5 ವರ್ಷದಲ್ಲಿ ಈ ಸಂಸದನ ಆಸ್ತಿ 30 ಪಟ್ಟು ಹೆಚ್ಚಳ!ಎಲ್ಲಿಂದ ಬರುತ್ತೆ ಇಷ್ಟೊಂದು ಆದಾಯ!
ರಾಜ್ಯದಲ್ಲಿ ಲೋಕಸಭಾ ಮೊದಲ ಹಂತದ ಚುನಾವಣೆಗೆ ಈಗಾಗಲೇ ನಾಮಪತ್ರ ಸಲ್ಲಿಕೆ ದಿನಾಂಕ ಕೊನೆಯ ಆಗಿದ್ದು ಎರಡನೇ ಹಂತದ ಚುನಾವಣೆಗೆ ನಾಮಪತ್ರ ಸಲ್ಲಿಸಲು ನಾಳೆ ಕೊನೆಯ ದಿನವಾಗಿದೆ.
ಹೀಗೆ ನಾಮಪತ್ರ ಸಲ್ಲಿಸುವಾಗ ಅಭ್ಯರ್ಥಿಗಳು ಚುನಾವಣಾ ಆಯೋಗಕ್ಕೆ ಆಫಿಡವಿಟ್ ಒಂದನ್ನು ಸಲ್ಲಿಸುತ್ತಾರೆ ಇದರಲ್ಲಿ ಅಭ್ಯರ್ಥಿಯು ಎಷ್ಟು ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ ಎಷ್ಟು ಸಾಲ ಹಾಗೂ ಆದಾಯವನ್ನು ಹೊಂದಿದ್ದಾರೆ ಎಂದು ಘೋಷಿಸಿಕೊಳ್ಳಬೇಕು.
4.10 ಕೋಟಿಯ ಒಡೆಯ ಈ ಯುವ ಸಂಸದ!
ಹೌದು ಇದು ಚುನಾವಣಾ ಆಯೋಗದ ನಿಯಮವಾಗಿದ್ದು ಅಭ್ಯರ್ಥಿಯು ಚುನಾವಣೆಗೆ ನಿಲ್ಲುವ ಮುನ್ನ ತನ್ನ ಬಳಿ ಆಸ್ತಿ ಎಷ್ಟು ಇದೆ ಎಂಬುದನ್ನು ಘೋಷಿಸಿಕೊಳ್ಳುತ್ತಾರೆ.
ಇದೇ ರೀತಿ ಬೆಂಗಳೂರು ದಕ್ಷಿಣ ಲೋಕಸಭಾ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ತೇಜಸ್ವಿ ಸೂರ್ಯ ರವರು ತಮ್ಮ ಆಸ್ತಿಯನ್ನು ಘೋಷಿಸಿಕೊಂಡಿದ್ದು, ಪ್ರಸ್ತುತ ಅವರ ಆಸ್ತಿ 4.10 ಕೋಟಿ ಇದೆ ಎಂದು ಅಫಿಡವಿಟ್ ನಲ್ಲಿ ತಿಳಿಸಿದ್ದಾರೆ.
ಐದೇ ವಷ೯ದಲ್ಲಿ 30 ಪಟ್ಟು ಆಸ್ತಿ ಗಳಿಕೆ!
ಆದರೆ 2019ರಲ್ಲಿ ಮೊದಲ ಬಾರಿಗೆ ತೇಜಸ್ವಿ ಸೂರ್ಯ ರವರು ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಮುನ್ನ ಘೋಷಿಸಿಕೊಂಡ ಆಸ್ತಿ ಕೇವಲ 13.46 ಲಕ್ಷ ರೂಪಾಯಿಗಳು.
