Loksabha Election:: ಲೋಕಸಭಾ ಚುನಾವಣೆಗೆ ಜನರ ನೀರಸ ಪ್ರತಿಕ್ರಿಯೆ! ಮೊದಲ ಹಂತದಲ್ಲಿ ಕುಸಿದ ಮತದಾನ! ಯಾರಿಗೆ ಲಾಭ ಯಾರಿಗೆ ನಷ್ಟ? 

Loksabha Election:: ಲೋಕಸಭಾ ಚುನಾವಣೆಗೆ ಜನರ ನೀರಸ ಪ್ರತಿಕ್ರಿಯೆ! ಮೊದಲ ಹಂತದಲ್ಲಿ ಕುಸಿದ ಮತದಾನ! ಯಾರಿಗೆ ಲಾಭ ಯಾರಿಗೆ ನಷ್ಟ? 

Loksabha Election:: ಲೋಕಸಭಾ ಚುನಾವಣೆಗೆ ಜನರ ನೀರಸ ಪ್ರತಿಕ್ರಿಯೆ! ಮೊದಲ ಹಂತದಲ್ಲಿ ಕುಸಿದ ಮತದಾನ! ಯಾರಿಗೆ ಲಾಭ ಯಾರಿಗೆ ನಷ್ಟ?

ದೇಶದಲ್ಲಿ ಲೋಕಸಭಾ ಚುನಾವಣೆ( Loksabha Election)ನಡೆಯುತ್ತಿದ್ದು ಈಗಾಗಲೇ ಹಲವು ಕಡೆಗಳಲ್ಲಿ ಚುನಾವಣಾ ಕಾವು ಭರದಿಂದ ಸಾಗಿದೆ.

ಹಲವು ರಾಜ್ಯಗಳಲ್ಲಿ ಮೊದಲ ಹಂತದ ಚುನಾವಣೆ ಮುಗಿದಿದ್ದು,  ಹೀಗಾಗಿ ಮೊದಲ ಹಂತದ ಚುನಾವಣೆಯ ವಿಶ್ಲೇಷಣೆಯನ್ನು ರಾಜಕೀಯ ಪಕ್ಷಗಳು ಮಾಡುತ್ತಿವೆ.

ಏಕೆಂದರೆ ಈ ಮೊದಲ ಹಂತದ ಚುನಾವಣೆ ಇಡೀ ಲೋಕಸಭಾ ಚುನಾವಣೆಯ ಮೇಲೆ ಪರಿಣಾಮ ಬೀರಲಿದ್ದು,   ಇದು ರಾಜಕೀಯ ಪಕ್ಷಗಳಲ್ಲಿ ತೀವ್ರ ಕುತೂಹಲ ಹುಟ್ಟಿಸಿರುತ್ತದೆ.

ಅಲ್ಲದೇ ಮೊದಲ ಹಂತದಲ್ಲಿ ನಡೆಯುವ ಚುನಾವಣೆಯು ಚುನಾವಣಾ ಫಲಿತಾಂಶದ ಮೇಲೆ ನೇರ ಪರಿಣಾಮ ಬೀರುತ್ತದೆ.

ಇದು ಮತದಾರರ ನಿಲುವನ್ನು ತಿಳಿಸುವ ಮೊದಲ ಕೈಗನ್ನಡಿ. ಹಾಗಾಗಿ  ಮೊದಲ ಹಂತದ ಚುನಾವಣೆ ಬಹಳಷ್ಟು ಪ್ರಾಮುಖ್ಯತೆ ಪಡೆದುಕೊಂಡಿರುತ್ತದೆ.

Loksabha Election ಮೊದಲ ಹಂತದಲ್ಲಿ ಕುಸಿದ ಮತದಾನ!

ಇದರಲ್ಲಿ ಮುಖ್ಯವಾಗಿ ಗಮನಿಸಬೇಕಾಗಿರುವುದು ಏನೆಂದರೆ ಮೊದಲ ಹಂತದ ಚುನಾವಣೆಯಲ್ಲಿ ಮತದಾರರು ನಿರಾಸಕ್ತಿ ತೋರಿಸಿದ್ದು,

2019ರ ಲೋಕಸಭೆ ಗಿಂತ ಈ ಬಾರಿ ಮೊದಲ ಹಂತದಲ್ಲಿ ಮತದಾನ ಕುಸಿದಿದೆ ಎನ್ನಲಾಗಿದೆ. ಹೌದು ಏಪ್ರಿಲ್ 19 ರಂದು 102 ಕ್ಷೇತ್ರಗಳಲ್ಲಿ ನಡೆದ ಮೊದಲ ಹಂತದ ಚುನಾವಣೆಯಲ್ಲಿ ಕೇವಲ ಸರಾಸರಿ 65% ಮತದಾನ ನಡೆದಿದೆ.

