Modi Arrival To Karnataka :: ರಾಜ್ಯದಲ್ಲಿ ಮೋದಿ ಪ್ರಚಾರ ಯಾವಾಗ ಶುರು! ಕರ್ನಾಟಕಕ್ಕೆ ಎಂದೆಂದು ಮೋದಿ ಆಗಮನ!!
ಈಗಾಗಲೇ ಲೋಕಸಭಾ ಚುನಾವಣೆಯ ಅಖಾಡ ಸಿದ್ಧವಾಗಿದ್ದು, ಎಲ್ಲಾ ಪಕ್ಷಗಳ ಹಾಗೂ ಪಕ್ಷೇತರ ಅಭ್ಯರ್ಥಿಗಳ ಪ್ರಚಾರ ಜೋರಾಗಿದೆ.
ಈ ಮಧ್ಯೆ ಸ್ಟಾರ್ ನಟರು ಹಾಗೂ ಪಕ್ಷದ ಹಿರಿಯ ನಾಯಕರು ಪಕ್ಷದ ಗೆಲುವಿಗಾಗಿ ರೋಡ್ ಶೋ ಗಳನ್ನು ಸಮಾವೇಶಗಳನ್ನು ಹಾಗೂ ಪ್ರಚಾರ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ನಮ್ಮ ಪಕ್ಷದ ಅಭ್ಯರ್ಥಿಗಳ ಪರ ಮತಯಾಚಿಸುತ್ತಾರೆ.
ಏಪ್ರಿಲ್ 14 ಕ್ಕೆ ಮೋದಿ ಆಗಮನ!
ಅದರಂತೆ ಈ ಬಾರಿ ರಾಜ್ಯದಲ್ಲಿ ಬಿಜೆಪಿ ಅಭ್ಯರ್ಥಿಗಳ ಗೆಲುವಿಗಾಗಿ ಪ್ರಧಾನಿ ನರೇಂದ್ರ ಮೋದಿಯವರು ರಾಜ್ಯದಲ್ಲಿ ಪ್ರಚಾರ ಕಾರ್ಯ ಕೈಗೊಳ್ಳಲಿದ್ದು,
ಇದೆ ಏಪ್ರಿಲ್ 14 ರಂದು ರಾಜಕ್ಕೆ ಆಗಮಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಹೌದು ಪ್ರಧಾನಿ ನರೇಂದ್ರ ಮೋದಿ ಅವರು ಏಪ್ರಿಲ್ 14ರಿಂದ ರಾಜ್ಯದಲ್ಲಿ ಪ್ರಚಾರ ಕಾರ್ಯ ಕೈಗೊಳ್ಳಲಿದ್ದು,
ಮೊದಲಿಗೆ ಚಿಕ್ಕಬಳ್ಳಾಪುರದಿಂದ ಪ್ರಚಾರವನ್ನು ಪ್ರಾರಂಭಿಸಲಿದ್ದು, ಅದಕ್ಕಾಗಿ ಚಿಕ್ಕಬಳ್ಳಾಪುರದಲ್ಲಿ ಏಪ್ರಿಲ್ 14 ರಂದು ದೊಡ್ಡ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.
ರಾಜ್ಯದಲ್ಲಿ ಮೋದಿಯವರು ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ನಗರದಲ್ಲೂ ಕೂಡ ಪ್ರಚಾರ ಕಾರ್ಯ ನಡೆಸಲಿದ್ದು,
ಮುಖ್ಯವಾಗಿ ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಬೃಹತ್ ರೋಡ್ ಶೋ ನಡೆಸಲು ರಾಜ್ಯ ಬಿಜೆಪಿ ಉದ್ದೇಶಿಸಿದೆ. ಈ ರೋಡ್ ಶೋ ಬ್ಯಾಟರಾಯನಪುರ ಹಾಗೂ ಹೆಬ್ಬಾಳ ಭಾಗಗಳಲ್ಲೂ ಕೂಡ ನಡೆಯಲಿದೆ.
ಮೊದಲ ದಿನ ಚಿಕ್ಕಬಳ್ಳಾಪುರದಲ್ಲಿ ಭಜ೯ರಿ ಸಮಾವೇಶ!
