Loksabha Election: ಬಿಜೆಪಿ ಭದ್ರ ಕೋಟೆಯನ್ನು ಭೇದಿಸುತ್ತಾರಾ ಸೌಮ್ಯ ರೆಡ್ಡಿ! ತೇಜಸ್ವಿ ಸೂಯ೯ಗೆ ಗೆಲುವು ಸಿಗುತ್ತಾ?
ಇನ್ನೇನು ನಾಲ್ಕೈದು ದಿನಗಳಲ್ಲಿ ಮೊದಲ ಹಂತದ ಲೋಕಸಭಾ ಚುನಾವಣೆ ರಾಜ್ಯದಲ್ಲಿ ನಡೆಯುತ್ತಿದ್ದು ಎಲ್ಲಾ ಕಡೆಗಳಲ್ಲೂ ರಾಜಕೀಯ ಪಕ್ಷಗಳ ಪ್ರಚಾರ ಕಾಯ೯ ಜೋರಾಗಿ ನಡೆಯುತ್ತಿದೆ.
ಇದಕ್ಕೆ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ ಹೊರತಾಗಿಲ್ಲ. ಹೌದು, ಈ ಬಾರಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರವು ಸಾಕಷ್ಟು ಕುತೂಹಲ ಮೂಡಿಸಿದ್ದು,
ಬಿಜೆಪಿಯ ತೇಜಸ್ವಿ ಸೂಯ೯ ವಿರುದ್ಧ ಕಾಂಗ್ರೆಸ್ ನ ರಾಮಲಿಂಗಾರೆಡ್ಡಿ ಮಗಳು ಸೌಮ್ಯ ರೆಡ್ಡಿ ಸ್ಪಧಿ೯ಸಿದ್ದು, ಯಾರಿಗೆ ವಿಜಯಲಕ್ಷ್ಮಿ ಒಲಿಯಲಿದ್ದಾಳೆ ಎಂಬುದು ಕುತೂಹಲ ಹುಟ್ಟಿಸಿದೆ.
3 ದಶಕಗಳಿಂದ ಲೋಕಸಭಾ ಚುನಾವಣೆಯಲ್ಲಿ (Loksabha) ಬಿಜೆಪಿಗೆ ಇಲ್ಲ ಸೋಲು!
3 ದಶಕಗಳಿಂದ ಬಿಜೆಪಿಯ ಭದ್ರ ಕೋಟೆಯಾಗಿರುವ ಬೆಂಗಳೂರು ದಕ್ಷಿಣ ಕ್ಷೇತ್ರವು ಈ ಬಾರಿ ಬಿಜೆಪಿಗೆ ಸ್ವಲ್ಪ ತಲೆನೋವಾಗಿದ್ದು, ಎಲ್ಲೆಡೆ ತೇಜಸ್ವಿ ಸೂಯ೯ಗಿದ್ದ ವಚ೯ಸ್ಸು ಕಡಿಮೆಯಾಗಿದೆ ಎಂಬುದನ್ನು ತೋರಿಸುತ್ತಿದೆ
ಹೌದು ಇದಕ್ಕೆ ಮುಖ್ಯ ಕಾರಣ ಕಾಂಗ್ರೆಸ್ ತೇಜಸ್ವಿ ಸೂಯ೯ಗೆ ಟಕ್ಕರ್ ಕೊಡಲು ದೊಡ್ಡ ಎದುರಾಳಿಯನ್ನು ಅಖಾಡಕ್ಕೆ ಇಳಿಸಿದ್ದು, ರಾಮಲಿಂಗಾರೆಡ್ಡಿ ಮಗಳನ್ನು ಅಭ್ಯಥಿ೯ಯಾಗಿ ಘೋಷಿಸಿದೆ.