ಹಿಂದಿನ  ಲೋಕಸಭೆಗಳಿಗೆ ಹೋಲಿಸಿದರೆ ಈ ಮತದಾನವು ಕಡಿಮೆಯಾಗಿದ್ದು 2014ರಲ್ಲಿ ನಡೆದ ಮೊದಲ ಹಂತದ ಚುನಾವಣೆಯಲ್ಲಿ 69% ಮತದಾನ ನಡೆದಿತ್ತು.

2019ರಲ್ಲೂ ಕೂಡ ಮೊದಲ ಹಂತದ ಚುನಾವಣೆಯಲ್ಲಿ 69.5% ಮತದಾನ ನಡೆದಿತ್ತು ಆದರೆ ಈ ಬಾರಿ ಮತದಾನವು ನಾಲ್ಕು ಪರ್ಸೆಂಟ್ ನಷ್ಟು ಕುಸಿತಗೊಂಡಿದೆ.

Loksabha Election ಮತದಾನ ಕುಸಿತ ಯಾರಿಗೆ ವರ ಯಾರಿಗೆ ಶಾಪ!

ಹಾಗಾದರೆ ಈ ಮತದಾನದಲ್ಲಿ ಮತದಾರರು ಕುಸಿತ ತೋರುತ್ತಿರುವುದು ಯಾರಿಗೆ ಲಾಭವಾಗಲಿದೆ, ಆಡಳಿತದಲ್ಲಿರುವ ಎನ್ ಡಿಎ ಪಕ್ಷಕ್ಕೋ ಅಥವಾ ಐಎನ್ಡಿಐಎ ಕೂಟಕ್ಕೆ ಇದು ವರದಾನವಾಗಲಿದೆಯೇ ಎಂಬ ಚಚೆ೯ಗಳು ನಡೆಯುತ್ತಿವೆ.

ಕೆಲವರು ಹೇಳುವ ಪ್ರಕಾರ ಇದು ಆಡಳಿತ ಪಕ್ಷಕ್ಕೆ ವರವಾಗಲಿದ್ದು, ಅದೇ ಪಕ್ಷ ಮತ್ತೇ ಆಡಳಿತಕ್ಕೆ ಬರಲಿದೆ ಎಂದು ಮತದಾರರು ಮತದಾನ ಮಾಡಲು ನಿರಸ ವ್ಯಕ್ತಪಡಿಸಿದ್ದಾರೆ ಎಂದರೆ ಮತ್ತು ಕೆಲವರು ಇದು ಆಡಳಿತ ಪಕ್ಷದ ವಿರೋಧಿ ಅಲೆಗೆ ಸಾಕ್ಷಿ ಎಂದಿದ್ದಾರೆ.

ಹಿಂದಿನ Loksabha ಚುನಾವಣೆಗಳ ವಿಶ್ಲೇಷಣೆ ಏನು?

ಇನ್ನು ಹಿಂದಿನ ಚುನಾವಣೆಗಳನ್ನು ಗಮನಿಸಿದರೆ 1951 ರಿಂದ 2019 ರವರೆಗೆ 16 ಲೋಕಸಭಾ ಚುನಾವಣೆಗಳು ನಡೆದಿದ್ದು, ಈ ಚುನಾವಣೆಗಳಲ್ಲಿ 6 ಬಾರಿ ಮತದಾನ ಕಡಿಮೆಯಾಗಿದ್ದು,

10 ಬಾರಿ ಮತದಾನ ಏರಿಕೆಯಾಗಿದೆ. ಮತದಾನ ಏರಿಕೆಯಾದ  10 ಚುನಾವಣೆಗಳಲ್ಲಿ ಆರು ಬಾರಿ ಆಡಳಿತ ಪಕ್ಷ ಅಧಿಕಾರಕ್ಕೆ ಬಂದರೆ, 4 ಬಾರಿ ಅಧಿಕಾರ ಕಳೆದುಕೊಂಡಿದೆ.

ಇನ್ನು ಮತದಾನ ಕಡಿಮೆಯಾದ 6 ಚುನಾವಣೆಗಳಲ್ಲಿ ಆಡಳಿತ ಪಕ್ಷ 2 ಬಾರಿ ಅಧಿಕಾರಕ್ಕೆ ಬಂದರೆ 4 ಬಾರಿ ಅಧಿಕಾರ ಕಳೆದುಕೊಂಡಿದೆ.