ಈಗಾಗಲೇ ನರೇಂದ್ರ ಮೋದಿ ಅವರು ದೇಶದ ವಿವಿಧ ಭಾಗಗಳಲ್ಲಿ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದು ಸಮಾವೇಶ ರೋಡ್ ಶೋ ರ್ಯಾಲಿ ಗಳನ್ನು ನಡೆಸುತ್ತಿದ್ದಾರೆ.
ಮತ್ತು ರಾಜ್ಯಕ್ಕೆ ಏಪ್ರಿಲ್ 14 ರಂದು ಮಧ್ಯಾಹ್ನ 3 ಗಂಟೆಗೆ ನರೇಂದ್ರ ಮೋದಿ ಆಗಮನವಾಗಲಿದ್ದು, ಅಂದಿನಿಂದ ಮೋದಿ ಅವರು ರಾಜ್ಯದಲ್ಲಿ ಪ್ರಚಾರ ಮಾಡಲಿದ್ದಾರೆ.
ಈಗಾಗಲೇ ರಾಜ್ಯ ಬಿಜೆಪಿ ಮೋದಿಯವರ ಪ್ರಚಾರದ ರೋಡ್ ಮ್ಯಾಪ್ ತಯಾರಿಸಿದ್ದು, ಬೆಂಗಳೂರು ಹಾಗೂ ಮಂಗಳೂರು ಭಾಗದಲ್ಲಿ ಮೋದಿ ಪ್ರಚಾರ ನಡೆಸಲಿದ್ದಾರೆ ಎನ್ನಲಾಗಿದೆ.
ಬಿಜೆಪಿ ಟಾಗೆ೯ಟ್ 28!
ಚುನಾವಣೆ ಘೋಷಣೆ ಆದಾಗಿನಿಂದ ಮೋದಿಯವರು 2 ನೇ ಬಾರಿಗೆ ರಾಜ್ಯಕ್ಕೆ ಆಗಮಿಸುತ್ತಿದ್ದು, ಪ್ರಚಾರ ಕಾಯ೯ವನ್ನು ಭಜ೯ರಿಯಾಗಿ ನಡೆಸಲಿದ್ದಾರೆ.
ಅಲ್ಲದೇ ಇತ್ತೀಚೆಗೆ ಅಮಿತ್ ಶಾ ರವರು ಕೂಡ ರಾಜ್ಯಕ್ಕೆ ಭೇಟಿ ನೀಡಿ ರಾಜ್ಯದ ನಾಯಕರಿಗೆ ಚುನಾವಣಾ ತಂತ್ರಗಾರಿಕೆ ಬಗ್ಗೆ ಪಾಠ ಮಾಡಿದ್ದಾರೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ 25 ಸೀಟುಗಳಲ್ಲಿ ಗೆದ್ದು ಬೀಗಿದ್ದ ಬಿಜೆಪಿ ಈ ಬಾರಿ ರಾಜ್ಯದ 28 ಕ್ಷೇತ್ರಗಳಲ್ಲೂ ವಿಜಯ ಸಾಧಿಸುವ ನಿಟ್ಟಿನಲ್ಲಿ ಕಸರತ್ತು ಮಾಡುತ್ತಿದ್ದು,
ಈಗಾಗಲೇ ಜೆಡಿಎಸ್ ನೊಂದಿಗೆ ಮೈತೇರ ಮಾಡಿಕೊಂಡಿದೆ. ವಿಧಾನಸಭಾ ಚುನಾವಣೆಯಲ್ಲಿ ಹೀನಾಯ ಸೋಲು ಕಂಡಿದ್ದರೂ ಕೂಡ ಲೋಕಸಭೆಯಲ್ಲಿ ಮೋದಿ ಅಲೆಯ ಮೂಲಕ ಶತಾಯಗತಾಯ 28 ಕ್ಷೇತ್ರಗಳಲ್ಲೂ ಕೂಡ ಬಿಜೆಪಿ ವಿಜಯ ಸಾಧಿಸಬೇಕೆಂಬ ಪಣ ತೊಟ್ಟಿದೆ.