Loksabha election :: ಲೋಕಸಭಾ ಚುನಾವಣೆಯಲ್ಲಿ ಗೆಲುವು ಯಾರಿಗೆ? ಸೀಟು ಹಂಚಿಕೆ ನಂತರ ಎನ್ ಹೇಳುತ್ತೇ ಸಮೀಕ್ಷೆ?
ಇನ್ನೇನು ಕೆಲವೇ ದಿನಗಳಲ್ಲಿ ಲೋಕಸಭಾ ಚುನಾವಣೆ(Loksabha election)ಯಿದ್ದು, ದೇಶದ ಎಲ್ಲಾ ಕಡೆಗಳಲ್ಲೂ ಚುನಾವಣಾ ಕಸರತ್ತು ಜೋರಾಗಿದೆ. ರಾಜ್ಯವು ಕೂಡ ಇದಕ್ಕೆ ಹೊರತಾಗಿಲ್ಲ.
ರಾಜ್ಯದಲ್ಲೂ ಚುನಾವಣಾ ಅಬ್ಬರ ಪ್ರಾರಂಭವಾಗಿದ್ದು ಈಗಾಗಲೇ ನಾಮಪತ್ರ ಸಲ್ಲಿಕೆ ನಡೆಯುತ್ತಿದೆ. ರಾಜ್ಯದಲ್ಲಿ ಎರಡು ಹಂತಗಳಲ್ಲಿ ಚುನಾವಣೆ ನಡೆಯುತ್ತಿದ್ದು
ಮೊದಲ ಹಂತದ ಚುನಾವಣೆ ಎಪ್ರಿಲ್ 26ರಂದು ಹಾಗೂ ಎರಡನೇ ಹಂತದ ಚುನಾವಣೆ ಮೇ 7 ರಂದು ನಡೆಯಲಿದೆ.
ಇನ್ನು ಈ ಬಾರಿಯ ಚುನಾವಣೆ(Loksabha election)ಯಲ್ಲಿ ರಾಜ್ಯದ ಮತದಾರರು ಯಾರಿಗೆ ಹೆಚ್ಚಿನ ಮತನೀಡಿ ಗೆಲ್ಲಿಸುತ್ತಾರೆ ಎಂದು ಎಲ್ಲರಿಗೂ ಕುತೂಹಲವಿದ್ದು,
ಈ ಹಿಂದೆ ಹಲವಾರು ಸಮೀಕ್ಷೆಗಳು ಬಿಜೆಪಿ ಈ ಬಾರಿಯೂ ಸಹ ರಾಜ್ಯದಲ್ಲಿ ಭರ್ಜರಿ ಗೆಲುವು ಸಾಧಿಸಲಿದ್ದು 26 ರಿಂದ 27 ಸೀಟುಗಳನ್ನು ಗೆಲ್ಲಲಿದೆ ಎನ್ನಲಾಗಿತ್ತು.
ಆದರೆ ಟಿಕೆಟ್ ಹಂಚಿಕೆ ಬಳಿಕ ಈ ಸಮೀಕ್ಷೆಗಳು ಉಲ್ಟಾ ಹೊಡೆಯುವ ಸಾಧ್ಯತೆ ಹೆಚ್ಚಾಗಿದ್ದು, ಇತ್ತೀಚಿಗೆ ನಡೆಸಿದ ಸಮೀಕ್ಷೆಗಳಲ್ಲಿ ಬಿಜೆಪಿಯು ವಿಧಾನಸಭೆ ಚುನಾವಣೆಯಲ್ಲಿ ಮಾಡಿದ ತಪ್ಪನ್ನೇ ಈ ಲೋಕಸಭಾ ಚುನಾವಣೆಯಲ್ಲೂ ಮಾಡುತ್ತಿದ್ದು,
ವಿಧಾನಸಭಾ ಚುನಾವಣೆಯಲ್ಲಿ ಆದ ಅವಾಂತರ ಈ ಬಾರಿಯೂ ಆಗಲಿದೆ ಎನ್ನಲಾಗಿದೆ. ಅಂದರೆ ಬಿಜೆಪಿ ಈ ಲೋಕಸಭಾ ಚುನಾವಣೆಯಲ್ಲೂ ತನ್ನದೇ ತಪ್ಪಿನಿಂದಾಗಿ ಕೆಲವು ಸೀಟುಗಳನ್ನು ಕಳೆದುಕೊಳ್ಳಲಿದೆ ಎನ್ನಲಾಗುತ್ತಿದೆ.