ಮೊದಲ ಹಂತದಲ್ಲಿ ಎಷ್ಟು ಮತದಾನ ಕುಸಿದಿದೆ?

ಇನ್ನೂ ಮತದಾನ ಕಡಿಮೆಯಾಗಿರುವ 102 ಕ್ಷೇತ್ರಗಳ ಪೈಕಿ 49 ರಲ್ಲಿ ಬಿಜೆಪಿ ಗೆದ್ದಿದ್ದು, 40 ಕ್ಷೇತ್ರಗಳಲ್ಲಿ ಐಎನ್ಡಿಐಎ ಕೂಟ ಅಧಿಕಾರದಲ್ಲಿದೆ.

ಆದರೆ ಎನ್ ಡಿಎ ಅಧಿಕಾರದಲ್ಲಿರುವ ಕ್ಷೇತ್ರಗಳಲ್ಲಿ ಮತದಾನ ಹೆಚ್ಚಿನ ಪ್ರಮಾಣದಲ್ಲಿ ಕಡಿಮೆಯಾಗಿದೆ. ರಾಜಸ್ತಾನದಲ್ಲಿ 6.3% ಮತದಾನ ಕಡಿಮೆಯಾಗಿದೆ.

ಉತ್ತರಾಖಂಡ್ ರಾಜ್ಯದಲ್ಲಿ 4.7% ಮತದಾನ ಕಡಿಮೆಯಾಗಿದೆ. ಯುಪಿಯಲ್ಲೂ ಕೂಡ ಮತದಾನ ಡೌನ್ ಆಗಿದ್ದು, 8 ಕ್ಷೇತ್ರಗಳಲ್ಲಿ ನಡೆದ ಚುನಾವಣೆಯಲ್ಲಿ 5.5% ಮತದಾನ ಕಡಿಮೆಯಾಗಿದೆ.

ಐಎನ್ಡಿಐಎ ಕೂಟ ಅಧಿಕಾರದಲ್ಲಿರುವ ತಮಿಳುನಾಡಿನಲ್ಲಿ 2.7% ಮತದಾನ ಕಡಿಮೆಯಾಗಿದೆ. ಒಟ್ಟಿನಲ್ಲಿ ಸರಾಸರಿಯಾಗಿ ನೋಡುವುದಾದರೆ ಎನ್ ಡಿಎ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ 5.9% ಮತದಾನ ಕಡಿಮೆಯಾಗಿದ್ದರೆ

ಐಎನ್ಡಿಐಎ ಕೂಟ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ 3.2% ಮತದಾನ ಕಡಿಮೆಯಾಗಿದೆ. ಆದರೆ ಇಲ್ಲಿ ಮುಖ್ಯವಾಗಿ ಗಮನಿಸಬೇಕಾಗಿರುವುದು ಎನ್ ಡಿಎ ಅಧಿಕಾರದಲ್ಲಿರುವ ಕ್ಷೇತ್ರಗಳು ಡಬ್ಬಲ್ ಆಗಿರುವದು.

2014 ರಲ್ಲಿ ಮೋದಿ ಅಲೆಯಿಂದಾಗಿ  ಲೋಕಸಭಾ ಚುನಾವಣೆಯಲ್ಲಿ ಎಂಟು ಪರ್ಸೆಂಟ್ ರಷ್ಟು ಮತದಾನ ಏರಿಕೆಯಾಗಿತ್ತು ಹಾಗೂ 2019ರಲ್ಲಿ ಒಂದು ಪರ್ಸೆಂಟ್ ಮತದಾನ ಏರಿಕೆಯಾಗಿತ್ತು.

ಆದರೆ 2024 ರ ಮೊದಲ ಹಂತದ ಚುನಾವಣೆಯಲ್ಲಿ  ಮತದಾನ ಕುಸಿದಿರುವುದು ಆತಂಕದ ವಿಷಯವಾಗಿದ್ದು ಈ ಬಾರಿ ಮತದಾರನ  ಒಲವು ಯಾರ ಕಡೆ ಇದೆ ಎಂಬುದನ್ನು ಊಹಿಸುವುದು ಕಷ್ಟವಾಗುತ್ತಿದೆ.

ದೇಶದ ಎಲ್ಲಾ ಭಾಗಗಳಲ್ಲಿ ಚುನಾವಣೆ ಮುಗಿದು ಫಲಿತಾಂಶ ಬಂದ ನಂತರ ಇದಕ್ಕೆಲ್ಲ ಉತ್ತರ ಸಿಗಲಿದೆ

ಧನ್ಯವಾದಗಳು

Leave a Reply

Your email address will not be published. Required fields are marked *

You cannot copy content of this page