ಕೇರಳದ ದೇವಸ್ಥಾನ ಮಂಡಳಿಗಳು ಈ ಹೂವನ್ನು ಪೂಜೆಗೆ ನಿಷೇಧಿಸಲು ಕಾರಣವೇನು? ಇಲ್ಲಿದೆ ದೇವ ಕಣಗಲೆ ಕುತೂಹಲಕಾರಿ ಮಾಹಿತಿ!!

ಕೇರಳದ ದೇವಸ್ಥಾನ ಮಂಡಳಿಗಳು ಈ ಹೂವನ್ನು ಪೂಜೆಗೆ ನಿಷೇಧಿಸಲು ಕಾರಣವೇನು? ಇಲ್ಲಿದೆ ದೇವ ಕಣಗಲೆ ಕುತೂಹಲಕಾರಿ ಮಾಹಿತಿ!!

ಕೇರಳದ ದೇವಸ್ಥಾನ ಮಂಡಳಿಗಳು ಈ ಹೂವನ್ನು ಪೂಜೆಗೆ ನಿಷೇಧಿಸಲು ಕಾರಣವೇನು? ಇಲ್ಲಿದೆ ದೇವ ಕಣಗಲೆ ಕುತೂಹಲಕಾರಿ ಮಾಹಿತಿ!!

ಸಾಂಪ್ರದಾಯಿಕ ಆಚರಣೆಗಳಿಗೆ ಹೆಸರಾದ ದೇವನಾಡು ಕೇರಳದಲ್ಲಿ ಒಂದು ವಿಚಿತ್ರ ಆದೇಶ ಹೊರಬಿದ್ದಿದೆ. ದೇವ ಪುಷ್ಪ, ದೇವ ಕಣಗಲೆ ಇನ್ನು ದೇವರ ನಾಡಿನ ದೇವಸ್ಥಾನಗಳಲ್ಲಿ ಬಳಸುವಂತಿಲ್ಲ.

ಕೇರಳದ ಎರಡು ಪ್ರತಿಷ್ಠಿತ ದೇವ ಮಂಡಳಿಗಳಾದ ಟ್ರಾವನ್ಕುರ್ ಆಡಳಿತ ಮಂಡಳಿ ಮತ್ತು ಮಲಬಾರ್ ಆಡಳಿತ ಮಂಡಳಿಗಳು ದೇವಸ್ಥಾನಗಳಲ್ಲಿ ದೇವ ಕಣಗಿಳೆಯ ಬಳಕೆಯ ಮೇಲೆ ಸಂಪೂರ್ಣ ನಿರ್ಬಂಧನೆ ಹೇರಿದೆ.

ಈ ದೇಹ ಕಣಿವೆ ಕೇಳದಲ್ಲಿ ಹುಟ್ಟಿಸಿರುವ ಭಯವಾದರು ಏನು? ಇದರ ಮೇಲೆ ಬಂದ ಮೇಲೆ ನಿರ್ಬಂಧನೆ ಹೇರಿಸುವುದಾದರೂ ಏಕೆ?

ದೇವಕಣಗಿಲೆಯ ಕೆಲವು ವಿಶೇಷತೆಗಳು/ ಗುಣಗಳು:

ಹೋಲಿಯಾoಡರ್,ದೇವರ ಕಣಗಲೇ,ಹರಳೆ ಹೂವು, ಹೈಮಾರ್ ಎಂಬ ವಿವಿಧ ಹೆಸರುಗಳಲ್ಲಿ ಕರೆಯಲ್ಪಡುವ ಈ ಹೂವು ಆಯುರ್ವೇದದಲ್ಲಿ ತನ್ನದೇ ಆದ ಸ್ಥಾನವನ್ನು ಹೊಂದಿದೆ.

ಈ ಗಿಡದ ಬೇರುಗಳು ಮಧುಮೇಹ,ರಕ್ತದ ಒತ್ತಡ, ಅಲ್ಸರ್, ಮುಂತಾದ ಹಲವಾರು ಕಾಯಿಲೆಗಳನ್ನು ನಿವಾರಿಸುವ ಶಕ್ತಿಯನ್ನು ಹೊಂದಿದೆ.