ಬಿಜೆಪಿಗೆ Loksabha election ನಲ್ಲಿ ಬೀಳುತ್ತಾ ಪೆಟ್ಟು!
ಇದೀಗ ಇಂಡಿಯಾ ಟಿವಿ ಮತ್ತು ಸಿಎನ್ಎಕ್ಸ್ ನಡೆಸಿರುವ ಸಮೀಕ್ಷೆಯಲ್ಲಿ ಬಿಜೆಪಿಯು 22 ಸೀಟ್ ಗೆಲ್ಲಲಿದೆ. ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್ ಎರಡು ಸೀಟ್ಗಳಲ್ಲಿ ಗೆಲ್ಲಲಿದ್ದು,
ಮೈತ್ರಿ ಕೂಟ ಮತ್ತು ರಾಜ್ಯದಲ್ಲಿ 24 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎನ್ನಲಾಗಿದೆ. ಕಾಂಗ್ರೆಸ್ ಕಳೆದ ಲೋಕಸಭಾ ಚುನಾವಣೆ(Loksabha election)ಯಲ್ಲಿ ಕೇವಲ ಒಂದು ಸ್ಥಾನವನ್ನು ಗೆದ್ದಿತ್ತು ಆದರೆ ಈ ಬಾರಿ ಅವರು 4 ರಿಂದ 5 ಸೀಟು ಗೆಲ್ಲಬಹುದು ಎಂದು ಸಮೀಕ್ಷೆ ತಿಳಿಸಿದೆ.
ಮತ್ತೊಂದು ಕಡೆ ಟೈಮ್ಸ್ ನೌ ಮಾಡಿರುವ ಸಮೀಕ್ಷೆಯಲ್ಲಿ ಬಿಜೆಪಿಯು 21 ರಿಂದ 23 ಸೀಟು ಗೆಲ್ಲಲಿದೆ. ಜೆಡಿಎಸ್ ಒಂದು ಅಥವಾ ಎರಡು ಸೀಟುಗಳನ್ನು ಗೆಲ್ಲಲಿದೆ ಹಾಗೆ ಕಾಂಗ್ರೆಸ್ ನಾಲ್ಕರಿಂದ ಆರು ಸೀಟುಗಳಲ್ಲಿ ಗೆಲುವು ಸಾಧಿಸಬಹುದು ಎಂದು ಸಮೀಕ್ಷೆ ತಿಳಿಸಿದೆ.
ಒಕ್ಕಲಿಗರ ಮನವೊಲಿಕೆಗೆ ಜೆಡಿಎಸ್ ತಂತ್ರ!
ಈ ಬಾರಿ ರಾಜ್ಯದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಕೂಟ ಹೆಚ್ಚು ಒಗ್ಗಟ್ಟು ತೋರುತ್ತಿದ್ದು, ಹಳೆ ಮೈಸೂರು ಭಾಗದಲ್ಲಿ ಒಕ್ಕಲಿಗರು ಹೆಚ್ಚಿನ ಸಂಖ್ಯೆಯಲ್ಲಿದ್ದು,
ಇದು ಈ ಹಿಂದೆ ಜೆಡಿಎಸ್ ನ ಭದ್ರ ಕೋಟೆಯಾಗಿತ್ತು ಆದರೆ ಇತ್ತೀಚಿಗೆ ಕನ್ನಡದ ವಿಧಾನಸಭಾ ಚುನಾವಣೆಯಲ್ಲಿ ಡಿಕೆ ಶಿವಕುಮಾರ್ ಅವರು ಒಕ್ಕಲಿಗರ ಮನವೊಲಿಸಿ
ಬಹಳ ಮೈಸೂರು ಭಾಗದ ಒಕ್ಕಲಿಗರ ವೋಟುಗಳೆಲ್ಲ ಕಾಂಗ್ರೆಸ್ ಗೆ ಬರುವಂತೆ ಮಾಡುವುದರಲ್ಲಿ ಜಯಶಾಲಿಯಾಗಿದ್ದರು ಇದರಿಂದಾಗಿ ಈ ಭಾಗದಲ್ಲಿ ಈಗ ಕಾಂಗ್ರೆಸ್ ಅಲೆ ಇದೆ.