ಅವರು ಕೂಡ ತಮ್ಮ ಗೆಲುವಿಗಾಗಿ ಸ್ವಲ್ಪವೂ ವಿಶ್ರಾಂತಿ ಪಡೆಯದೇ ಪ್ರಚಾರ ಕಾಯ೯ದಲ್ಲಿ ತೊಡಗಿದ್ದಾರೆ. ಇದು ತೇಜಸ್ವಿ ಸೂಯ೯ಗೆ ಸ್ವಲ್ಪ ಹಿನ್ನೆಡೆ ಉಂಟುಮಾಡಿದ್ದು,
ಅವರು ಕನಾ೯ಟಕವನ್ನು ಬಿಟ್ಟು ಬೇರೆಡೆ ಪ್ರಚಾರಕ್ಕೆ ಹೋಗದೆ ತಮ್ಮ ಕ್ಷೇತ್ರದ ಮೇಲೆ ಹೆಚ್ಚು ಗಮನಹರಿಸುತ್ತಿದ್ದಾರೆ.
ಕ್ಷೇತ್ರದಲ್ಲಿ ಹಣದ ಹೊಳೆ!
ಏಕೆಂದರೆ ಕ್ಷೇತ್ರದಲ್ಲಿ ಹವಾಲಾ ಹಣ ನೀರಿನಂತೆ ಹರಿಸಲಾಗುತ್ತಿದೆ ಎನ್ನಲಾಗುತ್ತಿದ್ದು, ಈಗಾಗಲೇ 1.4 ಕೋಟಿ ರೂಪಾಯಿಗಳನ್ನು ಚುನಾವಣಾ ಅಧಿಕಾರಿಗಳು ಕಾರಿನಲ್ಲಿ ವಶಪಡಿಸಿಕೊಂಡಿದ್ದು,
ಅದು ಯಾರಿಗೆ ಸೇರಿದ್ದು ಎಂಬುದನ್ನು ತನಿಖೆ ಮಾಡುತ್ತಿದ್ದಾರೆ. ತೇಜಸ್ವಿ ಸೂಯ೯ ಅವರೇ ಹಣ ಖಚು೯ ಮಾಡುತ್ತಿದ್ದಾರೆ ಎಂದು ಸೌಮ್ಯ ಆರೋಪಿಸಿದ್ದು, ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ ಎಂದು ತೇಜಸ್ವಿ ಸೂಯ೯ ಹೇಳಿದ್ದಾರೆ.
ಯಾರಿಗೆ ಎಷ್ಟು ಮತಬೆಂಬಲ!
ಬೆಂಗಳೂರು ದಕ್ಷಿಣದಲ್ಲಿ 5 ವಿಧಾನಸಭಾ ಕ್ಷೇತ್ರಗಳು ಬಿಜೆಪಿ ಸೇರಿದ್ದು, 3 ರಲ್ಲಿ ಕಾಂಗ್ರೆಸ್ ಪಕ್ಷವಿದೆ. ಬಿಜೆಪಿಗೆ ಹೆಚ್ಚಿನ ಸೀಟುಗಳಿದ್ದರೂ ಕೂಡ ಈ ಬಾರಿ ಬ್ರಾಹ್ಮಣ ಜಾತಿಗೆ ಸೇರಿದ
ತೇಜಸ್ವಿ ಸೂಯ೯ ವಿರುದ್ದ ಬ್ರಾಹ್ಮಣರೇ ತಿರುಗಿ ಬಿದ್ದಿದ್ದಾರೆ ಎನ್ನಲಾಗಿದೆ. ಅದಕ್ಕೆ ಕಾರಣ ಶ್ರೀ ಗುರು ರಾಘವೇಂದ್ರ ಸಹಕಾರಿ ಬ್ಯಾಂಕ್ ವಿಚಾರ.
ಯಾವ ಪಂಗಡ ಯಾರ ಕಡೆ!
ಇನ್ನು ಸೌಮ್ಯ ರೆಡ್ಡಿ ಪರ ಮುಖ್ಯಮಂತ್ರಿಗಳು ಪ್ರಚಾರ ನಡೆಸಿದ್ದು, ಅಲ್ಪಸಂಖ್ಯಾತರು, ಹಿಂದುಳಿದ ವಗ೯ ಹಾಗೂ ಅಹಿಂದ ಮತಗಳನ್ನು ಸೆಳೆಯಲು ಮುಂದಾಗಿದ್ದಾರೆ.