ಅಷ್ಟೇ ಅಲ್ಲದೆ ಆಂಟಿ ಕ್ಯಾನ್ಸರ್ ಗುಣವನ್ನು ಸಹ ಈ ಗಿಡ ಹೊಂದಿದೆ. ರಸಮಾಣಿಕ್ಯ ಎಂಬ ಚರ್ಮರೋಗ ನಿವಾರಿಸುವ ಔಷಧಿಯನ್ನು ಸಹ ಇದರಿಂದ ತಯಾರಿಸಲಾಗುತ್ತದೆ.

ಈ ಗಿಡದ ಬೇರು ಸೊಪ್ಪುನ್ನು ಕಡಿಮೆ ಬಳಸಿ ಅದಕ್ಕೆ ಬೇಕಾದ ಅಂಶಗಳನ್ನು ಹಾಕಿ ಕುದಿಸಿ ಕಷಾಯ ಮಾಡಿಕೊಂಡು ಕುಡಿಯುವುದು ಉಂಟು.

ಈ ಗಿಡದದಿಂದ ಹಲವಾರು ಉಪಯೋಗಗಳಿದ್ದರೂ ಸಹ, ಇದನ್ನು ನೇರವಾಗಿ ಅವೈಜ್ಞಾನಿಕವಾಗಿ ಸೇವಿಸಿದರೆ ಪ್ರಾಣಕ್ಕೆ ಅಪಾಯ ತಪ್ಪಿದಲ್ಲ.

ಈ ಗಿಡ ಔಷದಿಯ ಗುಣವನ್ನು ಹೊಂದಿದೆ ಎಂದು ಬೇಕಾದ ರೀತಿ ತಿಂದರೆ, ತಿಂದ ಮನುಷ್ಯನ ಹೃದಯ ಅನಿಮಯತವಾಗಿ ವರ್ತಿಸುತ್ತದೆ, ರಕ್ತದ ಒತ್ತಡವು ಕಡಿಮೆಯಾಗುವ ಸಾಧ್ಯತೆ ಇದೆ.

ಈ ಗಿಡದ ಎಲೆ ಅಥವಾ ಬೇರೆಗಳನ್ನು ನೇರವಾಗಿ ತಿಂದ ಮನುಷ್ಯ ನಿದ್ರಾಣವಾಗುವ ಸಾಧ್ಯತೆಯೂ ಇದೆ. ಜೊತೆಗೆ ಹೊಟ್ಟೆ ನೋವು ವಾಂತಿ ಭೇದಿ ಮುಂದಾದ ಸಮಸ್ಯೆಗಳನ್ನು ಅನುಭವಿಸಬೇಕಾಗುತ್ತದೆ.

ಒಳ್ಳೆಯದೆಂದು ಅವೈಜ್ಞಾನಿಕವಾಗಿ ಸೇವಿಸಿದರೆ ಅಪಾಯ ತಪ್ಪಿದ್ದಲ್ಲ. ಏಕೆಂದರೆ ಅತಿಯಾದರೆ ಅಮೃತವು ಸಹ ವಿಷವಲ್ಲವೇ?

 ದೇವರಕಣ್ಣಗಲೇ ದೇವನಾಡಿನಲ್ಲಿ ಮಾಡಿದ್ದಾದರೂ ಏನು?

ಕೆಲವು ದಿನಗಳ ಹಿಂದೆ ಕೇರಳದಲ್ಲಿ ಒಂದು ವಿಚಿತ್ರ ಘಟನೆ ಸಂಭವಿಸಿತ್ತು.ಕೇರಳದ ಪಟ್ಟಣಂಟಿಟ್ಟ ಎಂಬ ಜಿಲ್ಲೆಯ ಒಂದು ಹಳ್ಳಿ.