ಹಾಗಾಗಿ ಜೆಡಿಎಸ್ ಈ ಭಾಗವನ್ನು ಮತ್ತೆ ತನ್ನ ತೆಕ್ಕೆಗೆ ತೆಗೆದುಕೊಳ್ಳಬೇಕೆಂದು ಕಸರತ್ತು ಮಾಡುತ್ತಿದ್ದು, ಆ ಭಾಗದ ಬಿಜೆಪಿಯ ಅಭ್ಯರ್ಥಿಗಳ ಪರ ಹೆಚ್ಚಿನ ಪ್ರಚಾರ ಕಾರ್ಯ ಆರಂಭಿಸಿದೆ.
ಬಿಜೆಪಿ-ಜೆಡಿಎಸ್ ಒಗ್ಗಟ್ಟಿನಲ್ಲಿ ಬಲವಿದೆ!
ಸೀಟು ಹಂಚಿಕೆಯಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಮಧ್ಯೆ ಸಣ್ಣಪುಟ್ಟ ಬಿರುಕು ಬಂದರೂ ಕೂಡ ಅದನ್ನು ದೊಡ್ಡದಾಗಿ ಮಾಡದೆ ಒಗ್ಗಟ್ಟಿನಿಂದ ಕೆಲಸ ಮಾಡುತ್ತಿದ್ದು ಇದು ಬಿಜೆಪಿಗೆ ಹಾಗೂ ಜೆಡಿಎಸ್ ಗೆ ವರದಾನವಾಗಲಿದೆ.
ಇನ್ನು ಬಿಜೆಪಿ ವಿಧಾನಸಭೆಯಲ್ಲಿ ಸೀಟು ಹಂಚಿಕೆಯಲ್ಲಿ ಮಾಡಿದ ತಪ್ಪನ್ನು ಈಗಲೂ ಮಾಡುತ್ತಿದ್ದು ಇದರಿಂದಾಗಿ ಬಂಡಾಯದ ಬಿಸಿ ತಾಗುತ್ತಿದೆ.
ಆದರೂ ಕೂಡ ಬಿಜೆಪಿಯ ಗೆಲುವಿಗೆ ಮುಖ್ಯ ಕಾರಣವಾಗುವುದು ನರೇಂದ್ರ ಮೋದಿ ಹೆಸರು. ಸ್ಥಳೀಯ ಅಭ್ಯರ್ಥಿಯನ್ನು ನೋಡಿ ಮತ ನೀಡದಿದ್ದರೂ ಕೂಡ ಮೋದಿ ಮತ್ತೇ ಅಧಿಕಾರಕ್ಕೆ ಬರಲೆಂದು ಮತದಾರ ಬಿಜೆಪಿಗೆ ಮತ ಹಾಕುವುದರಲ್ಲಿ ಆಶ್ಚರ್ಯವಿಲ್ಲ.
Loksabha election ಕಾಂಗ್ರೆಸ್ ನ ಸಾಧಕ ಬಾಧಕಗಳೇನು?
