿ ಇದನ್ನೇ ಮಾಡಬೇಕು ಎಂದು ಛಲತೊಟ್ಟು Long term ಗೋಜಿಗೆ ತೆರಳುತ್ತಾರೆ. ನಂತರ ಅವರ ranking ಅನುಗುಣವಾಗಿ ಕಾಲೇಜ್ಗಳು ಸಿಗುತ್ತವೆ.

MBBS ಅಲ್ಲದಿದ್ದರೆ ಏನು ನಂತರದ ಆಯ್ಕೆ BAMS ಇದ್ದೇ ಇದೆ. ಎಷ್ಟೋ ಮಕ್ಕಳು ಇದರಲ್ಲೂ ಆಸಕ್ತಿ ಹೊಂದಿರುತ್ತಾರೆ. ಅವರಿಗೂ ನೀಟ್ Exam ಒಂದೇ ಸೀಟ್ ದೊರಕಿಸಿಕೊಳ್ಳಲು ದಾರಿ. ಇವರು ಪಿಯುಸಿ Board Exam ಗಳಲ್ಲಿ ಕನಿಷ್ಠ 50-60% ಅಂಕಗಳನ್ನು ಹೊಂದಿರಬೇಕು.

ಇವರು CCI(Central Council of India)ನೀಡುವ ಔಷಧಗಳ ಬಳಕೆ ಮಾಡುವರು.

ಮಕ್ಕಳ ನಂತರದ ಆಯ್ಕೆ ಬಿಡಿಎಸ್(Bachelor of Dental Surgery) ಆಗಿರುವುದು. ಇದು ಭಾರತದಲ್ಲಿ ಅನುಮೋದಿತವಾದ ಏಕೈಕ ವೃತ್ತಿಪರ ಕೋರ್ಸ್ ಆಗಿದೆ. ದಂತ ವೈದ್ಯಕೀಯವು ಸಹ 5 ವರ್ಷದ ಕೋರ್ಸ್ ಆಗಿದೆ.

ಮಕ್ಕಳು ಇದಕ್ಕೂ ಸಹ ಕನಿಷ್ಠ 50-60% ಅಂಕಗಳನ್ನು ಪಡೆದಿರಬೇಕು.

ಈ ಸ್ಪರ್ಧಾತ್ಮಕ ಜಗತ್ತಿನಲ್ಲಿ ಅಷ್ಟು ಸುಲಭವಾಗಿ ಅವರಿಷ್ಟದ Course ಸಿಗದು. ಒಂದು ವೇಳೆ ಅವರು ಮೆಡಿಕಲ್ ಫೀಲ್ಡ್ ನಲ್ಲಿ ಹೆಚ್ಚು ಆಸಕ್ತಿದಾಯಕರಾಗಿದ್ದರೆ ಅಂಥವರು ಇನ್ನೂ ಮಿಕ್ಕಂತೆ ಅನೇಕ ಕೋರ್ಸ್ಗಳ ಮೊರೆ ಹೋಗಬಹುದು.

ಉದಾಹರಣೆಗೆ, ನಾಯಿ, ಬೆಕ್ಕು, ಹಸು ಹೀಗೆ ಮುಂತಾದ ಸಾಕು ಪ್ರಾಣಿಗಳಲ್ಲಿ ಆಸಕ್ತಿ ಇರುವವರು ಅವುಗಳನ್ನು ಸುಸಜ್ಜಿತವಾಗಿ ಹಾರೈಕೆ ಮಾಡುವ ನಿರ್ದಿಷ್ಟವಾದ ಉದ್ದೇಶ ಹೊಂದಿರುವವರು Animal Husbandry ಆಯ್ಕೆ ಮಾಡಿಕೊಳ್ಳಬಹುದು.

ಇದಲ್ಲದಿದ್ದರೆ ಅವುಗಳ ಅಧ್ಯಯನಕ್ಕೆ ಅಷ್ಟೇ ಸೀಮಿತರಾಗಲು BVsc(Bachelor of Veterinary Science)ಆಯ್ದುಕೊಳ್ಳಬಹುದು. ಇದು ಸಹ ಎಲ್ಲಾ ವೃತ್ತಿಪರ ಕೋರ್ಸ್ಗಳ ಹಾಗೆಯೇ 3-4 ವರ್ಷವಿರುತ್ತದೆ

ಅಥವಾ ಒಂದು ವರ್ಷ ಡಿಪ್ಲೋಮೋ ಕೋರ್ಸ್ ಮಾಡಿ ನಂತರ ಪಿಜಿ ಡಿಪ್ಲೋಮೋ ಮಾಡಿದರು ಇದಕ್ಕೆ ಸರಿಸಮವಾಗಿಯೇ ಇರುವುದು ಇದಕ್ಕೆ ಪಿಯುಸಿ PCMB ಯಲ್ಲಿ ಕನಿಷ್ಠ 50ರಷ್ಟು ಅಂಕ ಪಡೆದಿರಬೇಕು. ಇದರ FEE Structure Government ಕಾಲೇಜ್ ಇಂದ Private ಕಾಲೇಜ್ ಗೆ ತುಂಬಾ ವ್ಯತ್ಯಾಸ ಕಂಡು ಬರುತ್ತೆ.