ಆ ಹಳ್ಳಿಯಲ್ಲಿ ಒಂದು ಹಸು ಮತ್ತು ಕರು ಸಾವನ್ನಪ್ಪಿದವು.ಈ ಹಸು ಮತ್ತು ಕರುವಿನ ಸಾವಿನ ಕಾರಣವನ್ನು ಹುಡುಕುತ್ತಾ ಹೊರಟಾಗ ಕಂಡುಬಂದದ್ದೇನೆಂದರೆ

ಈ ಹಸು ಕರು ಒಂದು ಹಸಿರು ಗಿಡವನ್ನು ಸೇವಿಸಿ ಸಾವನ್ನಪ್ಪಿದೆ. ಈ ವಿಷಯವನ್ನು ಯಾರೋ ಒಬ್ಬ ಮನುಷ್ಯ ಸ್ಥಳೀಯರಿಗೆತಿಳಿಸಿದ್ದನು.

ಅ ಗಿಡ ಯಾವುದೆಂದು ತಿಳಿದ ಜನರು ಬೆಚ್ಚುಬೆರಗಾಗಿ ಹೋದರು.

ಈ ಘಟನೆ ನಡೆದ ಕೆಲವೇ ದಿನಗಳಲ್ಲಿ ಅಳಪ್ಪುಜದ ಪಿಳ್ಳಿಪಾಡ್ ಎಂಬ ಊರಿನಲ್ಲಿ 24 ವರ್ಷದ ಯುವತಿ ಒಬ್ಬಳು ಲಂಡನ್ ಗೆ ಪ್ರಯಾಣ ಮಾಡಬೇಕಾಗಿತ್ತು.

ಅದೇಕಾರಣ ಅವಳು ಕೊಚ್ಚಿ ಏರ್ಪೋರ್ಟ್ಗೆಗೆ ತೆರಳಿದ್ದಳು. ಮನೆಯವರಿಗೆ ಎಲ್ಲಾ ಬಾ ಹೇಳಿ ಇನ್ನೇನು ಫ್ಲೈಟ್ ಹತ್ತಬೇಕು ಎನ್ನುವಷ್ಟರಲ್ಲಿ ಅಚಾನಕ್ಆಗಿ ತಲೆ ತಿರುಗಿ ಬಿದ್ದಳು.

ಕೆಲ ದಿನಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲು ಸಹ ಆಯಿತು, ಆದರೆ ಚಿಕಿತ್ಸೆ ಫಲಿಸದೆ ಅವಳು ಸಾವನ್ನಪ್ಪಿದಳು. ಇವಳು ಅಚಾನಕ್ಕಾಗಿ ಕುಸಿದು ಬೀಳಲು ಕಾರಣವೇನು ಎಂದು ತಿಳಿಯುತ್ತ ಹೋದಾಗ ತಿಳಿದುಬಂದಿದ್ದೇನೆಂದರೆ,

ಇವಳು ಒಂದು ದಿನ ಮೊಬೈಲ್ ನಲ್ಲಿ ಮಾತಾಡುತ್ತ ಮಾತಾಡುತ್ತಾ ತನ್ನ ಮನೆಯ ಮುಂದೆ ಇದ್ದ ಒಂದು ಗಿಡದ ಸೊಪ್ಪನ್ನು ತಿಂದಿದ್ದಳು.

ಇದನ್ನು ತಿಂದ ಹುಡುಗಿಗೆ ವಾಂತಿ-ಬೇದಿ ಆಗಿ ಚಿಕಿತ್ಸೆ ಕೊಟ್ಟಾಗ ಸುಧಾರಿಸಿದಂತೆ ಆದಾಗ ಲಂಡನ್ನಿಂದ ನರ್ಸ್ ಕೆಲಸಕ್ಕೆ ಕಾಲ್ ಬಂದಿತ್ತು.

ಅನಿವಾರ್ಯದಿಂದ ಅವಳು ಲಂಡನ್ ಗೆ ಹೋಗಬೇಕಾಗಿ ಬಂತು. ಆದರೆ ವಿಧಿಯಲ್ಲಿ ಬೇರೆಯೇ ಯೋಜನೆಯನ್ನು ಬರೆದಿತ್ತು.