ಮತ್ತೊಂದೆಡೆ ಕಾಂಗ್ರೆಸ್ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಜಯಗಳಿಸಿದ್ದರು ಕೂಡ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಜಯಗಳಿಸುವುದು ಸ್ವಲ್ಪ ಕಷ್ಟವಾಗಿದ್ದು ಅದರಲ್ಲೂ ಇದೀಗ ಟಿಕೆಟ್ ಹಂಚಿಕೆಯನ್ನು
ಸಚಿವರ ಹಾಗೂ ಶಾಸಕರ ಮಕ್ಕಳಿಗೆ ಹಾಗೂ ಸಂಬಂಧಿಕರಿಗೆ ಹೆಚ್ಚಿನ ಪ್ರಮಾಣದಲ್ಲಿ ನೀಡಿರುವುದು ಕುಟುಂಬ ರಾಜಕಾರಣಿಕೆ ಮತ್ತೊಂದು ಉದಾಹರಣೆಯಾಗಿದೆ.
ಇದಕ್ಕೆ ಮುಖ್ಯ ಕಾರಣ ಸಚಿವರು ಹಾಗೂ ಶಾಸಕರು ಹೆಚ್ಚಿನ ಕಾಳಜಿ ವಹಿಸಿ ತಮ್ಮ ಕುಟುಂಬದವರನ್ನು ಗೆಲ್ಲಿಸುತ್ತಾರೆ ಎಂದು ಕಾಂಗ್ರೆಸ್ ಈ ಪ್ಲಾನ್ ಮಾಡಿದೆ ಆದರೆ ಹತ್ತಾರು ವರ್ಷಗಳಿಂದ
ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರಿಗೆಈ ಕುಟುಂಬ ರಾಜಕಾರಣದಿಂದ ನೋವಾಗುವುದಂತು ನಿಜ. ಇದು ಕಾಂಗ್ರೆಸ್ ಗೆ ಹೊಡೆತ ಕೊಡಬಹುದು.
ಇನ್ನು ಸಿದ್ದರಾಮಯ್ಯರವರು ಮೈಸೂರು ಹಾಗೂ ಚಾಮರಾಜನಗರ ಕ್ಷೇತ್ರಗಳನ್ನು ಪ್ರತಿಷ್ಠೆಯ ಕ್ಷೇತ್ರಗಳಾಗಿ ತೆಗೆದುಕೊಂಡಿದ್ದು,
ಹೀಗಾಗಿ ರಾಜ್ಯದ ಬೇರೆ ಕಡೆಗಳಲ್ಲಿ ಅವರು ಪ್ರಚಾರಕ್ಕೆ ಹೋಗುವುದು ಕಷ್ಟ ಸಾಧ್ಯ. ಅವರ ಮುಖ್ಯ ಗಮನ ಈ ಎರಡು ಕ್ಷೇತ್ರಗಳ ಮೇಲಿದ್ದು, ಹೀಗಾಗಿ ಕಾಂಗ್ರೆಸ್ ಗೆ ಇದು ಸ್ವಲ್ಪ ಹಿನ್ನಡೆ ಆಗಬಹುದು.
ಇನ್ನು ಬಿಜೆಪಿಯ ಬಂಡಾಯ ಟಿಕೆಟ್ ಹಂಚಿಕೆ ಸಮಸ್ಯೆ ಹೀಗೆ ಹತ್ತು ಹಲವು ಸಮಸ್ಯೆಗಳಿದ್ದರೂ ಕೂಡ ಮೋದಿ,
ನಾಲ್ಕೈದು ಬಾರಿ ಬಂದು ರಾಜ್ಯದಲ್ಲಿ ದೊಡ್ಡ ಪ್ರಮಾಣದಲ್ಲಿ ಪ್ರಚಾರ ಮಾಡಿದರೆ ಖಂಡಿತವಾಗಿ ಅದು ಚುನಾವಣೆ ಮೇಲೆ ಪ್ರಭಾವ ಬೀರಿ ಫಲಿತಾಂಶದಲ್ಲಿ ಅತಿ ದೊಡ್ಡ ವ್ಯತ್ಯಾಸವಾಗಿ ಬಿಜೆಪಿಗೆ ಭರ್ಜರಿ ಜಯ ಸಿಗಬಹುದು.