ಆದರೆ ಇದೀಗ ಕೇವಲ ಐದೇ ವರ್ಷಗಳಲ್ಲಿ ತೇಜಸ್ವಿ ಸೂರ್ಯ ರವರ ಆಸ್ತಿ 30 ಪಟ್ಟು ಹೆಚ್ಚಾಗಿದೆ. ಕೇವಲ ಐದೇ ವರ್ಷಗಳಲ್ಲಿ 30 ಪಟ್ಟು ಆಸ್ತಿ ಗಳಿಸಿರುವ ತೇಜಸ್ವಿ ಸೂರ್ಯ ರವರು ತಮ್ಮ ಬಳಿ ಯಾವುದೇ ಸ್ವಂತ ಕಾರು, ಬೈಕ್ ಹಾಗೂ ಮನೆ ಹೊಂದಿಲ್ಲ ಎಂದು ತಿಳಿಸಿದ್ದಾರೆ.
ಎಲ್ಲಿಂದ ಬಂತು ಇಷ್ಟೊಂದು ಆದಾಯ!
ಕೇವಲ ಐದೇ ವರ್ಷಗಳಲ್ಲಿ 30 ಪಟ್ಟು ಆಸ್ತಿ ಹೆಚ್ಚಾಗಲು ತೇಜಸ್ವಿ ಸೂರ್ಯ ರವರು ಆದಾಯದ ಮೂಲವೇನು ಎಂಬ ಪ್ರಶ್ನೆ ಎಲ್ಲರಿಗೂ ಸಾಮಾನ್ಯವಾಗಿ ಕಾಡುತ್ತದೆ ಆದರೆ ಪ್ರಸ್ತುತ ತೇಜಸ್ವಿ ಸೂರ್ಯ ರವರು ತಿಳಿಸಿರುವಂತೆ
ಅವರು ಮ್ಯೂಚುವಲ್ ಫಂಡ್ ಹಾಗೂ ಇಕ್ವಿಟಿಗಳಲ್ಲಿ 1,99,44,863 ರೂಗಳನ್ನು ಹೂಡಿಕೆ ಮಾಡಿದ್ದಾರೆ. 1,79,31,750 ಗಳನ್ನು ಮಾರುಕಟ್ಟೆ ಮೌಲ್ಯದ ಷೇರುಗಳನ್ನು ಹೊಂದಿದ್ದಾರೆ.
ಹಾಗೂ 25,28,446 ಲಕ್ಷದ ವಿಮೆ ಪಾಲಸಿಗಳನ್ನು ಮಾಡಿಸಿದ್ದಾರೆ. 80000 ನಗದು ಅವರ ಬಳಿಯಿದ್ದು, ಉಳಿದಂತೆ 5,45,430 ರೂ. ಗಳ ಠೇವಣಿ ಹೊಂದಿದ್ದಾರೆ ಎಂದು ಅಫಿಡವಿಟ್ ನಲ್ಲಿ ಆಸ್ತಿ ಘೋಷಣೆ ಮಾಡಿಕೊಂಡಿದ್ದಾರೆ.
ಈ ಮೂಲಕ 5 ವಷ೯ಗಳಲ್ಲಿ 30 ಪಟ್ಟು ಆಸ್ತಿ ಹೆಚ್ಚಾಗಲು ಮುಖ್ಯ ಕಾರಣ ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಷೇರುಗಳ ಮೌಲ್ಯ ಹೆಚ್ಚಾಗುತ್ತಿದ್ದು,
ತೇಜಸ್ವಿ ಸೂಯ೯ರವರು ಹೆಚ್ಚಿನ ಹಣವನ್ನು ಷೇರು ಮಾರುಕಟ್ಟೆ ಹಾಗೂ ಮ್ಯೂಚುವಲ್ ಫಂಡುಗಳಲ್ಲಿ ತೊಡಗಿಸಿರುವುದರಿಂದ ಅವರು 30 ಪಟ್ಟು ಹೆಚ್ಚಿನ ಆದಾಯವನ್ನು ಹೊಂದಲು ಸಾಧ್ಯವಾಗಿದೆ ಎಂದು ಗೊತ್ತಾಗುತ್ತದೆ.