ಈ ಹಸು-ಕರು ಸಾವಿನ ವಿಷಯಕ್ಕೂ ನರ್ಸ್ ಸಾವಿನ ವಿಷಯಕ್ಕೂ ಕೇರಳದಲ್ಲಿ ದೇವ ಕಣಗಿಳೆ ಬಳಕೆಗೆ ನಿರ್ಬಂಧ ಹಾಕಲು ಸಂಬಂಧವೇನು? ಎಂದು ಯೋಚಿಸುತ್ತಿದ್ದೀರಾ?

ಈ ಮೇಲಿನ ಎರಡು ಅಪಾಯಗಳಿಗೆ ಕಾರಣವಾದ ಗಿಡ ಬೇರೆ ಯಾವುದು ಅಲ್ಲ ದೇವ ಪುಷ್ಪ ಎಂದು ಕರೆಸಿಕೊಳ್ಳುವ ದೇವಕಣಗಿಳೆ ಹೂವು.

 ದೇವರಿಗೆ ಈ ಹೂವನ್ನು ಮುಂಚೆ ಅರ್ಪಿಸುತ್ತಿದ್ದ ಕಾರಣವೇನು?

ಔಷದಿಯ ಗುಣವನ್ನು ಹೊಂದಿರುವ ಕೆಲವಷ್ಟು ಸಸ್ಯಗಳು ನಾಶವಾಗಬಾರದೆಂದು ನಮ್ಮ ಪೂರ್ವಜರು, ಆ ಗಿಡಗಳ ಹೂವುಗಳನ್ನು ದೇವರಿಗೆ ಅರ್ಪಿಸಲು ಆರಂಭಿಸಿದರು

ಈ ಕಾರಣದಿಂದಾಗಿ ಬೇಕಾದಾಗ ವೈದ್ಯರಿಗೆ ಈ ಸಸಿಗಳು ಸುಲಭವಾಗಿ ದೊರಕುವಂತಾಯಿತು. ಶಿವನಿಗೆ ಅತ್ಯಂತ ಪ್ರಿಯವಾದ ತುಂಬೆ ಹೂವು,

ಯಕ್ಕೆ, ಕಾಶಿ ಕಣಗಲೆ,ಕಣಗಲೆ ಈ ಎಲ್ಲ ಗಿಡಗಳಲ್ಲಿ ದಿವ್ಯ ಔಷಧಿಯ ಗುಣಗಳು ಹಡಗಿಕೊಂಡಿದೆ.ಔಷಧಿಯ ಗುಣವನ್ನು ಹೊಂದಿರುವ ಈ ಗಿಡ ನಾಶವಾಗಬಾರದೆಂಬ ಕಾರಣದಿಂದಲೇ ಇದನ್ನು ಸಹ ದೇವರಿಗೆ ಅರ್ಪಿಸುತ್ತಿದ್ದರು.

ಇದರಿಂದ ಈ ಗಿಡಗಳ ಸಂತತಿಗಳನ್ನು ಕಾಪಾಡುವುದಸ್ಟೇ ಅಲ್ಲದೆ ಗ್ರಾಮದ ಆಯುರ್ವೇದ ಪಂಡಿತರಿಗೆ ಬೇಕಾದಾಗ ಈ ಸಸ್ಯಗಳ ದೊರಕುವಂತೆ ನೋಡಿಕೊಂಡಿದ್ದರು.

 ಕೇರಳದಲ್ಲಿ ಈ ಗಿಡದ ಬಳಕೆಗೆ ನಿರ್ಬಂಧ ಹೇರಿಸಲು ಮುಖ್ಯ ಕಾರಣವೇನು?

ಸಕ್ಕರೆಯಿಂದ ದಯಾಬಿಟೀಸ್ ಬರುತ್ತದೆ, ಪ್ಲಾಸ್ಟಿಕ್ ಬಳಕೆಯಿಂದ ಹಲವಾರು ಸಮಸ್ಯೆಗಳು ಪರಿಸರಕ್ಕೂ ಹಾಗೂ ಮನುಷ್ಯನ ಆರೋಗ್ಯಕ್ಕೂ ಉಂಟಾಗುತ್ತಿದೆ.