ಯೋಗಿಕ್ ಸೈನ್ಸ್ ಅಂಡ್ ನ್ಯಾಚುರೋಪತಿ ಎಂದು ಸಹ ಒಂದು ಕೋರ್ಸ್ ಲಭ್ಯವಿದೆ. ಇದರಿಂದ dietician ಆಗಲು ಬಯಸುವ ವಿದ್ಯಾರ್ಥಿಗಳು ಇದನ್ನು ಆಯ್ಕೆ ಮಾಡಿಕೊಳ್ಳಬಹುದು.

ಈಗ 4-5 ವರ್ಷ ಕಾಲಾವಧಿಯಲ್ಲಿ ಅಧ್ಯಯನಕ್ಕೆ ಒಳಗಾದರೆ ಮನೆ ಕಡೆ ಆರ್ಥಿಕ ತೊಂದರೆ ಉಂಟಾಗುವುದು ಹಾಗಾಗಿ ಯಾವುದಾದರೂ Job oriented ಕೋರ್ಸ್ ಲಭ್ಯವಿದ್ದರೆ ಅದನ್ನು ಆಯ್ಕೆ ಮಾಡಿಕೊಳ್ಳುವ ಮನಸ್ಥಿತಿ ಇರುವ ವಿದ್ಯಾರ್ಥಿಗಳಿಗೆ ಈ ಕೆಳಗಿನ ಕೋರ್ಸ್ಗಳ ಮಾಹಿತಿ ಉಪಯುಕ್ತವಾಗುವುದು.

ಮೊದಲನೆಯದಾಗಿ BMTL(Bachelor of Medical Lab Technician)ಇದನ್ನು ಪಿಯುಸಿಯಲ್ಲಿ Science ತೆಗೆದುಕೊಂಡ ವಿದ್ಯಾರ್ಥಿ ಅಷ್ಟೇ ಅಲ್ಲ Arts,Commerce ಮಾಡಿರೋರು ಸಹ ತೆಗೆದುಕೊಳ್ಳಬಹುದು ,

ಅಂತ ಆಪ್ಷನ್ ಲಭ್ಯವಿದೆ. ಆದರೆ ಅವರು ಒಂದು ವರ್ಷದ Extra ಕೋರ್ಸ್ separate ಆಗಿ ಮಾಡಿ, ನಂತರ ಮುಂದಿನ ಮೂರು ವರ್ಷದ ಕೋರ್ಸ್ ಒಂದೇ course ಆಗಿರುತ್ತದೆ. ಏಕೆಂದರೆ ಇವರು ಪಿಯುಸಿ ಅವಧಿಯಲ್ಲಿ Science ಹಾಗೂ mathematics ಓದಿರುವುದಿಲ್ಲ.

ಇದಿಲ್ಲದಿದ್ದರೆ BHMS ಇದರ ಬಗ್ಗೆ ಮಕ್ಕಳಿಗೆ ತಿಳಿದಿದ್ದರೂ ಹೆಚ್ಚಾಗಿ ಇದರ ಬಗ್ಗೆ ಆಸಕ್ತಿ ತೋರರು. ವಿಶ್ವಾದ್ಯಂತ ಇದಕ್ಕೆ ಬೇಡಿಕೆ ಹೆಚ್ಚೆಯಿದೆ.

ಇದು ಸಹ 4.5+1 ವರ್ಷಗಳ ಅವಧಿಯ ಕೋರ್ಸ್ ಆಗಿದೆ. ಬಿ ಫಾರ್ಮಸಿ ಒಂದು JOB Oriented ಕೋರ್ಸ್. ಇದಕ್ಕೆ ಡಿಗ್ರಿ ಹಾಗೂ ಡಿಪ್ಲೋಮೋದಂತಹ ಎರಡು ಅವಕಾಶ ಇದೆ. ಇದು ಮೂರರಿಂದ ನಾಲ್ಕು ವರ್ಷದ ಕೋರ್ಸ್.

ಇಷ್ಟೇ ಅಲ್ಲದೆ ಆಪರೇಷನ್ ಥಿಯೇಟರ್ ಗಳಲ್ಲಿ, X-ray scan ಮಾಡುವಲ್ಲಿಯೂ Assistant nurse ಆಗಿ ಸಹ ಕಾರ್ಯ ನಿರ್ವಹಿಸಬಹುದಾಗಿದೆ. ಅದಕ್ಕೆಂದೆ ಕೆಲವು course ಗಳ ಅವಕಾಶ ಇದೆ.

ಈ ಮೇಲ್ಕಂಡ ಎಲ್ಲಾ ಕೋರ್ಸ್ಗಳ Fee Structure Government ಸೀಟ್ ಆಗಿದ್ದರೆ ಬರಿಸಬಹುದಾದ ರೀತಿಯಲ್ಲಿ ಇರುವುದು. ಇಲ್ಲದಿದ್ದರೆ ಆಯಾ ಕಾಲೇಜ್ಗಳ Inside Facilities ಗಳ ಮೇಲೆ ಅವಲಂಬಿಸಿರುತ್ತದೆ.

ಧನ್ಯವಾದಗಳು

Leave a Reply

Your email address will not be published. Required fields are marked *

You cannot copy content of this page