ಒಕ್ಕಲಿಗರ ಮತಗಳನ್ನು ಸೆಳೆಯಲು ಉಪಮುಖ್ಯಮಂತ್ರಿ ಡಿ. ಕೆ ಶಿವಕುಮಾರ ಕೂಡ ಸೌಮ್ಯ ಪರ ಪ್ರಚಾರ ಕೈಗೊಂಡಿದ್ದಾರೆ.
ಈ ಭಾಗದ ರೆಡ್ಡಿ ಹಾಗೂ ನಾಯ್ಡುಗಳು ಸೌಮ್ಯಗೆ ಬೆಂಬಲ ನೀಡುವ ಸಾಧ್ಯತೆ ಹೆಚ್ಚಾಗಿದ್ದು, ತೆಲುಗು ಮಾತನಾಡುವವರ ಮತಗಳು ಕೂಡ ಕಾಂಗ್ರೆಸ್ ಪರವಿದೆ ಎನ್ನಲಾಗಿದೆ.
ಕನ್ನಡ ಮಾತನಾಡುವ ಒಕ್ಕಲಿಗರ ಮತಗಳು ಜೆಡಿಎಸ್ ಪರವಿದ್ದು, ಅವು ತೇಜಸ್ವಿ ಸೂಯ೯ ಪಾಲಾಗಲಿವೆ. ಆದರೆ ಈ ಬಾರಿ ತೇಜಸ್ವಿ ಸೂಯ೯ ಗೆಲುವು ಸ್ವಲ್ಪ ಕಠಿಣವಾಗಲಿದೆ ಎಂದು ಸಮೀಕ್ಷೆಗಳು ಹೇಳುತ್ತಿದ್ದು
ಅವರು ಪ್ರಚಾರದಲ್ಲಿ ತಮ್ಮ ಕೆಲಸಗಳನ್ನು ಹೇಳಿಕೊಳ್ಳದೇ ಮೋದಿ ಹೆಸರು ಹೇಳಿಕೊಂಡು ಮತಯಾಚನೆ ಮಾಡುತ್ತಿದ್ದಾರೆ.
ಮತ್ತೊಂದೆಡೆ ಸೌಮ್ಯ ಅವರು ತಮ್ಮ ತಂದೆ ರಾಮಲಿಂಗಾರೆಡ್ಡಿ ಕೆಲಸ ಹಾಗೂ ಕಾಂಗ್ರೆಸ್ ಗ್ಯಾರಂಟಿಗಳ ಬಗ್ಗೆ ತಿಳಿಸಿ ಮತಯಾಚಿಸುತ್ತಿದ್ದಾರೆ.
ರಾಮಲಿಂಗಾರೆಡ್ಡಿ ಅವರು ಪಕ್ಷದ ಗಡಿಗಳನ್ನು ದಾಟಿ ಎಲ್ಲರೊಂದಿಗೂ ಸ್ನೇಹ ಸಂಬಂಧವಿಟ್ಟುಕೊಂಡಿದ್ದು, ಅವರಿಂದಾಗಿ ಮಗಳು ಸೌಮ್ಯ ರೆಡ್ಡಿಗೆ ವ್ಯಾಪಕ ಬೆಂಬಲ ಸಿಗಲಿದೆ ಎನ್ನಲಾಗುತ್ತಿದೆ.
3 ದಶಕಗಳ ಬಿಜೆಪಿ ಕೋಟೆಯನ್ನು ಕಾಂಗ್ರೆಸ್ ಬೇಧಿಸುವಲ್ಲಿ ಯಶಸ್ವಿಯಾಗುತ್ತಾ ಅಥವಾ ಬಿಜೆಪಿ ತನ್ನ ಕೋಟೆಯನ್ನು ಮತ್ತಷ್ಟು ಭದ್ರವಾಗಿ ಉಳಿಸಿಕೊಳ್ಳುತ್ತಾ ಎಂಬುದನ್ನು ಕಾದು ನೋಡಬೇಕಾಗಿದೆ.