ಎಂಬ ವಿವಿಧ ಮುಖ್ಯ ವಿಷಯ ತಿಳಿದಿದ್ದರು ಅದನ್ನು ಉಪಯೋಗಿಸಿ ಪ್ರಸಾದವನ್ನು ಕೊಡುವ ದೇವಸ್ಥಾನಗಳು, ಕಣಗಲೆ ಹೂವನ್ನು ನಿಷೇಧಿಸಿರುವುದು ಒಪ್ಪುವ ವಿಷಯವಲ್ಲ.

ಟ್ರಾವನ್ಕುರ್ ಆಡಳಿತ ಮಂಡಳಿಯ ಅಡಿಯಲ್ಲಿ ಬರುವ-1248 ದೇವಸ್ಥಾನಗಳು, ಮಲಬಾರ್ ಆಡಳಿತ ಮಂಡಳಿಯ ಅಡಿಯಲ್ಲಿ ಬರುವ 1400 ದೇವಸ್ಥಾನಗಳು,

ಕಣಗಲೆ ಹೂವನ್ನು ಬಳಸಿ ಪೂಜೆ ಮಾಡುತ್ತಿಲ್ಲ. ಕೊಚ್ಚಿ ಅಲ್ಲಿ ಸಾವನ್ನಪ್ಪಿದ ನರ್ಸ್, ದೇವಸ್ಥಾನದಲ್ಲಿ ಕೊಟ್ಟ ಕಣಗಲೆ ಹೂವನ್ನು ಸೇವಿಸಿ ಎಂದು ಅಪಪ್ರಚಾರವಾಗಿದೆ.

ಈ ಅಪಪ್ರಚಾರದ ಕಾರಣದಿಂದ ಕೇರಳದಲ್ಲಿ ಈ ಗಿಡದ ಬಳಕೆಗೆ ನಿರ್ಬಂಧ ಏರಿಸಿರಬಹುದು.

ಯಾವುದೇ ವಿಷಯ ನಡೆದರು ಇದರಿಂದೇ ಸಂಚು ಇದೆಯಾ?ಎಂದು ಯೋಚಿಸುತ್ತಾ ಹೋದರೆ ಈ ವಿಷಯದ ಕಾರಣ ತಿಳಿಯುವುದು ಕಷ್ಟ.ದೇವ ಗಿಡವನ್ನು ವಿಷ ಗಿಡವಾಗಿ ಬಿಂಬಿಸುತ್ತಿರುವುದು ನಿಜಕ್ಕೂ ಸೂಚನೀಯವಾದ ವಿಷಯವಾಗಿದೆ.

ದೇವ ಕಣಗಲೆ ಎಂದು ಕರೆಸಿಕೊಳ್ಳಳು ಮುಖ್ಯ ಕಾರಣ, ಇದರ ಔಷಧಿಯ ಗುಣಗಳು. ಯಾರೋ ಈ ಗಿಡದ ಬಳಕೆಗೆ ನಿರ್ಬಂಧ ಹೇರಿಸಿದರೆಂದು ನಾವು ಮನೆಯ ಮುಂದೆ ಇರುವ ಗಿಡ ಕೀಳುವುದರಲ್ಲಿ ಅರ್ಥವಿಲ್ಲ.

ಕೇರಳದ ದೇವ ಮಂಡಳಿಗಳು ಈ ಗಿಡದ ಬಳಕೆಗೆ ನಿರ್ಬಂಧ ಹೇರಲಿ, ಆದರೆ ನಾವು ಅದನ್ನು ಸರಿಯಾಗಿ ಉಪಯೋಗಿಸಿ, ಸದುಪಯೋಗ ಪಡೆದುಕೊಳ್ಳೋಣ.

ಧನ್ಯವಾದಗಳು

Leave a Reply

Your email address will not be published. Required fields are marked *

You cannot copy content of this page